Advertisement

ಸಿಡಿ ಪ್ರಕರಣದಿಂದ ಪಕ್ಷದ ವರ್ಚಸಿಗೆ ಧಕ್ಕೆ : ವಿಜಯೇಂದ್ರ

08:20 PM Mar 16, 2021 | Team Udayavani |

ತರೀಕೆರೆ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಸಿಡಿ ಪ್ರಕರಣವನ್ನು ರಾಜ್ಯ ಸರಕಾರ ಎಸ್‌ಐಟಿ ತನಿಖೆಗೆ ಒಳಪಡಿಸಿದೆ. ಸಿಡಿಯಲ್ಲಿರುವ ವಿಚಾರದ ಸತ್ಯಾಸತ್ಯತೆಯನ್ನು ತನಿಖೆ ನಡೆಸಿದ ನಂತರ ತಿಳಿದು ಬರಲಿದೆ. ಎಲ್ಲಾ ರೀತಿಯಲ್ಲೂ ಸಮಗ್ರ ತನಿಖೆ ಮಾಡಲಾಗುವುದು ಎಂದು ಬಿಜೆಪಿ ಉಪಾದ್ಯಕ್ಷ ಬಿ.ವೈ.ವಿಜೇಯಂದ್ರ ತಿಳಿಸಿದರು.

Advertisement

ಪಟ್ಟಣದಲ್ಲಿ ಬೈಕ್‌ ಜಾಥಾದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಕರಣದ ಬಗ್ಗೆ ಈಗಾಗಲೇ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ತನಿಖೆಯಿಂದ ಹೊರಬರುವ ವಿಚಾರದ ನಂತರ ರಾಜ್ಯ ಸರಕಾರ ಮತ್ತು ಬಿಜೆಪಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಪಕ್ಷದ ವರ್ಚಸ್ಸಿಗೆ ಸ್ವಲ್ಪ ಮಟ್ಟಿನ ಧಕ್ಕೆಯಾದರೂ ಸಹ ಸಿಡಿಯಲ್ಲಿರುವ ವಿಚಾರದಲ್ಲಿ ಕೆಲವು ಸಂದೇಹಗಳಿವೆ ಎಂದರು. ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಕಾರಣದಿಂದಾಗಿ ಪಕ್ಷದ ನಿಷ್ಟಾವಂತರಿಗೆ ಸ್ಥಾನಮಾನ ದೊರೆಯುವಲ್ಲಿ ನಿಧಾನವಾಗಿದೆ.

ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾಗಿದೆ ಎಂದರು. ಶಾಸಕ ಡಿ.ಎಸ್‌. ಸುರೇಶ್‌ ಅವರು ಈಗಾಗಲೇ ಜಿಲ್ಲಾ ಮಟ್ಟದ ನಾಯಕರಾಗಿ ಬೆಳೆಯುತ್ತಿದ್ದಾರೆ. ಹಲವಾರು ದಶಕಗಳಿಂದ ರಾಜಕಾರಣದಲ್ಲಿದ್ದಾರೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಪಕ್ಷದ ನಿಷ್ಠಾವಂತರು ಕೂಡ. ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದರು. ಇದಕ್ಕೂ ಮುನ್ನ ಲಕ್ಕವಳ್ಳಿ ಕ್ರಾಸ್‌ ನಿಂದ ಶಾಸಕರ ಮನೆಯ ತನಕ ಬೈಕ್‌ಜಾಥಾ ನಡೆಯಿತು ನೂರಾರು ಕಾರ್ಯಕರ್ತರು ಬೈಕ್‌ ಜಾಥಾದಲ್ಲಿ ಭಾಗವಹಿಸಿದ್ದರು.

ಶಾಸಕರ ಮನೆಗೆ ಬಂದಾಗ ವಿಜೇಯಂದ್ರ ಅವರನ್ನು ಆರತಿ ಎತ್ತಿ ಸ್ವಾಗತಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಶಾಸಕ ಡಿ.ಎಸ್‌. ಸುರೇಶ್‌, ಜಿ.ಪಂ ಸದಸ್ಯ ಕೆ.ಆರ್‌. ಆನಂದಪ್ಪ, ತಾಪಂ ಅದ್ಯಕ್ಷೆ ಪದ್ಮಾವತಿ, ಟಿಎಪಿಸಿಎಂಎಸ್‌ಅದ್ಯಕ್ಷ ಎಸ್‌.ಬಿ. ಆನಂದಪ್ಪ, ಮಂಡಲ ಅದ್ಯಕ್ಷ ಅಜಯ್‌, ತಾಪಂ ಸದಸ್ಯರು, ಪಕ್ಷದ ವಿವಿಧ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next