Advertisement

CDSCO; ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶೀತ ಸಂಬಂಧಿ ಔಷಧ ನೀಡದಿರಿ!

01:00 AM Dec 22, 2023 | Team Udayavani |

ಹೊಸದಿಲ್ಲಿ: ಶೀತದಿಂದ ಮುಕ್ತಿಗೆ ನೀಡುವ ಔಷಧವನ್ನು ನಾಲ್ಕು ವರ್ಷದೊಳಗಿನ ಮಕ್ಕಳಿಗೆ ನೀಡದಂತೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ಆದೇಶಿಸಿದೆ. ಈ ಸಾಮಾನ್ಯ ಶೀತ ಸ್ಥಿರ ಔಷಧ ಸಂಯೋಜನೆಯು(ಎಫ್ಡಿಸಿ) ಎರಡು ಔಷಧಗಳಾದ ಕ್ಲೋರ್ಪೆನಿರಮೈನ್‌ ಮೆಲೇಟ್‌ ಮತ್ತು ಫೆನೈಲ್ಪ್ರಿನ್ ನ ಕಾಕ್‌ಟೈಲ್‌ ಆಗಿದೆ. ವಿಷಯ ತಜ್ಞರ ಸಮಿತಿಯ(ಸಿಇಸಿ) ಶಿಫಾರಸ್ಸಿನ ಮೇರೆಗೆ ಈ ನಿಷೇಧವನ್ನು ಹೇರಲಾಗಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಸಂಯೋಜನೆಯ ಔಷಧವನ್ನು ಬಳಸಬಾರದು ಎಂದು ಸಮಿತಿಯು ಒತ್ತಿಹೇಳಿದೆ.

Advertisement

“ನಾಲ್ಕು ವರ್ಷದ ಒಳಗಿನ ಮಕ್ಕಳು ಎಫ್ಡಿಸಿ ಬಳಸಬಾರದು’ ಎಂದು ಲೇಬಲ್‌ ಮತ್ತು ಪ್ಯಾಕೇಜ್‌ ಮೇಲೆ ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸುವಂತೆ ಪ್ರತೀ ಎಂಎಲ್‌ ಡ್ರಾಪ್ಸ್‌ಗೆ ಕ್ಲೋರ್ಪೆನಿರಮೈನ್‌ ಮೆಲೇಟ್‌ ಐಪಿ 2ಎಂಜಿ ಮತ್ತು ಫೆನೈಲ್ಪ್ರಿನ್ ಎಚ್‌ಸಿಎಲ್‌ ಐಪಿ 5 ಎಂಜಿ ಒಳಗೊಂಡಿರುವ ಎಫ್ಡಿಸಿ ತಯಾರಿಕೆ ಕಂಪೆನಿಗಳಿಗೆ ಸಿಡಿಎಸ್‌ಸಿಒ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next