Advertisement
ಸಮೀಕ್ಷೆಮಕ್ಕಳ ಆಟವಾಡುವ ಹಕ್ಕನ್ನು ರಕ್ಷಿಸಲು ಅಂತಾರಾಷ್ಟ್ರೀಯ ಆಟದ ದಿನವಾಗಿ ಒಂದು ದಿನವನ್ನು ಗುರುತಿಸುವಂತೆ ವಿಶ್ವಸಂಸ್ಥೆಗೆ ಮಕ್ಕಳೇ ಮನವಿ ಮಾಡಿದ್ದರು. 36 ದೇಶಗಳಲ್ಲಿ 25,000ಕ್ಕೂ ಹೆಚ್ಚು ಮಕ್ಕಳನ್ನು ಸಮೀಕ್ಷೆ ಮಾಡಲಾಗಿತ್ತು. ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ (ಸಿಡಬ್ಲ್ಯುಸಿ) ಸಂಸ್ಥೆ ಉಡುಪಿ ಮತ್ತು ವಿಜಯನಗರ ಜಿಲ್ಲೆಗಳ ಮಕ್ಕಳ ಸಂಘ ಹಾಗೂ ಭೀಮಸಂಘದ ಸುಮಾರು 460ಕ್ಕೂ ಹೆಚ್ಚು ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ಎಲ್ಲ ಮಕ್ಕಳ ಅಭಿಪ್ರಾಯ, ಒತ್ತಾಸೆ, ಸಲಹೆ ಹಾಗೂ ಹಕ್ಕೊತ್ತಾಯಗಳನ್ನು “ಮಕ್ಕಳು ಮತ್ತು ಯುವಜನರ ಹಕ್ಕೊತ್ತಾಯ’ ಎಂದು ಮಂಡಿಸಲಾಗಿತ್ತು.
ಮಕ್ಕಳ ಕಲಿಕೆ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದು. ಸೃಜನಶೀಲತೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲಗಳನ್ನು ಬೆಳೆಸುತ್ತದೆ. ನಮ್ಮ ಮಕ್ಕಳ ಮನವಿಗೆ ವಿಶ್ವ ಸಂಸ್ಥೆ ಬೆಲೆ ನೀಡಿದ್ದು ಅತ್ಯಂತ ಸಂತಸದ ಕ್ಷಣ ಎಂದು ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಸಂಯೋಜಕರಾದ ಸುರೇಶ್ ಎಸ್. ಗೌಡ, ಕೃಪಾ ಎಂ.ಎಂ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.