Advertisement
ಇದಲ್ಲದೆ ಇಂತಹ ಕ್ಯಾಮರಾಗಳನ್ನು ಇನ್ನಷ್ಟು ಹೆಚ್ಚು ಕೇಂದ್ರಗಳಲ್ಲಿ ಸ್ಥಾಪಿಸಲು ಕೂಡ ತೀರ್ಮಾನಿಸಲಾಗಿದೆ. ಆ ಮೂಲಕ ಅಪರಾಧ ಕೃತ್ಯಗಳನ್ನು ನಡೆಸುತ್ತಿರುವವರು ಮತ್ತು ರಸ್ತೆ ಅಪಘಾತಗಳಿಗೆ ಕಾರಣವಾಗುವ ವಾಹನಗಳ ಚಾಲಕರನ್ನು ಸೆರೆಹಿಡಿದು ಅವರಿಗೆ ಕಾನೂನು ಪರ ಶಿಕ್ಷೆ ವಿಧಿಸಲು ಗೃಹ ಖಾತೆ ಮುಂದಾಗಿದೆ. ಕೇರಳದಲ್ಲಿ ಇತ್ತೀಚೆಗೆ ಕೊಲೆ, ದರೋಡೆ, ರಾಜಕೀಯ ಕೊಲೆ, ಹಿಂಸಾಚಾರ, ಮತೀಯ ಗಲಭೆ, ಕಳವು ಮತ್ತು ಅವಘಡಗಳ ಸಂಖ್ಯೆ ಮಿತಿಮೀರುತ್ತಿದ್ದು, ಅದನ್ನು ಸಂಪೂರ್ಣವಾಗಿ ತಡೆಗಟ್ಟುವುದೇ ಅತ್ಯಾಧುನಿಕ ಕ್ಯಾಮರಾಗಳನ್ನು ಸ್ಥಾಪಿಸುವುದರ ಪ್ರಧಾನ ಉದ್ದೇಶವಾಗಿದೆ.
ರಾಜ್ಯದಲ್ಲಿ ಗೂಂಡಾಗಳನ್ನು ಹತ್ತಿಕ್ಕಲು ಆಧುನಿಕ ಶೈಲಿಯ ವಿಶೇಷ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲು ಗೃಹ ಖಾತೆ ತೀರ್ಮಾನಿಸಿದೆ. ಕೇರಳದ ಹಲವೆಡೆಗಳಲ್ಲಿ ಅನೇಕ ರೀತಿಯ ಗೂಂಡಾಕೃತ್ಯಗಳು ನಡೆಯುತ್ತಿವೆ. ಮಾದಕದ್ರವ್ಯ ಸಾಗಾಟ, ಭೂ ಮಾಫಿಯಾ, ಹವಾಲಾ ಹಣ, ಕಾಳಧನ, ಲೈಂಗಿಕ ದಂಧೆ, ಮಾನವ ಕಳ್ಳಸಾಗಾಟ, ಅಕ್ರಮ ಹಫ್ತಾ ವಸೂಲಿ, ಮಕ್ಕಳ ಸಾಗಾಟ, ಅವಯವ ಅಪಹರಣ, ಅಪಾರ ಬಡ್ಡಿ ದರದಲ್ಲಿ ಸಾಲ ನೀಡಿ ಮರುಪಾವತಿಸದವರ ಶೋಷಣೆ ಇತ್ಯಾದಿ ನಡೆಯುತ್ತಿರುತ್ತವೆ. ಮಾತ್ರವಲ್ಲದೆ ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ವ್ಯಕ್ತಿಗಳು ಗೂಂಡಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ಗೂಂಡಾ ತಂಡಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವ ಗುರಿಯೊಂದಿಗೆ ವಿಶೇಷ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ.