ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದೆನ್ನಲಾದ ಸಿಡಿ ಪ್ರಕರಣದಲ್ಲಿನ ಯುವತಿ ಇಂದು ಯಾವುದೇ ಕ್ಷಣದಲ್ಲೂ ಕೋರ್ಟ್ ಗೆ ಹಾಜರಾಗುವ ಸಾಧ್ಯತೆಯಿದೆ. ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕೋರ್ಟ್ ಅನುಮತಿ ನೀಡಿದ್ದು, ಯಾವುದೇ ಕ್ಷಣದಲ್ಲೂ ಹಾಜರಾಗಬಹುದು ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.
24ನೇ ಎಪಿಎಂಸಿ ನ್ಯಾಯಾಲಯದಲ್ಲಿ ಇಂದು , ಎಸ್ ಐಟಿ ಮತ್ತು ತನಿಖಾಧಿಕಾರಿ ಮೇಲೆ ಯುವತಿಗೆ ಯಾವುದೇ ನಂಬಿಕೆಯಿಲ್ಲ ಎಂದು ಜಗದೀಶ್ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.
ಇದನ್ನೂ ಓದಿ:ಠಾಣೆಗೆ ಬರುವವರಿಗೆ ‘ಗಂಗಾಜಲ’ ಹಾಕುವ ಪೊಲೀಸ್ ಅಧಿಕಾರಿ : ಕಾರಣ ಇಷ್ಟೇ ನೋಡಿ!
ಮೊದಲು ಯುವತಿಯ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ. ನಂತರ ತನಿಖಾಧಿಕಾರಿ ಹೇಳಿಕೆ ಪಡೆಯಲಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. ತನಿಖಾಧಿಕಾರಿ ಮತ್ತು ಯುವತಿ ಪರ ವಕೀಲರನ್ನು ಹೊರತು ಪಡಿಸಿ ಉಳಿದವರೆನ್ನು ಹೊರಗೆಕಳುಹಿಸಿ, ಯುವತಿಯನ್ನು ಎಂದು ಹಾಜರು ಪಡಿಸಬೇಕು ಎನ್ನುವ ಬಗ್ಗೆ ಸೂಚಿಸಿದರು.
ಸಿಡಿ ಪ್ರಕರಣವು 24ನೇ ಎಪಿಎಂಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ಎಸ್ ಐಟಿ ತನಿಖಾಧಿಕಾರಿಯನ್ನು ಬದಲಾಯಿಸಲಾಗಿದೆ. ಎಸಿಪಿ ಕವಿತಾ ಅವರನ್ನು ತನಿಖಾಧಿಕಾರಿಯನ್ನು ನೇಮಿಸಿಲಾಗಿದೆ.
ಇದನ್ನೂ ಓದಿ: ಹೈಕೋರ್ಟ್ ಸಿಜೆಗೆ ಸಿ.ಡಿ. ಯುವತಿ ಇಮೇಲ್ ಪತ್ರ