ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವಿಡಿಯೋ ಸಂಬಂಧ ಪೊಲೀಸ್ ವಿಚಾರಣೆಗೆ ಒಳಗಾಗಿರುವ ಟಿವಿ ಪತ್ರಕರ್ತರು ನೀಡಿರುವ ಆಘಾತಕಾರಿ ಮಾಹಿತಿಗಳು ರಾಜಕೀಯ ನಾಯಕರೊಬ್ಬರತ್ತಲೇ ಬೊಟ್ಟು ಮಾಡುತ್ತಿವೆ.
ಪೊಲೀಸ್ ಮೂಲಗಳ ಪ್ರಕಾರ, “ಸೆಕ್ಸ್ ಸಿಡಿ’ ಡೀಲ್ ಮಾಡುತ್ತಿರುವ ಟಿ.ವಿ. ಪತ್ರಕರ್ತರು “ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಈ ಹಿಂದೆಯೂ ಹಲವು ರಾಜಕೀಯ ನಾಯಕರ, ಗಣ್ಯ ವ್ಯಕ್ತಿಗಳ ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಜತೆಗೆ, ಈ ತಂಡದ ಬಲೆಗೆ, ಹಾಲಿ ಸಚಿವರು, ಶಾಸಕರು ಮತ್ತು ಮಾಜಿ ಸಚಿವರು ಬಿದ್ದಿರುವ ಗುಮಾನಿಯಿದೆ. ಈ ಬಗ್ಗೆ ಮಾಹಿತಿಗಳನ್ನು ವಿಚಾರಣೆಗೆ ಒಳಗಾದ ತಂಡ ಬಾಯಿಬಿಟ್ಟಿದೆಎನ್ನಲಾಗಿದ್ದು, ತನಿಖೆಯ ಜಾಡು ಈಗ ಬೇರೊಂದು ದಿಕ್ಕಿನತ್ತ ಸಾಗುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಶ್ನಿತ ಟಿ.ವಿ. ಪತ್ರಕರ್ತರ ಬಳಿ ಕೆಲವು ಪ್ರಮುಖ ರಾಜಕಾರಣಿಗಳ ಅಶ್ಲೀಲ ವಿಡಿ ಯೋ ಗ ಳು ಇದೆ ಎನ್ನಲಾಗಿದೆ.
ಆರು ತಿಂಗಳ ಹಿಂದೆ ಯೇ ಡೀಲ್: ಪೊಲೀಸರ ಪ್ರಕಾರ, ಆರು ತಿಂಗಳ ಹಿಂದೆಯೇ ಪ್ರಕರಣದ ಆರೋಪಿಗಳ ಪೈಕಿ ಕೆಲ ವರು ರಮೇಶ್ ಜಾರ ಕಿ ಹೊಳಿ ಆಪ್ತರೊಬ್ಬರ ಬಳಿ ಡೀಲ್ ನಡೆಸಿದ್ದಾರೆ. ಆ ಆಪ್ತರು, ರಮೇಶ್ ಮರ್ಯಾದೆ ಹಾಳಾಗಬಾರದು ಎಂದು 5.75 ಕೋಟಿ ರೂ. ಕೊಟ್ಟು ಎಲ್ಲಿಯೂ ವೈರಲ್ ಮಾಡದ್ದಂತೆ ಮನವಿ ಮಾಡಿ ದ್ದರು. ಆದರೆ, ಆರೋಪಿಗಳು ಒಂದು ತಿಂಗಳ ಬಳಿಕ ಮತ್ತೂಮ್ಮೆ ಹತ್ತಾರು ಕೋಟಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ರಾಷ್ಟ್ರೀಯ ಪಕ್ಷದ ಮಹಾನಾಯಕರ ಜತೆ ಕಾಣಿಸಿಕೊಂಡ ಆರೋ ಪಿಗಳು: ಪ್ರಕ ರಣದಲ್ಲಿ ಸಿಲುಕಿರುವ ಪತ್ರ ಕರ್ತರ ಪೈಕಿ ಇಬ್ಬರು ರಾಷ್ಟ್ರೀಯ ಪಕ್ಷ ವೊಂದರ ಇಬ್ಬರು ನಾಯಕರ ಜತೆ ಗುರುತಿಸಿ ಕೊಂಡಿದ್ದಾರೆ. ಆ ಪಕ್ಷದ ಒಬ್ಬ ಮಹಾ ನಾ ಯಕನ ಹೆಸರು ಪ್ರಕರಣದಲ್ಲಿ ತಳುಕು ಹಾಕಿ ಕೊಂಡಿ ದೆ. ಇದೀಗ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸಾಮಾ ಜಿಕ ಜಾಲತಾಣಗಳ ಅಧಿಕೃತ ಖಾತೆಗಳಲ್ಲಿ ಪರಸ್ಪರ ಕೆಸರೆಚಾಟ ನಡೆಸುತ್ತಿವೆ.
ತುಮಕೂರು ಜಿಪಂ ಆಕಾಂಕ್ಷಿ!: ಅನಂತ ರ ರಾಷ್ಟ್ರೀಯ ಪಕ್ಷ ವೊಂದರ ರಾಜ್ಯದ ನಾಯಕರೊಬ್ಬರ ಆಪ್ತನಾಗಿದ್ದ. ಅಲ್ಲದೆ, ಜನವರಿಯಲ್ಲಿ ತನ್ನ ಮನೆ ಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆ ನಾಯಕರನ್ನು ಮುಖ್ಯ ಅತಿಥಿಯಾಗಿ ಅಹ್ವಾನಿಸಿದ್ದ. ಆ ನಾಯಕನ ವಿಶ್ವಾಸಗಳಿಸಿದ್ದ ಪತ್ರಕರ್ತ ಮುಂಬರುವ ತುಮ ಕೂರು ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದ ಎಂಬುದು ಮೂಲಗಳಿಂದ ತಿಳಿದು ಬಂದಿದೆ.