ವಿಜಯಪುರ : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಮಹಿಳಾ ಸಂರಕ್ಷಣಾ ದಳದಿಂದ ಜಿಲ್ಲೆಯಲ್ಲಿರುವ ಯುವತಿ ಕುಟುಂಬದ ಇಬ್ಬರು ಸದಸ್ಯರಿಗೆ ಹೇಳಿಕೆ ನೀಡಲು ಮಾ.29 ರಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 61/2021 ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆಯುವ ಅಗತ್ಯವಿದೆ. ಹೀಗಾಗಿ ಮಾ.29 ರಂದು ಬೆಂಗಳೂರಿನ ಮಡಿವಾಳದ ಸಹಾಯಕ ಪೊಲೀಸ್ ಆಯುಕ್ತರು, ವಿಶೇಷ ತನಿಖಾ ತಂಡ, ಸಿಸಿಬಿ ಇವರ ಎದುರು ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಜಿಲ್ಲೆಯ ಪಟ್ಟಣವೊಂದರಲ್ಲಿ ಸಿಡಿ ಲೇಡಿ ಅಜ್ಜಿಯ ಮನೆ ಇದ್ದು, ಸದರಿ ಮನೆಯ ಕಾಂಪೌಂಡ್ ಪ್ರವೇಶದ ಗೇಟ್ ಗೆ ಇಬ್ಬರು ವ್ಯಕ್ತಿಗಳಿಗೆ ಹೇಳಿಕೆ ನೀಡಲು ಆಗಮಿಸುವಂತೆ ಪ್ರತ್ಯೇಕವಾಗಿ ಎರಡೂ ನೋಟಿಸ್ ಅಂಟಿಸಲಾಗಿದೆ.
ಸದರಿ ಪ್ರಕರಣದಲ್ಲಿ ತಮ್ಮ ಹೇಳಿಕೆ ಪಡೆಯುವುದು ಅಗತ್ಯವಾಗಿದೆ. ಹೀಗಾಗಿ ನೋಟೀಸ್ ತಲುಪಿದ/ನೋಡಿದ ತಕ್ಷಣ ಹೇಳಿಕೆ ನೀಡಲು ಆಗಮಿಸುವಂತೆ ಸಹಾಯಕ ಪೊಲೀಸ್ ಕಮಿಷನರ್ ಕಚೇರಿಯ ಮಹಿಳಾ ಸಂರಕ್ಷಣಾ ವಿಭಾಗದ ಸಿಪಿಐ ಮಹ್ಮದ್ ಸಿರಾಜ ಅವರ ಹೆರಸರಿನಲ್ಲಿ ಪೊಲೀಸ್ ನೋಟಿಸ್ ಜಾರಿ ಮಾಡಲಾಗಿದೆ.