Advertisement

ಶಾಂತಿಯುತ ಗಣೇಶ ಚತುರ್ಥಿ ಆಚರಿಸಲು ಸಲಹೆ

05:51 PM Aug 30, 2022 | Team Udayavani |

ಯಡ್ರಾಮಿ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಸೋಮವಾರ ಪಿಎಸ್‌ಐ ನೇತೃತ್ವದಲ್ಲಿ ಶಾಂತಿಸಭೆ ಮಾಡಲಾಯಿತು.

Advertisement

ಪಿಎಸ್‌ಐ ಬಸವರಾಜ ಚಿತ್ತಕೋಟೆ ಮಾತನಾಡಿ, ಗಣೇಶ ಮಂಡಳಿ ಅವರು ಜೆಸ್ಕಾಂ, ಪಟ್ಟಣ ಪಂಚಾಯಿತಿ, ಮತ್ತು ಪೊಲೀಸ್‌ ಇಲಾಖೆಯಿಂದ ಪರವಾನಗಿ ಪಡೆದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರ ಕಟ್ಟುನಿಟ್ಟಿನ ಆದೇಶದಂತೆ ಯಾವುದೇ ಕಾರಣಕ್ಕೂ ಡಿಜೆ ಹಚ್ಚುವಂತಿಲ್ಲ. ಇಷ್ಟಾಗಿಯೂ ಇಂತಹ ಪ್ರಯತ್ನ ಮಾಡಿದ್ದಾರೆ. ಡಿಜೆಯನ್ನು ಪೊಲೀಸ್‌ ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಬೇಕಾಗುತ್ತದೆ. ಜತೆಗೆ ಪಟ್ಟಣ ಪಂಚಾಯಿತಿ ಸೂಚಿಸಿದ ಸ್ಥಳದಲ್ಲಿಯೇ ಗಣೇಶ ಮೂರ್ತಿ ವಿಸರ್ಜಿಸಬೇಕು ಎಂದರು.

ಎಲ್ಲ ಜಾತಿ-ಜನಾಂಗದವರು ಒಗ್ಗೂಡಿ ಹಬ್ಬ ಆಚರಿಸಿ ಪಟ್ಟಣದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಒಂದು ವೇಳೆ ಸಮಾಜದಲ್ಲಿ ಶಾಂತಿ ಕದಡುವಂತಹ ವಾತಾವರಣ ನಿರ್ಮಾಣ ಮಾಡಿದರೆ ಅದಕ್ಕೆ ಆಯಾ ಗಣೇಶ ಮಂಡಳಿಯವರೆ ಹೊಣೆಗಾರರಾನ್ನಾಗಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಚಂದ್ರಶೇಖರ ಪುರಾಣಿಕ, ಮಲ್ಲಿಕಾರ್ಜುನ ಹಲಕರ್ಟಿ, ಕರವೇ ಮುಖಂಡ ವಿಶ್ವನಾಥ ಪಾಟೀಲ, ಗೊಲ್ಲಾಳಪ್ಪ ಗೆಜ್ಜಿ, ರಾಜು ಗಂಗಾಕರ್‌, ಬಸವರಾಜ ಕಲಕೇರಿ, ಕಾಶಿನಾಥ ಪಾಟೀಲ, ಆನಂದ ಪವಾರ್‌, ಮಡಿವಾಳಪ್ಪ ತಳವಾರ, ಅಜ್ಮಿàರ್‌ ಪಟೇಲ್‌ ಚಿಂಚೋಳಿ, ವಿವಿಧ ಸಂಘಟನೆಯ ಮುಖಂಡರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next