Advertisement

ಸರಳ ಗಣೇಶೋತ್ಸವ ಆಚರಿಸಿ

12:00 PM Sep 08, 2018 | |

ವಿಜಯಪುರ: ರಾಜ್ಯದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಆವರಿಸಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸದೇ ಸರಳ ರೀತಿ ಆಚರಿಸಿ, ಉಳಿಕೆ ಹಣವನ್ನು ಸಂತ್ರಸ್ತರ ಪರಿಹಾರ ನಿಧಿಗೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿದರು.

Advertisement

ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಜರುಗಿದ ಗಜಾನನ ಮಹಾಮಂಡಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರದ್ಧೆ, ಭಕ್ತಿಯಿಂದಲೇ ಉತ್ಸಾಹದಿಂದ ಗಣೇಶೋತ್ಸವ ಆಚರಿಸಿ. ಆದರೆ ಈ ಬಾರಿ ಅದ್ಧೂರಿತನ ಕಡಿಮೆ ಮಾಡಿ, ಸರಳ ರೀತಿಯಿಂದ ಆಚರಿಸಬೇಕಿದೆ.

ಅರ್ಥಪೂರ್ಣ ಆಚರಣೆಗಾಗಿ ಅಬ್ಬರ ಧ್ವನಿ ವರ್ಧಕಗಳು, ಅದ್ಧೂರಿ ಅಲಂಕಾರಗಳಿಗೆ ಬಳಸುವ ಹಣವನ್ನು ಸಂತ್ರಸ್ತರ
ನೆರವಿಗೆ ನೀಡಿ ಎಂದು ಮನವಿ ಮಾಡಿದರು. ಇದಲ್ಲದೇ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶನ ಮೂರ್ತಿ ಮಾರಾಟ ನಿಷೇಧಿಸಿದ್ದು, ಕೆಲವೆಡೆ ನಿಷೇಧ ಉಲ್ಲಂಘಿಸಿ, ಮಾರಾಟ ಮಾಡಲಾಗುತ್ತಿರುವ ಪ್ರಕರಣ ಕೇಳಿ ಬರುತ್ತಿದೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಸೂಚಿಸಿದರು.
 
ಗ್ರಾಮೀಣ ಭಾಗದಲ್ಲಿ ರಸ್ತೆಗೆ ಹಗ್ಗ ಕಟ್ಟಿ ಸಂಚಾರಕ್ಕೆ ತೊಂದರೆ ನೀಡಿ ವಾಹನಗಳನ್ನು ತಡೆದು ಬಲವಂತವಗಿ ಗಣೇಶ ಉತ್ಸವಕ್ಕೆ ಹಣ ವಸೂಲಿ ಮಾಡುವ ಪ್ರಕರಣಗಳು ಕಂಡು ಬರುತ್ತವೆ. ಇದಕ್ಕೆ ಅವಕಾಶ ನೀಡಬಾರದು. ಇಂಥ ಪ್ರಕರಣಗಳು ವರದಿಯಾದರೆ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಸಿದರು.

ಪರಿಸರ ಅಭಿಯಂತರ ಬಿ.ಜಗದೀಶ ಮಾತನಾಡಿ, ಗಣೇಶನ ಉತ್ಸವ ಮೂರ್ತಿಗಳ ವಿಸರ್ಜನೆಗೆ ತಾಜ್‌ಬಾವಡಿ ಮುಂಭಾಗ ಸೇರಿದಂತೆ 9 ಕಡೆಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು. 

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ತಾಜ್‌ಬಾವಡಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆಗೆ ಅವಕಾಶ ಕೊಡಿ. ಇಲ್ಲವೇ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಕೃತಕ ಹೊಂಡದ ಸ್ಥಳ ಇನ್ನೂ ಹೆಚ್ಚಾಗಿ ಆಳ-ಅಗಲ ವಿಸ್ತರಿಸಬೇಕು. ಗಜಾನನ ಉತ್ಸವ ಸಮಿತಿಗಳು ಸಹ ಡಿಜೆಯಲ್ಲಿ ದೇಶಭಕ್ತಿ ಗೀತೆ, ಭಕ್ತಗೀತೆಗಳನ್ನು ಅಳವಡಿಸಬೇಕು ಎಂದು ಕೋರಿದರು. ಗಜಾನನ ಮಹಾಮಂಡಳ ಅಧ್ಯಕ್ಷ ಶರತ್‌ ಬಿರಾದಾರ ಮಾತನಾಡಿದರು.

Advertisement

ಟ್ರೋಫಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಪರಿಸರ ಸ್ನೇಹಿಯಾಗಿ, ಅರ್ಥಪೂರ್ಣ ಆಚರಣೆಗೆ ಗಜಾನನ ಮಂಡಳಿಗಳಿಗೆ ಮೂರು ವಿಶೇಷ ಬಹುಮಾನ ನೀಡಲಾಗುವುದಾಗಿ ಎಸ್ಪಿ ಪ್ರಕಾಶ ನಿಕ್ಕಂ ಹೇಳಿದರು. ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸುವ, ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಣೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮೆರವಣಿಗೆ, ಟ್ರಾಫಿಕ್‌ ರೂಲ್ಸ್‌ ಫಾಲೋ ಮಾಡುವ ಗಜಾನನ ಉತ್ಸವ ಸಮಿತಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.

ಗಜಾನನ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಅನುಮತಿಗಾಗಿ ಏಕಗವಾಕ್ಷಿ ಯೋಜನೆ ರೂಪಿಸಲಾಗಿದ್ದು, ಸೋಮವಾರ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು. ಗಜಾನನ ಉತ್ಸವ ಸಮಿತಿಗಳು
ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ, ಹೆಚ್ಚು ಡೆಸಿಬಲ್‌ ಇರುವ ಡಿಜೆಗಳನ್ನು ಹಾಕಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next