ಮಾಯಕೊಂಡ: ಸಮೀಪದ ಹುಚ್ಚವನಹಳ್ಳಿ ಗ್ರಾಮದ ಶುಕ್ರವಾರ ನಡೆದ ಇಟ್ಟಿಗಿ ಕರಿಯಮ್ಮ ಜಾತ್ರೆಯ ಸಿಡಿ ಉತ್ಸವದಲ್ಲಿ ಭಕ್ತರು ಮಕ್ಕಳನ್ನು ಸಿಡಿ ಕಂಬಕ್ಕೆ ಸ್ಪರ್ಶಿಸಿ ಭಕ್ತಿ ಸಮರ್ಪಿಸಿದರು. ಸಿಡಿ ಉತ್ಸವ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಆಗಮಿಸಿದ್ದರು.
ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಸಿಡಿ ಕಂಬವನ್ನು ಉರುಮೆ, ವಾದ್ಯ ಮೇಳದೊಂದಿಗೆ ಗ್ರಾಮದಿಂದ ಊರ ಹೊರಗಿನ ಕರಿಯಮ್ಮ ದೇವಾಲಯಕ್ಕೆ ತರಲಾಯಿತು. ಸಿಡಿ ಕಂಬವನ್ನು ತರುತ್ತಿದ್ದಂತೆ ಜನರು ಸಿಡಿ ಆಡುವ ಬಯಲಿಗೆ ಕೂತೂಹಲದಿಂದ ಆಗಮಿಸಿದ್ದರು.
ತೆಂಗಿನಕಾಯಿ ಕಟ್ಟಿದ ಸಿಡಿ ಕಂಬವನ್ನು ಹತ್ತಾರು ಸುತ್ತು ತಿರುಗಿಸಿದರು. ಪೊಲೀಸ್ ಇಲಾಖೆ ಮುಂಚೆಯೇ ಸಿಡಿ ಆಡದಂತೆ ತಿಳಿಸಿದ ಕಾರಣದಿಂದ ಭಕ್ತರು ತಮ್ಮ ಮಕ್ಕಳನ್ನು ಸಿಡಿ ಕಂಭಕ್ಕೆ ಮುಟ್ಟಿಸಿ, ಭಕ್ತಿ ಸಮರ್ಪಿಸಿದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು.
ಗ್ರಾಮದ ಮುಖಂಡರು ಗಂಡು ಮಕ್ಕಳಿಗಾದರೂ ಸಿಡಿ ಆಡಲು ಅನುಮತಿ ಕೊಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಧಿ ಇಲಾಖೆಯ ಅಧಿಧಿಕಾರಿ ಚಂದ್ರಪ್ಪ ಅವರನ್ನು ಕೇಳಿದರಾದರೂ ಅನುಮತಿ ಸಿಗಲಿಲ್ಲ. ಸಿಡಿಯ ಕಂಬದ ಮೇಲೆ ಮಕ್ಕಳನ್ನು ಮಾತ್ರ ಮುಟ್ಟಿಸಲು ಅನುಮತಿ ನೀಡಿದರು.
ಹುಚ್ಚವನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರ ಆರಾಧ್ಯ ದೈವ ಪ್ರತಿ ವರ್ಷವು ಜಾತ್ರೆಯನ್ನು ವಾರವಿಡಿ ವಿಜೃಭಣೆಯಿಂದ ಆಚರಣೆ ಮಾಡುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಚಂದ್ರಪ್ಪ, ದೇವದಾಸಿ ಪುನರ್ವಸತಿ ಯೋಜನೇಯ ಅನುಷ್ಠಾನ ಅಧಿಕಾರಿಗಳದ ಪ್ರಜಾ° ,ಮೊಕ್ಷಪತಿ ಪಿಎಸ್‌ಐ ಶ್ರೀಧರ್, ಕಂದಾಯ ನಿರೀಕ್ಷಕ ಚಂದ್ರಪ್ಪ ಇತರರಿದ್ದರು.