Advertisement

ಪಿಸ್ತೂಲ್‌ ಮಾರಾಟ: ಕಿಂಗ್‌ಪಿನ್‌ ಸೆರೆ

02:34 PM Aug 08, 2021 | Team Udayavani |

ಬೆಂಗಳೂರು: ನೆರೆ ರಾಜ್ಯಗಳಿಂದ ಕಂಟ್ರಿಮೆಡ್‌ ಪಿಸ್ತೂಲ್‌, ರೈಫ‌ಲ್‌ಗ‌ಳನ್ನು ತಂದು ಬೆಂಗಳೂರಿನ ರೌಡಿಶೀಟರ್‌ಗಳು ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಕಲಾಸಿಪಾಳ್ಯ ನಿವಾಸಿ, ಪ್ರಕರಣದ ಕಿಂಗ್‌ಪಿನ್‌ ಅಯಾಜ್‌ ವುಲ್ಲಾ(30), ಆರ್‌.ಟಿ. ನಗರದ ಸೈಯ್ಯದ್‌ ಸಿರಾಜ್‌ ಅಹಮ್ಮದ್‌ (42), ಆರ್‌.ಕೆ.ಹೆಗಡೆ ನಗರದ ಮೊಹಮದ್‌ ಅಲಿ (32), ರಾಜಾನು ಕುಂಟೆ ನಿವಾಸಿ ಅರುಣ್‌ ಕುಮಾರ್‌ (26) ಬಂಧಿತರು. ಅವರಿಂದ ಎರಡು ಕಂಟ್ರಿಮೇಡ್‌ ಗನ್‌, 3 ಕಂಟ್ರಿಮೇಡ್‌ ಪಿಸ್ತೂಲ್‌, 2 ರೈಫಲ್‌, 19 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದರು.

ಈ ಹಿಂದೆ ನಗರದಲ್ಲಿ ರೌಡಿಶೀಟರ್‌ಗಳಿಗೆ ಅಕ್ರಮವಾಗಿ ಕಂಟ್ರಿಮೇಡ್‌ ಪಿಸ್ತೂಲ್‌, ಗನ್‌ಗಳ ಮಾರಾಟ ಪ್ರಕರಣಗಳ ಬಗ್ಗೆ ಸಿಸಿಬಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಮಧ್ಯೆ ಕೆಲ ದಿನಗಳ ಹಿಂದೆ ಅಯಾಜ್‌ ವುಲ್ಲಾ ಬಗ್ಗೆ ಮಾಹಿತಿ ಪಡೆದು ಆತನ  ಚಲನವಲನಗಳ ಮೇಲೆ ನಿಗಾವಹಿಸಲಾಗಿತ್ತು. ಈತ ನೆರೆ ರಾಜ್ಯಗಳಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.ಈಸಂಬಂಧ ಇನ್‌ಸ್ಪೆಕ್ಟರ್‌ ಹಜರೇಶ್‌ ಕಿಲ್ಲೇದಾರ್‌ ನೇತೃತ್ವದ ‌ ಮಹಿಳಾ ಸಂರಕ್ಷಣಾ ದಳದ ತಂಡ ಎಲ್ಲಿಂದ ಪೂರೈಕೆ ಯಾಗುತ್ತಿದ್ದ ಎಂಬ ಮಾಹಿತಿ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಾಗಿ ಶೋಧ ಮುಂದುವರಿದಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಮಾಹಿತಿ ನೀಡಿದರು.

ಪ್ರಕರಣದ ಕಿಂಗ್‌ಪಿನ್‌ ಅಯಾಜ್‌ವುಲ್ಲಾ ತನ್ನಜಾಲವನ್ನು ಉತ್ತರ ಪ್ರದೇಶ, ಶಾಮಲಿ, ಪಂಜಾಬ್‌ ನ ಅಮೃತಸರ, ಮಹಾರಾಷ್ಟ್ರದ ಶಿರಡಿಯಲ್ಲಿ ತನ್ನ ವಿಸ್ತರಿಸಿಕೊಂಡಿದ್ದು, ಕಡಿಮೆ ಮೊತ್ತಕ್ಕೆ ಕಂಟ್ರಿಮೆಡ್‌ ಪಿಸ್ತೂಲ್‌, ಗನ್‌, ರೈಫ‌ಲ್‌ಗ‌ಳನ್ನು ಖರೀದಿಸಿ ರೈಲು, ಬಸ್‌ಗಳ ಮೂಲಕ ತರುತ್ತಿದ್ದ. ಅವುಗಳನ್ನು ಇತರೆ ಆರೋಪಿಗಳಿಗೆ ಕೊಟ್ಟು ರೌಡಿಗಳು, ಅಕ್ರಮ ಚಟುವಟಿಕೆನಡೆಸುವವರಿಗೆ ಲಕ್ಷಾಂತರರೂ.ಗೆ ಮಾರಾಟ
ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.

Advertisement

ಈತನ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಡಕಾಯಿತಿ ಹಾಗೂ ನಗರದ ಇತರೆ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಈತ ನೆರೆ
ರಾಜ್ಯಗಳಿಂದ ಶಸ್ತ್ರಾಸ್ತ್ರಗಳನ್ನು ತಂದು ಇತರೆ ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದ. ಸೈಯದ್‌ ಸಿರಾಜ್‌ ಅಹಮ್ಮದ್‌ ವಿರುದ್ಧ ಕೆ.ಜಿ.ಹಳ್ಳಿ ಠಾಣೆ ಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತ ಅಯಾಜ್‌ ವುಲ್ಲಾನಿಂದ 1 ಕಂಟ್ರಿಮೇಡ್‌ ಪಿಸ್ತೂಲ್‌ ಹಾಗೂ 1 ಕಂಟ್ರಿ ಮೇಡ್‌ ರೈಫೈಲ್‌ನ್ನು ಖರೀದಿಸಿದ್ದ. ಮತ್ತೂಬ್ಬ ಆರೋಪಿ ಮೊಹಮ್ಮದ್‌ ಅಲಿ ವಿರುದ್ಧ ಶಿವಾಜಿನಗರ ಠಾಣೆ ರೌಡಿಶೀಟರ್‌ ಆಗಿದ್ದು, ಈತ ಅಯಾಜ್‌ನಿಂದ 1 ಕಂಟ್ರಿಮೇಡ್‌ ಪಿಸ್ತೂಲ್‌, ರೈಫ‌ಲ್‌ಖರೀದಿಸಿದ್ದಾನೆ.

ಅರುಣ್‌ ಕುಮಾರ್‌ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದೆ. ಈತ ಅಯಾಜ್‌ನಿಂದ ತನ್ನ ಏರಿಯಾದಲ್ಲಿನ ಜನರಿಗೆ
ಹೆದರಿಸುವ ಸಲುವಾಗಿ ಒಂದುಕಂಟ್ರಿಮೆಡ್‌ ಗನ್‌ನ್ನು ಖರೀದಿಸಿದ್ದ ಎಂದು ಪೊಲೀಸರು ಹೇಳಿದರ

ಮೂವರು ಸಹೋದರರಿಂದ ದಂಧೆ!
ಅಯಾಜ್‌ವುಲ್ಲಾ ನೆರೆ ರಾಜ್ಯಗಳಿಂದ ತರುತ್ತಿದ್ದಕಂಟ್ರಿಮೇಡ್‌ ಪಿಸ್ತೂಲ್‌, ಗನ್‌, ರೈಫ‌ಲ್‌ಗ‌ಳನ್ನು ನಗರದ ರೌಡಿಗಳಿಗೆ ಒಂದು ಲಕ್ಷದಿಂದ ಮೂರು ಲಕ್ಷ ರೂ. ವರೆಗೆ ಮಾರಾಟ ಮಾಡುತ್ತಿದ್ದ. ಅಲ್ಲದೆ, ಈ ಅಕ್ರಮ ಶಸ್ತ್ರಾಸ್ತ್ರ ದಂಧೆಯಲ್ಲಿ ಅಯಾಜ್‌ವುಲ್ಲಾ ಮಾತ್ರವಲ್ಲದೆ, ಆತನ ಇಬ್ಬರು ಸಹೋದರರಾದ ಫ‌ಯಾಜ್‌ವುಲ್ಲಾ ಮತ್ತು ನಯ್‌ಜ್‌ವುಲ್ಲಾಕೂಡ ಭಾಗಿಯಾಗಿದ್ದಾರೆ ಎಂಬುದು ಪತ್ತೆಯಾಗಿದೆ. ಫ‌ಯಾಜ್‌ವುಲ್ಲಾ ನೆರೆ ರಾಜ್ಯದ ಕಂಟ್ರಿಮೇಡ್‌ ಪಿಸ್ತೂಲ್‌ ಉತ್ಪಾದಕ ದಂಧೆಕೋರರ ಜತೆ ನೇರ ಸಂಪರ್ಕದಲ್ಲಿದ್ದು, ಆತನೇಕಿಂಗ್‌ಪಿನ್‌ ಆಗಿದ್ದಾನೆ. ಆತ ಸೂಚನೆ ಮೇರೆಗೆ ಅಯಾಜ್‌ ವುಲ್ಲಾ ನಗರಕ್ಕೆ ಶಸ್ತ್ರಾಸ್ತ್ರ ತಂದು ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next