Advertisement

ಮತ್ತೆ ಸಿಸಿಬಿ ರೈಡ್: ನಕಲಿ ಥರ್ಮೋಮೀಟರ್, 5000 ಸ್ಯಾನಿಟೈಸರ್ ವಶ

09:18 AM Apr 02, 2020 | keerthan |

ಬೆಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ದೇಶವ್ಯಾಪಿ ವ್ಯಾಪಿಸುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಆತಂಕವನ್ನೇ ಬಂಡವಾಳವಾಗಿ ಉಪಯೋಗಿಸಿಕೊಂಡಿರುವ ಕೆಲವರು ಹಣ ಮಾಡುವ ಕಳ್ಳ ದಾರಿ ಹಿಡಿಯುತ್ತಿದ್ದಾರೆ. ಅಂತಹುದೇ ಪ್ರಕರಣವೊಂದು ಬೆಂಗಳೂರಿನಿಂದ ವರದಿಯಾಗಿದೆ.

Advertisement

ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳು ಮಂಗಳವಾರ ಎರಡು ಕಡೆ ದಾಳಿ ನಡೆಸಿ ನಕಲಿ ಥರ್ಮೋ ಮೀಟರ್ ಗಳು ಮತ್ತು ನಕಲಿ ಸ್ಯಾನಿಟೈಸರ್ ಗಳನ್ನು ವಶಪಡಿಸಿಕೊಂಡಿದ್ಧಾರೆ.

ತಯಾರಕರ ಯಾವುದೇ ಹೆಸರು ಅಥವಾ ಮೂಲದ ಗುರುತಿಲ್ಲದ ಥರ್ಮೋ ಮೀಟರ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಮತ್ತೊಂದು ದಾಳಿಯಲ್ಲಿ 5000 ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next