Advertisement
ಯುವತಿಯನ್ನು ಶನಿವಾರವೂ ಎಸ್ಐಟಿ 5 ತಾಸು ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸಿ.ಡಿ. ಬಿಡುಗಡೆಗೆ ಮುನ್ನ ಯುವತಿಯ ಜತೆಗೆ ಸುಧಾಕರ್ ಹಣಕಾಸಿನ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಎಸ್‌ಐಟಿಯವರು ಶುಕ್ರವಾರ ಕರೆ ಮಾಡಿದ್ದರು. ಸೋಮವಾರ ಅಥವಾ ಮಂಗಳವಾರ ಫೋನ್ ಮಾಡಿ ಬರುತ್ತೇನೆ. ಆ ಯುವತಿ ಜತೆ ನನಗೆ ಸಂಬಂಧವಿಲ್ಲ. ಹಣಕಾಸು ನಂಟು ಕೂಡ ಇಲ್ಲ. ನಾನು ಒಬ್ಬ ಮಾಜಿ ಸಚಿವ. ಒಬ್ಬ ವ್ಯಾಪಾರಸ್ಥ ಕೂಡ. ನನಗೆ ಹತ್ತಾರು ಕರೆಗಳು ಬರುತ್ತವೆ. ಆಕೆಯೂ ಕರೆ ಮಾಡಿರಬಹುದು. ಆಕೆಗೆ ಹತ್ತು ರೂಪಾಯಿ ಕೂಡ ಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತರು. ಎಸ್‌ಐಟಿ ಯಾವ ವಿಚಾರಕ್ಕೆ ಕರೆ ಮಾಡಿದ್ದಾರೆ ಎಂಬ ಬಗ್ಗೆ ಗೊತ್ತಾಗಿಲ್ಲ ಎಂದಿದ್ದಾರೆ.
Related Articles
Advertisement
ಮತ್ತೂಬ್ಬ ಮಾಜಿ ಶಾಸಕ ಖೆಡ್ಡಾಕ್ಕೆ?ಮೈಸೂರು ಭಾಗದ ರಾಷ್ಟ್ರೀಯ ಪಕ್ಷವೊಂದರ ಮಾಜಿ ಶಾಸಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಸಹ ಯುವತಿ ಜತೆ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಚಟುವಟಿಕೆಗಳು ಗಮನಿಸಿದರೆ ದೊಡ್ಡ ಮಟ್ಟದ ಜಾಲವೊಂದು ಯುವತಿಯನ್ನು ಮುಂದಿಟ್ಟುಕೊಂಡು ರಾಜಕಾರಣಿಗಳು, ಉದ್ಯಮಿಗಳು, ಪ್ರತಿಷ್ಠಿತ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡುತ್ತಿತ್ತಾ? ಎಂದು ಎಸ್‌ಐಟಿ ಅನುಮಾನ ವ್ಯಕ್ತಪಡಿಸಿದೆ. ಮೂವರಿಗೆ ನೋಟಿಸ್?
ಸಿ.ಡಿ. ಯುವತಿ ಜತೆ ಸಂಪರ್ಕದಲ್ಲಿದ್ದರೂ ಎಂದು ಹೇಳಲಾದ ಮಾಜಿ ಸಚಿವ ಡಿ. ಸುಧಾಕರ್, ಮಾಜಿ ಶಾಸಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗೆ ಎಸ್‌ಐಟಿ ತನಿಖಾಧಿಕಾರಿಗಳು ಸದ್ಯದಲ್ಲೇ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.