Advertisement

Siddeshwar ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವ ದಿನವನ್ನು ಪ್ರವಚನ ದಿನವನ್ನಾಗಿ ಆಚರಿಸಿ

06:26 PM Jan 02, 2024 | Team Udayavani |

ರಬಕವಿ ಬನಹಟ್ಟಿ: ನಡೆದಾಡುವ ದೇವರು ಎಂದು ಖ್ಯಾತಿಯನ್ನು ಪಡೆದುಕೊಂಡಿದ್ದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವ ದಿನವನ್ನು ಪ್ರವಚನ ದಿನವನ್ನಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ನಗರದ ಮುಖಂಡ ಶಿವಾನಂದ ಗಾಯಕವಾಡ ಬನಹಟ್ಟಿಯ ಗೆಳೆಯರ ಬಳದ ಪರವಾಗಿ ಸರ್ಕಾರವನ್ನು ಆಗ್ರಹಿಸಿದರು.

Advertisement

ಮಂಗಳವಾರ ರಬಕವಿ ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಶಿರಸ್ತೆದಾರ ಎಸ್.ಎಂ.ಕೂಗಾಟೆ ಮತ್ತು ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಸಿದ್ಧೇಶ್ವರ ಪೂಜ್ಯರ ಪ್ರವಚನವನ್ನು ಕೇಳಲು ಜನ ಶಿಸ್ತಿನಿಂದ ಬರುತ್ತಿದ್ದರು. ಅವರ ಪ್ರವಚನಗಳನ್ನು ಕೇಳುವುದೇ ಒಂದು ಭಾಗ್ಯವಾಗಿತ್ತು. ಯಾವುದೆ ಟೀಕೆ, ತಿರಸ್ಕಾರ ಇರಲಾರದ ಅವರ ಪ್ರವಚನಗಳಲ್ಲಿ ಹೇಳುವ ಮಾತುಗಳು ಮನ ಮುಟ್ಟುವಂತೆ ಇದ್ದವು ಎಂದು ಗಾಯಕವಾಡ ತಿಳಿಸಿದರು.

ಎಸ್.ಎಸ್. ಖಾನಾಪುರ ಮಾತನಾಡಿ, ಸಿದ್ಧೇಶ್ವರ ಪೂಜ್ಯರು ನಾಡಿನಾದ್ಯಾಂತ ಮತ್ತು ವಿಶ್ವದ ಪ್ರಮುಖ ದೇಶಗಳಲ್ಲಿ ಪ್ರವಚನಗಳನ್ನು ನೀಡುತ್ತ ವಿಶ್ವ ಶ್ರೇಷ್ಠರಾದವರು. ನೂರಾರು ಜನರ ಬದುಕಿಗೆ ಅವರ ಪ್ರವಚನಗಳು ಮಾರ್ಗದರ್ಶನ ಮತ್ತು ಬೆಳಕನ್ನೂ ನೀಡಿವೆ. ಆದ್ದರಿಂದ ರಾಜ್ಯ ಸರ್ಕಾರ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮತ್ತು ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಂಡು ಸಿದ್ಧೇಶ್ವರ ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವ ದಿನವನ್ನು ಪ್ರವಚನ ದಿನವನ್ನಾಗಿ ಆಚರಿಸಿದರೆ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ತಿಳಿಸಿದರು.

ಪ್ರಕಾಶ ಹೋಳಗಿ, ವಿಶ್ವಜ ಕಾಡದೇವರ, ಚಿದಾನಂದ ಗಿರಿಸಾಗರ, ವಿ.ವೈ.ಪಾಟೀಲ, ಶಂಭು ಉಕ್ಕಲಿ, ಅವಿನಾಶ ಹಟ್ಟಿ, ಮಹಾಂತೇಶ ಪದಮಗೊಂಡ, ಎಸ್.ಎಂ. ಹಂದಿಗುಅದ, ಕಿರಣ ಆಳಗಿ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next