ಮಾನವನ ನಿತ್ಯ ಬದುಕಿನ ಪ್ರತಿಬಿಂಬದ ಚಿತ್ರಣವೇ ನಾಟ್ಯ.ಮಾನವನಿಗೂ ನಾಟ್ಯಕ್ಕೂ ಒಂದು ರೀತಿಯ ಬೆಸುಗೆ ಇದೆ. ಭಾರತದಲ್ಲಿ ಕಾಣುವಷ್ಟು ಕಲಾಪರಂಪರೆಗಳ ವೈವಿಧ್ಯತೆ ಬಹುಶಃ ಪ್ರಪಂಚದ ಬೇರಾವುದೇ ದೇಶದಲ್ಲಿ ಕಾಣ ಸಿಗುವುದಿಲ್ಲ. ಈ ಲಲಿತಕಲೆಗಳನ್ನು, ದೈವಿಕ ಕಲೆಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಅಡ್ವೆ„ಸರ್ ಮಾಸಪತ್ರಿಕೆ, ಸಂಗೀತ್ ನೃತ್ಯ ಭಾರತಿ ಅಕಾಡೆಮಿ ಮತ್ತು ಕರ್ನಾಟಕ ಇಂಜನೀಯರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ವಿಶ್ವ ನೃತ್ಯ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ “ಆಧುನಿಕ ಯುಗದಲ್ಲಿ ಶಾಸ್ತ್ರೀಯ ನೃತ್ಯಪ್ರಕಾರಗಳನ್ನು ಉಳಿಸಿ ಬೆಳೆಸುವುದು’ ಎಂಬ ವಿಚಾರದ ಕುರಿತು ಸಂವಾದ ನಡೆಯಲಿದ್ದು, ಜಿ.ಆರ್. ಶಿಕ್ಷಣ ಸಮೂಹ ಸಂಸ್ಥಾಪಕಿ, ಖ್ಯಾತ ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಚಾಲನೆ ನೀಡಲಿದ್ದಾರೆ. ಹಿರಿಯ ನಾಟ್ಯ ಕಲಾವಿದೆ ಗುರು ರೇವತಿ ನರಸಿಂಹನ್, ಕಲಾ ವಿಮರ್ಶಕ ಎಸ್. ನಂಜುಂಡ ರಾವ್ ಭಾಗವಹಿಸುವವರು.
ಶೀತಲ್ ಹೇಮಂತ್(ಭರತನಾಟ್ಯ), ನಿಧಾಫ್ ಕರುನಾಡ್(ಕಥಕ್), ಅನನ್ಯ ಎಂ.(ಭರತನಾಟ್ಯ), ಪ್ರೀತಿ ಮಂಜುನಾಥ್ ಮತ್ತು ನೃತ್ಯ ಗುರು ಪದ್ಮಾ ಹೇಮಂತ್‌ರವರ ಮಾರ್ಗದರ್ಶನದಲ್ಲಿ ಸಮೂಹ ನೃತ್ಯ ಮೂಡಿ ಬರಲಿದೆ. ನೃತ್ಯ ಗುರು ವಿದುಷಿ ಪದ್ಮಾ ಹೇಮಂತ್‌ರವರ ಅತಿಥಿ ಸಂಪಾದಕತ್ವದಲ್ಲಿ ರೂಪುಗೊಂಡಿರುವ “ಅಡ್ವೆçಸರ್’ ನೃತ್ಯ ವಿಶೇಷಾಂಕವನ್ನು ಅನನ್ಯ ಸಾಂಸ್ಕೃತಿಕ ಅಕಾಡೆಮಿಯ ಡಾ. ಆರ್.ವಿ ರಾಘವೇಂದ್ರ ಬಿಡುಗಡೆಗೊಳಿಸುವರು.
ಎಲ್ಲಿ?: ಕೆ.ಇ.ಎ. ಪ್ರಭಾತ್ ರಂಗಮಂದಿರ, ಬಸವೇಶ್ವರನಗರ
ಯಾವಾಗ?: ಏ.29, ಸಂಜೆ 5- 8.15