Advertisement

ಗಡಿಯಲ್ಲಿ ಮತ್ತೆ ಪಾಕ್‌ ಕದನ ವಿರಾಮ ಉಲ್ಲಂಘನೆ

03:50 AM Mar 14, 2017 | Team Udayavani |

ಜಮ್ಮು: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಪಡೆಗಳು ಕೇವಲ 24 ಗಂಟೆಗಳ ಅವಧಿಯೊಳಗೆ ಎರಡನೇ ಬಾರಿ ಕದನ ವಿರಾಮ ಉಲ್ಲಂಸಿವೆ. ಜಮ್ಮು ಮತ್ತು ಕಾಶ್ಮೀರದ ಪೂಂಛ… ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೋಮ­­­­­ವಾರ ಪಾಕಿಸ್ಥಾನ ಪಡೆಗಳು ಶೆಲ್‌ ಹಾಗೂ ಸ್ವಯಂ ಚಾಲಿತ ಆಯುಧಗಳ ಮೂಲಕ ಗುಂಡಿನ ದಾಳಿ ನಡೆಸಿವೆ.

Advertisement

“”ಪೂಂಛ… ವಲಯದಲ್ಲಿ  ಬೆಳಗ್ಗೆ 6.40ರಿಂದಲೂ ಪಾಕ್‌ ಪಡೆಗಳು 82 ಎಂಎಂ ಫಿರಂಗಿ ಹಾಗೂ ಸ್ವಯಂಚಾಲಿತ ಆಯುಧಗಳ ಮೂಲಕ ದಾಳಿ ನಡೆಸುತ್ತಿವೆ. ಭಾರತ ಯೋಧರು ಕೂಡ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ,” ಎಂದು ರಕ್ಷಣಾ ವಿಭಾಗದ ವಕ್ತಾರರೊಬ್ಬರು ತಿಳಿಸಿದ್ದಾರೆ.

  “”ನಮ್ಮ ಪ್ರತಿ ಹಬ್ಬದ ಸಂದರ್ಭದಲ್ಲೂ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸು­ವುದು ಪಾಕಿಸ್ಥಾನದ ಹಳೇ ಚಾಳಿ,” ಎಂದು ಬಿಜೆಪಿ ಮುಖಂಡ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಕಿಡಿಕಾರಿದ್ದಾರೆ. ಹೋಳಿ ಸಂದರ್ಭದಲ್ಲಿ ಕದನ ವಿರಾಮ ಉಲ್ಲಂ ಸಿರುವ ಪಾಕಿಸ್ಥಾನದ ಕ್ರಮವನ್ನು ಖಂಡಿಸಿರುವ ರಾಥೋಡ್‌, “”ಪಾಕಿಸ್ಥಾನ ಭಾರತದ ಶಾಂತಿ ಕದಡಲು ಯತ್ನಿಸುತ್ತಿದೆ,” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next