Advertisement

ವಿವಿಧೆಡೆ ಸಂಭ್ರಮದ ಬಕ್ರೀದ್‌ ಆಚರಣೆ

10:04 AM Aug 23, 2018 | Team Udayavani |

ಮಹಾನಗರ: ಮುಸ್ಲಿಮರು ಬುಧವಾರ ಬಕ್ರೀದ್‌ (ಈದುಲ್‌ ಅಝ್ಹಾ) ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ನಗರದ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಜ್‌, ಧರ್ಮಗುರುಗಳಿಂದ ಈದ್‌ ಸಂದೇಶ ಸಹಿತ ಪ್ರವಚನ, ಪರಸ್ಪರ ಈದ್‌ ಶುಭಾಶಯ ವಿನಿಮಯ ನಡೆಯಿತು. ಬಾವುಟಗುಡ್ಡೆಯ ಈದ್ಗಾದಲ್ಲಿ ದ.ಕ. ಜಿಲ್ಲಾ ಖಾಝಿ ಹಾಜಿ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ ಹಬ್ಬದ ನೇತೃತ್ವದಲ್ಲಿ ಈದ್‌ ನಮಾಜ್‌ ಮತ್ತು ಖುತ್ಬಾ ಪಾರಾಯಣ ನಡೆಯಿತು.

Advertisement

ಝೀನತ್‌ ಬಕ್ಷ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ವೈ. ಅಬ್ದುಲ್ಲಾ ಕುಂಞಿ, ನಗರಾಡಳಿತ ಮತ್ತು ವಸತಿ ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಹಾನಗರ ಪಾಲಿಕೆಯ ಕಮಿಷನರ್‌ ಮೊಹಮ್ಮದ್‌ ನಝೀರ್‌, ಡಿಸಿಪಿ ಹನುಮಂತರಾಯ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಬಜಾಲ್‌ ನಂತೂರು ಬದ್ರಿಯಾ ಜುಮ್ಮಾ ಮಸೀದಿ, ಹಯಾತುಲ್‌ ಇಸ್ಲಾಂ ಮದ್ರಸ ನಗರದ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಹಯಾತುಲ್‌ ಇಸ್ಲಾಂ ಮದ್ರಸ ಬಜಾಲ್‌ ನಂತೂರು ಇದರ ಆಶ್ರಯದಲ್ಲಿ ಹಾಗೂ ಮುದರಿಸ್‌ ಇಲ್ಯಾಸ್‌ ಅಮ್ಜದಿ ಅವರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಈದ್‌ ನಮಾಜ್‌ ಮತ್ತು ಖುತುಬಾ ಪಾರಾಯಣ ನಡೆಯಿತು.

ಬಳಿಕ ಮಾತನಾಡಿದ ಖತೀಬರಾದ ಇಲ್ಯಾಸ್‌ ಅಮ್ಜದಿರವರು ಇತರರ ಸಂಕಷ್ಟದಲ್ಲಿ ನಾವು ಭಾಗಿಯಾಗುವುದರೊಂದಿಗೆ ಅವರಿಗೆ ಪರಿಹಾರ ನೀಡಿ ಸಹಕರಿಸುವ ರೂಪದಲ್ಲಿರುವುದೇ ನಮ್ಮ ಈದ್‌ ಆಚರಣೆ ಎಂದು ತಿಳಿಸಿದರು.

ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರನ್ನು ಮತ್ತು ಅಲ್ಲಿ ಉಂಟಾಗಿರುವ ಕಷ್ಟ- ನಷ್ಟಗಳನ್ನು ನೆನೆದು ಅದು ನಮಗೆ ಎಚ್ಚರಿಕೆಯ ಪಾಠವಾಗಲಿ. ಅಲ್ಲಾಹುವಿನ ಕೋಪಕ್ಕೆ ಭಾಗಿಯಾಗದಿರಲು ನಾವು ತಕ್ವಾದಿಂದ ಅಲ್ಲಾಹುವಿನ ಆಜ್ಞೆಯನ್ನು ಪಾಲಿಸಿ ಜೀವನವನ್ನು ಅಳವಡಿಸಬೇಕಾಗಿದೆ. ನಮಗೆ ಸಂತೋಷಪಡಲು ಇದು ಸಕಾಲವಲ್ಲ ಎಂದರು.

Advertisement

ಮೌನ ಪ್ರಾರ್ಥನೆ
ಸಂಕಷ್ಟದಲ್ಲಿ ಮೃತರಾದವರನ್ನು ನೆನೆದು ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಲಾವೃತಗೊಂಡ ಪ್ರದೇಶಗಳು ಹಾಗೂ ಹಾನಿಗೊಂಡ ಎಲ್ಲ ಕುಟುಂಬಗಳಿಗೆ ಮುಂದಿನ ಸವಾಲುಗಳನ್ನು ಎದುರಿಸಲು ಧೈರ್ಯ, ಸಾಮರ್ಥ್ಯವನ್ನು ನೀಡಲಿ ಹಾಗೂ ಮುಂದಿನ ದಿನಗಳಲ್ಲಿ ಕಳೆದು ಹೋದ ಹಿಂದಿನ ದಿನಗಳ ಪ್ರದೇಶಗಳು ಯಥಾಸ್ಥಿತಿಗೆ ಮರಳಿ ಬರಲಿ ಎಂದು ಪ್ರಾರ್ಥಿಸಲಾಯಿತು.

ಬದ್ರಿಯಾ ಜುಮ್ಮಾ ಮಸೀದಿ ಮತ್ತು ಹಯಾತುಲ್‌ ಇಸ್ಲಾಂ ಮದ್ರಸದ ಅಧ್ಯಕ್ಷರು, ಅಧ್ಯಕ್ಷತೆ ವಹಿಸಿದ್ದ ಮನಪಾ ಸದಸ್ಯರಾದ ಜನಾಬ್‌ ಅಬ್ದುಲ್‌ ರವೂಫ್‌ ಈದ್‌ ಶುಭಾಶಯ ಕೋರಿದರು. ಮಾಜಿ ಅಧ್ಯಕ್ಷರಾದ ಡಾ| ಡಿ.ಕೆ. ಅಬ್ದುಲ್‌ ಹಮೀದ್‌, ಬಿ.ಎನ್‌. ಅಬ್ಟಾಸ್‌, ಇಬ್ರಾಹಿಂ, ಬಿ. ಬಕ್ರುದ್ದೀನ್‌, ಅಬ್ದುಲ್‌ ಹಮೀದ್‌ ಫೈಜಲ್‌ನಗರ, ಶಂಸುದ್ದೀನ್‌, ಅಬ್ದುಲ್‌ ಸಲಾಂ, ನಝೀರ್‌ ಬಜಾಲ್‌, ಹನೀಫ್‌ ಎಚ್‌. ಎಸ್‌., ಅಶ್ರಫ್‌ ತೋಟ, ಹಮೀದ್‌ ಮುಸ್ಲಿಯಾರ್‌, ಕೆರೀಂ ಪಾಂಡೇಲ್‌, ಅಶ್ರಫ್‌ ಕೆ.ಇ., ಸಾಫಿ ಮಿಸ್ಬಾಹ್‌, ಟಿ.ಎಫ್‌. ಅಬ್ದುಲ್ಲ, ಹಸನಬ್ಬ ಮೋನು, ಅಬ್ದುಲ್‌ ರೆಹಮಾನ್‌ ಮದನಿ, ಹನೀಫ್‌ ಬೈಕಂಪಾಡಿ, ಶರೀಫ್‌ ಮುಸ್ಲಿಯಾರ್‌, ಇಕ್ಬಾಲ್‌ ಅಹ್ಸಿನಿ, ಅಬ್ದುಲ್‌ ಹಮೀದ್‌ ಹೊಟೇಲ್‌, ಮೊಹಮ್ಮದ್‌ ಹನೀಫ್‌ ಕೆಳಗಿನಮನೆ, ಮಹಮ್ಮದ್‌ ಮುಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು. 

ವಿವಿಧೆಡೆ ನಮಾಜ್‌
ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಧರ್ಮಗುರು ಮುಫ್ತಿ  ಮನ್ನಾನ್‌ ಸಾಹೇಬ್‌ ನೇತೃತ್ವದಲ್ಲಿ ನಮಾಜ್‌ ಮತ್ತು ಪ್ರವಚನ ನಡೆಯಿತು. ವಾಸ್‌ ಲೇನ್‌ನ ಮಸ್ಜಿದುಲ್‌ ಎಹ್ಸಾನ್‌, ಪಂಪ್‌ವೆಲ್‌ನ ತಖ್ವಾ ಮಸೀದಿ, ಹಂಪನಕಟ್ಟೆಯ ಮಸ್ಜಿದ್‌ ನೂರ್‌, ಸಿಟಿ ಬಸ್‌ ನಿಲ್ದಾಣ ಸಮೀಪದ ಇಬ್ರಾಹಿಂ ಖಲೀಲ್‌ ಮಸೀದಿ, ಬಂದರ್‌ನ ಕಚ್ಚಿ ಮೆಮೊನ್‌ ಮಸೀದಿ, ಸಲಫಿ ಮಸೀದಿ ಸಹಿತ ವಿವಿಧ ಮಸೀದಿಗಳಲ್ಲಿ ನಮಾಜ್‌ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next