Advertisement

ರಂಜಾನ್‌ ಸರಳವಾಗಿ ಆಚರಿಸಿ

01:25 PM May 15, 2020 | Suhan S |

ರೋಣ: ಕೋವಿಡ್ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದು, ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್‌ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ರೋಣ ಅಂಜುಮನ್‌ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಬಾವಾಸಾಬ್‌ ಬೆಟಗೇರಿ ತಮ್ಮ ಸಮಾಜದ ಬಂಧುಗಳಿಗೆ ಸಲಹೆ ನೀಡಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್ ವೈರಸ್‌ ತಡೆಗಟ್ಟುವ ಸೂಕ್ತ ಕ್ರಮವೆಂದರೆ ಅದು ಸಾಮಾಜಿಕ ಅಂತರ ಕಾಪಾಡುವುದಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಹಬ್ಬದಾಚರಣೆಗಾಗಿ ಗುಂಪಾ ಗುಂಪಾಗಿ ಬಟ್ಟೆ ಖರೀದಿ, ದಿನಸಿ ಸೇರಿದಂತೆ ಇತರೆ ಸಾಮಗ್ರಿಗಳ ಖರೀದಿಯಿಂದ ದೂರವಿರಬೇಕು. ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಬೇಕು. ಅಂಜುಮನ್‌ ಕಮೀಟಿ ವತಿಯಿಂದ ಬಡ ಕುಟುಂಬಗಳಿಗೆ ದಿನಸಿ ಹಾಗೂ ಇತರೆ ಸಾಮಗ್ರಿಗಳ ಕಿಟ್‌ಗಳನ್ನು ಮನೆಗಳಿಗೆ ತಲುಪಿಸಲಾಗುವುದು.

ಕೇವಲ ಮುಸ್ಲಿಂ ಸಮಾಜದವರಿಗೆ ಮಾತ್ರವಲ್ಲದೇ ಉಳಿದ ಸಮಾಜದ ಕಡುಬಡವ ಕುಟುಂಬದವರಿಗೆ ಕಿಟ್‌ಗಳನ್ನು ವಿತರಣೆ ಮಾಡಲು ಅಂಜುಮನ್‌ ಇಸ್ಲಾಂ ಕಮೀಟಿ ಯೋಜನೆ ರೂಪಿಸಿದೆ. ಆದ್ದರಿಂದ ಯಾರು ಗುಂಪು ಗುಂಪಾಗಿ ಸೇರಿ ಸಾಮಗ್ರಿಗಳ ಖರೀದಿಗೆ ಮುಂದಾಗಬಾರದು. ಮನೆಯಲ್ಲಿಯೇ ಇದ್ದು ಸರಳವಾಗಿ ಹಬ್ಬ ಆಚರಿಸಬೇಕು ಎಂದರು. ಮುಖಂಡರಾದ ಶಫೀಕ್ ‌ಮೂಗನೂರ ಮಾತನಾಡಿದರು. ಅಫ್ತಾಬ್‌ ಅಹ್ಮದ್‌ ತಹಶೀಲ್ದಾರ್‌, ಅಬ್ದುಲ್‌ರೆಹಮಾನ್‌ ಗದಗ, ಮಹ್ಮದ್‌ ಯಲಿಗಾರ, ಮಹ್ಮದ ಯೂಸೂಫ್‌ ಇಟಗಿ, ಖಲೀಲ್‌ ರಾಮದುರ್ಗ, ಮುಸ್ತಫಾ ಬೇಪಾರಿ, ರಿಯಾಜ್‌ ಮುಲ್ಲಾ, ಬಶೀರ್‌ ಕಟ್ಟಿಮನಿ, ಮುನ್ನಾ ದಳವಾಯಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next