Advertisement

ಚರ್ಚ್‌ಗಳಲ್ಲಿ ಗರಿಗಳ ರವಿವಾರ ಆಚರಣೆ

05:43 PM Apr 10, 2017 | Team Udayavani |

ಕಾಸರಗೋಡು: ಗರಿಗಳ ರವಿವಾರ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ರವಿವಾರ ಆರಂಭ ಗೊಂಡಿತು. ಯೇಸುಕ್ರಿಸ್ತರು ಜೆರುಸಲೆಂಗೆ ಪ್ರವೇಶಿಸುವ ಸಂದರ್ಭದಲ್ಲಿ ಭಕ್ತರು “ಒಲಿವ್‌’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ರವಿವಾರದ ಬಲಿಪೂಜೆಯಲ್ಲಿ ಪಾಲ್ಗೊಂಡರು. ಮಂಗಳೂರು ಧರ್ಮಪ್ರಾಂತಕ್ಕೆ ಒಳಪಟ್ಟ ಕಾಸರಗೋಡು ವಲಯದ ಎಲ್ಲ ಚರ್ಚ್‌ ಹಾಗು ಜಿಲ್ಲೆಯ ಇತರ ಚರ್ಚ್‌ಗಳಲ್ಲಿ ಗರಿಗಳ ರವಿವಾರ ವಿಶೇಷ ಪ್ರಾರ್ಥನೆಯೊಂದಿಗೆ ನಡೆಯಿತು.

Advertisement

ಕಯ್ನಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಆಶೀರ್ವಚನವನ್ನು ವಂ| ವಿಕ್ಟರ್‌ ಡಿ’ಸೋಜಾ ನೆರವೇರಿಸಿ ದರು. ಬೇಳ, ಕೊಲ್ಲಂಗಾನ, ಕಾಸರಗೋಡು, ಕುಂಬಳೆ, ನಾರಂಪಾಡಿ, ಉಕ್ಕಿನಡ್ಕ, ಮಣಿಯಂಪಾರೆ, ಮಂಜೇಶ್ವರ, ತಲಪಾಡಿ, ವರ್ಕಾಡಿ, ಪಾವೂರು, ಮೀಯಪದವು ಚರ್ಚ್‌ ಗಳಲ್ಲಿ ಗರಿಗಳ ರವಿವಾರವನ್ನು ಆಚರಿಸಲಾಯಿತು.
ಯೇಸುಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ಅಥವಾ ಶುಭ ಶುಕ್ರವಾರದ ಪೂರ್ವ ರವಿವಾರವನ್ನು ಗರಿಗಳ ಭಾನುವಾರವಾಗಿ ಕ್ರೈಸ್ತರು ಆಚರಿಸುತ್ತಾರೆ. 

ಗರಿಗಳನ್ನು ಹಿಡಿದು ಮೆರವಣಿಗೆ 
ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್‌ ಆವರಣದಲ್ಲಿ ಆಶೀರ್ವಚಿಸಿ ಬಳಿಕ ಅವುಗಳನ್ನು ಹಿಡಿದು ಮೆರವಣಿಗೆಯಲ್ಲಿ ಚರ್ಚ್‌ನ್ನು ಪ್ರವೇಶಿಸಿದರು. ಗುರು ವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನ. ಶುಕ್ರ ವಾರ ಯೇಸುಕ್ರಿಸ್ತರನ್ನು  ಶಿಲುಬೆಗೇರಿಸಿದ ದಿನ. ಶನಿವಾರ ರಾತ್ರಿ ಜಾಗರಣೆ ಮತ್ತು ರವಿವಾರ ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವನ್ನು ಆಚರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next