Advertisement
ಮನಸ್ಸು ಸದಾ ಚೆನ್ನಾಗಿರಬೇಕಾದರೆ ಮನೆಯ ವಾತಾವರಣ ಹಸನಾಗಿರಬೇಕಂತೆ. ಮನೆಮಂದಿ ನಗುಮೊಗದಿಂದಿದ್ದರೂ ನಮ್ಮ ಆಸರೆಯ ಸೂರಾಗಿರುವ ಮನೆ ಮಾತ್ರ ಹಳೇ ಸೂರು ಬದಲಾಗದಿದ್ದರೆ ನಾವಿನ್ನು ಟ್ರೆಂಡಿಗೆ ಅಪ್‌ಡೇಟ್ ಆಗಿಲ್ಲವೆಂದರ್ಥ. ಇಂದು ಮನೆಯ ವಾತಾವರಣ ಚೆನ್ನಾಗಿಸಲು ಹಲವಾರು ತಂತ್ರಜ್ಞಾನಗಳು ಹುಟ್ಟಿಕೊಂಡಿವೆ. ವಾಲ್ ಡಿಸೈನ್, ಫ್ಲೋರ್ ಡೆಕೊರೇಶನ್‌ನಂತೆ ಸೀಲಿಂಗ್ 3ಡಿ ಆರ್ಟ್ ಮನೆಯ ವಿನ್ಯಾಸಕ್ಕೆ ವಿಭಿನ್ನ ಆಯಾಮ ನೀಡುವ ನೆಲೆಯಲ್ಲಿ ಉಪಯುಕ್ತವಾಗಿದೆ.
ಒಂದು ಕಲ್ಪನಾತೀತ ಲೋಕವನ್ನು ನಮ್ಮ ಮನೆಯಲ್ಲಿಯೇ ಸೃಷ್ಟಿಸಲು ಸಾಧ್ಯವಿರುವಿಕೆಯನ್ನು 3ಡಿ ಸೀಲಿಂಗ್ ಡಿಸೈನ್ ಎನ್ನಬಹುದು. ಬಹಳ ಹಿಂದೆ ಮನೆಯ ಇಂಟೀರಿಯರ್ ಅನ್ನು ಭಿತ್ತಿ ಚಿತ್ರದ ಮಾದರಿಯಲ್ಲಿಯೋ ಇಲ್ಲವೇ ಮುಕ್ತ ಗಾಳಿ ಬೆಳಕು ಬರುವಂತೆ ವಿನ್ಯಾಸ ಮಾಡುತ್ತಿದ್ದರಂತೆ. ಆದರೆ ಈ ರೀತಿಯ ಮನೆಗಳು ಇಂದು ಸಿನೆಮಾಗಳಲ್ಲಿ ಮಾತ್ರ ಕಾಣಸಿಗುತ್ತವೆ. ಇಂತಹ ಹಳೆಯ ವಿನ್ಯಾಸವನ್ನೇ ಮಾದರಿಯಾಗಿಟ್ಟುಕೊಂಡು ಸೀಲಿಂಗ್ 3ಡಿ ಆರ್ಟ್ ಬಂದಿದೆ. ಇದನ್ನು ವಿಶೇಷ ತಂತ್ರಜ್ಞಾನಗಳನ್ನು ಬಳಸಿ ಸಿದ್ಧಪಡಿಸಲಾಗುತ್ತದೆ. ಬಳಿಕ ಸ್ಟಿಕ್ಕರ್ ರೂಪದಲ್ಲಿದ್ದು, ನಾವೆನಿಸಿದ ಸ್ಥಳಕ್ಕೆ ಸುಲಭವಾಗಿ ಡಿಸೈನ್ ಮಾಡಲೂ ಇದು ಉಪಯುಕ್ತವಾಗಿದೆ. ಸಾಮಾನ್ಯವಾಗಿ ಸಿಂಥೆಟಿಕ್ ಪೇಪರ್, ಪಲಿವಿನಿಯೋಲ್ ಕ್ಲೋರೈಡ್, ಪಾಲಿಸ್ಟಾರ್ ಮತ್ತು ಕಾನ್ವಾಸ್ ಮಾದರಿಯನ್ನು ಬಳಸಲಾಗುತ್ತಿದ್ದು, 3ಡಿ ಟಚಿಂಗ್ ನೀಡುವುದರಿಂದ ನಿಮ್ಮ ಕಣ್ಮನ ಸೂರೆಗೊಳಿಸುವಲ್ಲಿ ಯಾವುದೇ ಅನುಮಾನವಿಲ್ಲ.
Related Articles
ಆಧುನಿಕ ಯುಗದಲ್ಲಿ ನಮಗೆ ಸರಿಯಾಗಿ ಪ್ರಕೃತಿಯ ಅಂದವನ್ನು ಸವಿಯುವ ಭಾಗ್ಯವಿಲ್ಲವೆನ್ನಬಹುದು. ಹಾಗಿದ್ದರೂ ಬೇಸರಗೊಳ್ಳದೆ ಮನೆಯಲ್ಲಿಯೇ ಕೃತಕ ಪ್ರಕೃತಿಯನ್ನು ಸೃಷ್ಟಿಸಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕು. ಸಾಮಾನ್ಯವಾಗಿ ಸಮುದ್ರದ ಅಲೆಗಳು, ಜಲಪಾತ, ಎತ್ತರದ ಬಿಲ್ಡಿಂಗ್ ಪಕ್ಕದಲ್ಲಿ ಪುಟ್ಟ ಆಕಾಶ, ಬೆಳದಿಂಗಳ ಬೆಳಕಿನಲ್ಲಿ ಶಶಿ ಮತ್ತು ನಕ್ಷತ್ರ ಪುಂಜಗಳು, ಸಾಗರದ ಅಲೆಗಳು, ಜಲಚರಜೀವಿಗಳ ಚಲನವಲನಗಳು, ಮಂಜಿನ ಹನಿಗಳು, ಹಿಮ ರಾಶಿ ಹೀಗೆ ಸಾಲು ಸಾಲು ಪ್ರಕೃತಿಯ ಡಿಸೈನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಿದೆ ಎನ್ನಬಹುದು.
Advertisement
ಎಲ್ಲೆಲ್ಲಿ ಬಳಸಬಹುದು ?ಇದಕ್ಕೆ ಒಂದು ನಿರ್ದಿಷ್ಟವಾದ ಕಲರ್ ಎಂದು ತಿಳಿಸಲು ಸಾಧ್ಯವಿಲ್ಲದಿದ್ದರೂ ಮನಸ್ಸಿಗೆ ಹಿಡಿಸಿದ ಬಣ್ಣವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಆದರೂ ಬಹುತೇಕರು ನೀಲಿ, ಕೇಸರಿ, ಆಕಾಶಬಣ್ಣ, ಹಸುರು, ನೇರಳೆ, ಕೆಂಪು ಮತ್ತು ಕಪ್ಪು ಬಣ್ಣಕ್ಕೆ ಆದ್ಯತೆ ನೀಡುತ್ತಿದ್ದು, ಇಂದಿನ ಟ್ರೆಂಡ್ ಎನ್ನಬಹುದು. ನಿಮಗಿಷ್ಟವೆನಿಸಿದ ಜಾಗಕ್ಕೆ ಇದನ್ನು ಅಂಚಿಸಬಹುದು ಆದರೆ ಕೆಲವು ಅಗತ್ಯ ಸೌಕರ್ಯಗಳು ಬೇಕಾಗುತ್ತದೆ. ಕಾರಿಡಾರ್, ಎಂಟ್ರೆನ್ಸ್, ಹಾಲ್ ಮತ್ತು ಬಾತ್ ರೂಮ್‌ನಲ್ಲಿ ನಿಮ್ಮ ಮೂಡ್‌ಗೆ ಅನುಗುಣವಾಗಿ ಸ್ಟಿಕ್ಕರ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. – ರಾಧಿಕಾ, ಕುಂದಾಪುರ