Advertisement
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಜೆ.ಆರ್. ಲೋಬೋ, ಬಿ.ಎ. ಮೊದಿನ್ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿ. ಪಂ. ಸಿಇಒ ಡಾ| ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರಿದ್ದರು.
ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ನೌಕರರಿಗೆ ನೀಡುವ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಚಿವ ಯು.ಟಿ. ಖಾದರ್, ಮೇಯರ್ ಕವಿತಾ ಸನಿಲ್ ಪ್ರದಾನ ಮಾಡಿದರು. ಟಿ.ಎನ್. ರೇವತಿ, (ಲೆಕ್ಕಾಧಿಕಾರಿ, ದ.ಕ. ಜಿ.ಪಂ., ಮಂಗಳೂರು), ಗೋಕುಲ್ ದಾಸ್ ನಾಯಕ್(ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು), ಡಾ| ಗುರುಮೂರ್ತಿ ಎ. (ಸಹಾಯಕ ನಿರ್ದೇಶಕರು, ಉಪನಿರ್ದೇಶಕರ ಕಚೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಮಂಗಳೂರು) ಎನ್. ಶಿವಪ್ರಕಾಶ್ (ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ ) ಬಿ. ಶೇಶಪ್ಪ ಬಂಬಿಲ (ದ್ವಿತೀಯ ದರ್ಜೆ ಸಹಾಯಕರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರ), ಲಕ್ಷ್ಮಣ ಪೂಜಾರಿ (ಕಿರಿಯ ಅಭಿಯಂತರರು, ಮಹಾನಗರಪಾಲಿಕೆ ಅವರು ಪ್ರಶಸ್ತಿ ಸ್ವೀಕರಿಸಿದರು.
Related Articles
ಮುಖ್ಯಮಂತ್ರಿ ಹರೀಶ್ ಸಾಂತ್ವಾನ ಯೋಜನೆಯಲ್ಲಿ ಅಪಘಾತದ ಸಂದರ್ಭ ಜೀವರಕ್ಷಣೆ ಮಾಡಿದವರಿಗೆ ನೀಡುವ ಪ್ರಶಸ್ತಿಯನ್ನು ಬೆಳ್ತಂಗಡಿ ಲಾಯಿಲದ ಅಬ್ದುಲ್ ಹಮೀದ್ ಹಾಗೂ ನಂದಾವರದ ಪ್ರಕಾಶ್ ಮರಾಠೆ ಅವರಿಗೆ ಪ್ರದಾನ ಮಾಡಲಾಯಿತು.
Advertisement
ನವಕರ್ನಾಟಕ ವಿಷನ್ ಸ್ಪರ್ಧೆನವಕರ್ನಾಟಕ ವಿಷನ್ 2018 ಅಂಗವಾಗಿ ಸರಕಾರದದ ವತಿಯಿಂದ ಆಯೋಜಿಸಿದ್ದ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೊಂತಿ ಮೇರಿ ಡಿ’ಸೋಜಾ (ಮೂಡಬಿದಿರೆ ಮಹಾವೀರ ಕಾಲೇಜು)ಹಾಗೂ ಕನ್ನಡ ಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ನವೀನ್ ಕುಮಾರ್ (ಮಂಗಳೂರು ರಥಬೀದಿ ಸರಕಾರಿ ಪ್ರಥಮದರ್ಜೆ ಕಾಲೇಜು) ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪೂಜಾಶ್ರೀ (ಸುಳ್ಯ ಸೈಂಟ್ ಜೋಸೆಫ್ ಅ.ಮಾ. ಶಾಲೆ) ಹಾಗೂ ಅಮಿತ್ ಎಂ. (ಕೆನರಾ ಹಿ.ಪ್ರಾ. ಶಾಲೆ ) ಅವರಿಗೆ ಪ್ರದಾನ ಮಾಡಲಾಯಿತು. ಆಕರ್ಷಕ ಕಾರ್ಯಕ್ರಮ
ನಗರದ ಕೇರಳ ಸಮಾಜಂ ಆ.ಮಾ. ಶಾಲೆ ಮಂಗಳೂರು, ಸೈಂಟ್ ಮೇರಿಸ್ ಆಂಗ್ಲ.ಕನ್ನಡ ಪ್ರೌಢ ಶಾಲೆ ಫಳ್ನೀರ್, ಇನ್ಫೆಮ್ ಟ್ ಜೀಸಸ್ ಜಾಯ್‌ಲ್ಯಾಂಡ್ ಶಾಲೆ ಬೋಳಾರ, ಕಾಸ್ಸಿಯಾ ಪ್ರೌಡಶಾಲೆ ಜೆಪ್ಪು, ಸೈಂಟ್ ರೀಟಾ ಪ್ರೌಢಶಾಲೆ ಜೆಪ್ಪು, ಸೈಂಟ್ ಜೆರೋಸಾ ಪ್ರೌಢ ಶಾಲೆ ಹಾಗೂ ಸೈಂಟ್ ಜೆರೋಸಾ ಆ.ಮಾ. ಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಡೊಂಗರಕೇರಿ ಕೆನರಾ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ, ದೇಶ ಭಕ್ತಿಗೀತೆ ಹಾಡಿದರು. ಆಕರ್ಷಕ ಪಥಸಂಚಲನ
ಒಟ್ಟು 21 ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಕೆಎಸ್ ಆರ್‌ಪಿ, ಸಿಎಆರ್, ಸಿವಿಲ್ ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆ, ಅರಣ್ಯ ರಕ್ಷಣ ಪಡೆ, ಎನ್‌ಸಿಸಿ ಆರ್ಮಿ, ನೇವಲ್, ಏರ್ ವಿಂಗ್ ಹಿರಿಯ ಮತ್ತು ಕಿರಿಯರ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಭಾರತ ಸೇವದಲ, ರೆಂಜರ್ ಮತ್ತು ರೋವರ್ , ರಸ್ತೆ ಸುರಕ್ಷತಾ ದಳ, ಬಲ್ಮಠ, ಕಾವೂರು ಪ್ರಥಮ ದರ್ಜೆ ಕಾಲೇಜು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಸಿಎಆರ್ ಆರ್‌ಪಿಐ ವಿಟ್ಠಲ ಶಿಂಧೆ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ನೀಡುವ ಪ್ರಶಸ್ತಿಯಲ್ಲಿ ಎನ್‌ಸಿಸಿ ನೇವಲ್ ವಿಂಗ್ ಪ್ರಥಮ ಹಾಗೂ ರಸ್ತೆ ಸುರಕ್ಷತಾ ದಳ ದ್ವಿತೀಯ ಪುರಸ್ಕಾರ ಪಡೆದುಕೊಂಡಿತು.