Advertisement

ಜ.11ರಿಂದ ಮೂರು ದಿನಗಳ ಹಬ್ಬ: ಅಂತಿಮ ಹಂತದ ಸಿದ್ಧತೆ

06:43 AM Jan 10, 2019 | |

ಮಡಿಕೇರಿ: ಜಿಲ್ಲಾಡಳಿತ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಪಶುಪಾಲನೆ ಇಲಾಖೆ ಸಹಯೋಗದಲ್ಲಿ ಜ.11 ರಿಂದ ಮೂರು ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವವು ನಗರದ ರಾಜಾಸೀಟು ಉದ್ಯಾನವನ‌ ಮತ್ತು ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೊಡಗು ಪ್ರವಾಸಿ ಉತ್ಸವ ಲಾಂಛನ ಬಿಡುಗಡೆ ಮಾಡಿ ಅವರು ಮಾಹಿತಿ ನೀಡಿದರು. ಜ.11 ರಂದು ಸಂಜೆ 4.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಫ‌ಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅವರು ಉದ್ಘಾಟಿಸಲಿದ್ದಾರೆ. ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಉತ್ಸವ ಪ್ರಯುಕ್ತ 40 ವಸ್ತು ಪ್ರದರ್ಶನ ಮಳಿಗೆಗಳು ನಿರ್ಮಾಣವಾಗಲಿದೆ. ಆಹಾರ ಮೇಳ ಇರಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು. ಕೊಡಗು ಜಿಲ್ಲಾ ದರ್ಶನ ಅಂಗವಾಗಿ ಮೂರು ಮಾರ್ಗದಲ್ಲಿ ವಿವಿಧ ಪ್ರವಾಸಿ ಸ್ಥಳಗಳಿಗೆ ಬಸ್‌ ಸಂಚರಿಸಲಿದೆ.

ಫ‌ಲಪುಷ್ಪ ಪ್ರದರ್ಶನದ ಅಂಗವಾಗಿ ರಾಜಾಸೀಟು ಉದ್ಯಾನವನದಲ್ಲಿ 8 ರಿಂದ 10 ಸಾವಿರ ವಿವಿಧ ಜಾತಿಯ ಹೂವುಗಳಾದ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡುಹೂ, ಪ್ಲಾಕ್ಸ್‌, ವಿಂಕಾ ರೋಸಿಯಾ, ಡೇಲಿಯಾ ಇತ್ಯಾದಿಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದೆ 5000-6000 ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ ಎಂದರು.

ಪ್ರವಾಸಿ ಉತ್ಸವ-2019
ಕೊಡಗು ಪ್ರವಾಸಿ ಉತ್ಸವ-2019 ನ್ನು ಮಡಿಕೇರಿ ನಗರದಲ್ಲಿ ಜನವರಿ, 11 ರಿಂದ 13 ರವರೆಗೆ ಆಯೋಜಿಸ ಲಾಗಿದೆ, ಜಿಲ್ಲಾಡಳಿತ, ಪ್ರವಾಸೋ ದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಪ್ರವಾಸೋದ್ಯಮ ಕ್ಷೇತ್ರದ ಭಾಗಿದಾರರಾದ ಕೊಡಗು ಜಿಲ್ಲಾ ಹೋಟೆಲ್‌ ಮತ್ತು ರೆಸಾರ್ಟ್‌ ಅಸೋಷಿಯೇಷನ್‌, ಜಿಲ್ಲಾ ಟ್ರಾವೆಲ್ಸ್‌ ಅಸೋಸಿ ಯೇಷನ್‌, ಜಿಲ್ಲಾ ಹೋಂಸ್ಟೇ ಅಸೋಸಿ ಯೇಷನ್‌ ಮತ್ತು ಜಿಲ್ಲಾ ಛೇಂಬರ್‌ ಆಫ್ ಕಾಮರ್ಸ್‌ ಅವರ ಸಹಯೋ ಗದಲ್ಲಿ ಆಹಾರ ಮೇಳ, ಓಪನ್‌ ಸ್ಟ್ರೀಟ್ ಫೆಸ್ಟಿವಲ್‌, ಸಾಂಸ್ಕೃ ತಿಕ ವೈವಿಧ್ಯ, ಛಾಯಾ ಚಿತ್ರ ಪ್ರದರ್ಶನ, ಶ್ವಾನ ಪ್ರದರ್ಶನ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next