Advertisement

ಶಾಂತಿಯುತ ಗಣೇಶ ಹಬ್ಬ ಆಚರಿಸಿ: ತರಗೆ

02:31 PM Aug 28, 2022 | Team Udayavani |

ಕಾಳಗಿ: ಗಣೇಶ ಚತುರ್ಥಿ ಹಬ್ಬದ ನಿಮಿತ್ತ ತಾಲೂಕಾಡಳಿತದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ತಹಶೀಲ್ದಾರ್‌ ನಾಗನಾಥ ತರಗೆ ಮಾತನಾಡಿ, ಎರಡು ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಯಂತೆ ಹಬ್ಬ ಆಚರಿಸಲಾಗಿತ್ತು. ಆದರೆ ಈ ಬಾರಿ ವಿಜೃಂಭಣೆ ಆಚರಣೆಗೆ ಸರ್ಕಾರದಿಂದ ಯಾವುದೇ ಅಡೆತಡೆಯಿಲ್ಲ. ಆದ್ದರಿಂದ ಶಾಂತಿ, ಸುವ್ಯವಸ್ಥಿತವಾಗಿ ಹಬ್ಬ ಆಚರಿಸಿ ಎಂದು ಸೂಚಿಸಿದರು.

Advertisement

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸೂಕ್ತ ಸ್ಥಳ, ಪೆಂಡಾಲ್‌, ವಿದ್ಯುತ್‌ ಸಂಪರ್ಕ ಸೇರಿದಂತೆ ಇತರೆ ಪರವಾನಗಿಯನ್ನು ಸ್ಥಳೀಯ ಆಡಳಿತಗಳ ಮೂಲಕ ಏಕಕಾಲಕ್ಕೆ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯಿಂದ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿಯವರು ಸಾರ್ವಜನಿಕರ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಹೇಳಿದರು.

ಸಿಪಿಐ ವಿನಾಯಕ ಮಾತನಾಡಿ, ಗಣಪತಿ ವಿಸರ್ಜನೆ ವೇಳೆ ನಿಗದಿ ಮಾಡಿದ ಸಮಯಕ್ಕೆ ಮೆರವಣಿಗೆ ಆರಂಭಿಸಿದಲ್ಲಿ ಪೊಲೀಸ್‌ ಇಲಾಖೆಗೆ ಬಂದೋಬಸ್ತ್ ಒದಗಿಸಲು ಅನೂಕೂಲವಾಗುತ್ತದೆ. ಮೆರವಣಿಗೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಒತ್ತು ನೀಡಿ, ನಿಮ್ಮ ಸಮಿತಿಯಿಂದಲೇ ಸ್ವಯಂ ಸೇವಕರನ್ನು ನೇಮಿಸಿಕೊಂಡಲ್ಲಿ ಇಲಾಖೆಗೆ ಸಹಕಾರಿಯಾಗುತ್ತದೆ. ಮೆರವಣಿಗೆಯಲ್ಲಿ ಡಿಜೆಗೆ ಅವಕಾಶವಿಲ್ಲ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡರೆ ಒಳ್ಳೆಯದು ಎಂದು ಹೇಳಿದರು.

ಜೆಸ್ಕಾಂ ಇಲಾಖೆ ಎಇಇ ಪ್ರಭು ಎಂ. ಮಾತನಾಡಿ, ವಿಶೇಷವಾಗಿ ಹೈಟೆನ್ಶನ್‌ ತಂತಿಗಳು ಹಾಯ್ದು ಹೋಗಿರುವ ಕಡೆಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಇಲ್ಲ. ಮಂಡಳಿಯವರು ಮುಂಚಿತವಾಗಿ ನಿಗದಿತ ಸಮಯದ ಒಳಗಾಗಿ ಪರವಾನಗಿ ಪಡೆದು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಸ್ಥಳೀಯ ಮುಖಂಡರು ಗಣೇಶ ವಿಸರ್ಜನೆಗೆ ಸ್ಥಳ ನಿಗದಿ ಮಾಡುವಂತೆ ಕೇಳಿದ ಪ್ರಶ್ನೆಗೆ ಪಪಂ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ್‌ ಮಾತನಾಡಿ, ರೌದ್ರಾವತಿ ನದಿಯಲ್ಲಿಯೇ ಒಂದು ಕಡೆ ಸ್ಥಳ ನಿಗದಿ ಮಾಡಿ ತಿಳಿಸಲಾಗುವುದು. ವಿಸರ್ಜನೆಗೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಪಿಎಸ್‌ಐ ಹುಲೇಪ್ಪ ಗೌಡಗೊಂಡ, ಜೆಸ್ಕಾಂ ಜೆಇ ಮನೋಹರ, ಮುಖಂಡರಾದ ರಾಘವೇಂದ್ರ ಗುತ್ತೇದಾರ, ಶಿವಶರಣಪ್ಪ ಕಮಲಾಪುರ, ಚಂದ್ರಕಾಂತ ವನಮಾಲಿ, ದೇವಜಿ ಜಾಧವ, ಶಿವಶರಣಪ್ಪ ಗುತ್ತೇದಾರ, ದತ್ತು ಗುತ್ತೇದಾರ, ಅಶೋಕ ಶರಗಾರ, ಮಂಜುನಾಥ ಹೆಬ್ಟಾಳ, ಸಂತೋಷ ನರನಾಳ, ಬಾಬು ನಾಟೀಕಾರ, ಸುನೀಲ ರಾಜಾಪುರ, ಸಂಗಮೇಶ ಬಡಿಗೇರ, ಕಾಶಿನಾಥ ರಾಜಾಪುರ ಇತರರು ಇದ್ದರು. ಪೊಲೀಸ್‌ ಠಾಣೆಯಲ್ಲಿ ಶಾಂತಿ ಸಭೆ: ಗಣೇಶ ಹಬ್ಬದ ನಿಮಿತ್ತ ಕಾಳಗಿ ಪೊಲೀಸ್‌ ಠಾಣೆಯಲ್ಲಿ ಸಿಪಿಐ ವಿನಾಯಕ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತು. ಪಿಎಸ್‌ಐ ಹುಲೆಪ್ಪ ಗೌಡಗೊಂಡ, ಕ್ರೈಂ ಪಿಎಸ್‌ಐ ಅಮೋಜ್‌ ಕಾಂಬಳೆ, ಸಿಬ್ಬಂದಿ ಅಂಬರೀಷ ಹಾಗೂ ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next