Advertisement
ಸೋಮವಾರ ಆರೋಪಿ ರವಿ ಬೆಳಗೆರೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭದಲ್ಲಿ ಸಿಸಿಬಿ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ರವಿಬೆಳೆಗೆರೆ ಮತ್ತು ಅಪರಾಧ ಪ್ರಪಂಚದ ಜತೆಗಿನ ನಂಟಿನ ಬಗ್ಗೆ ಅರ್ಜಿಯಲ್ಲಿ ಉಲ್ಲೇಖೀಸಿದ್ದಾರೆ.ಭೂಗತ ಲೋಕದ ಸಂಪರ್ಕವನ್ನು ವೈಯಕ್ತಿಕ ಹಾಗೂ ವ್ಯವಹಾರಿಕ ಬದುಕಿನ ಸಮಸ್ಯೆಗಳಿಗೆ ರವಿ ಬೆಳಗೆರೆ ಉಪಯೋಗಿಸಿಕೊಂಡು ಕೊಲೆಗೆ ಸಂಚು ರೂಪಿಸಿರುವ ಆರೋಪ ಹೊಂದಿದ್ದಾರೆ. ಅಪರಾಧ ಜಗತ್ತಿನ ಬಗ್ಗೆ ಹೆಚ್ಚೆಚ್ಚು ಬರೆಯುತ್ತಾ ಭೂಗತ ಪಾತಕಿಗಳ ಜತೆ ನೇರ ಸಂಪರ್ಕ ಹೊಂದಿದ್ದಾರೆ. ರವಿ ಬೆಳೆಗೆರೆ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದು, ಈ ಪರವಾನಗಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಹೆಚ್ಚಿನ ಗುಂಡುಗಳನ್ನು ಹೊಂದಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಪರವಾನಿಗೆ ಹೊಂದಿದ್ದ ಶಸ್ತ್ರವನ್ನೇ ಈ ಪ್ರಕರಣದಲ್ಲಿ ಬಳಸಿರುವುದು ಕಂಡು ಬಂದಿದೆ. ವೈಜ್ಞಾನಿಕ ತನಿಖೆಯಿಂದ ಸಾûಾ$Âಧಾರ ಸಂಗ್ರಹಿಸಬೇಕಾಗಿದ್ದು, ಅಲ್ಲಿಯವರೆಗೂ ಆರೋಪಿ ನ್ಯಾಯಾಂಗ ಬಂಧನಲ್ಲಿರುವ ಅಗತ್ಯವಿದೆಯೆಂದು ತಿಳಿಸಿದ್ದಾರೆ.
ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದ ರವಿ ಬೆಳಗೆರೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣದಲ್ಲಿ ಸಿಕ್ಕಿರುವ ತಾಂತ್ರಿಕ ಸಾಕ್ಷ್ಯಾಧಾರಗಳು ಇದ್ದರೂ ಆರೋಪಿಯಿಂದ ಪೂರ ಉತ್ತರ ದೊರೆಯುತ್ತಿತಿಲ್ಲ. ವಿಚಾರಣೆಗಿಂತ ನಾಲ್ಕು ದಿನಗಳ ಕಾಲ ರವಿಬೆಳಗೆರೆಯ ಯೋಗಕ್ಷೇಮ ನೋಡಿಕೊಳ್ಳುವುದರಲ್ಲೇ ಸಿಬ್ಬಂದಿ ಸುಸ್ತಾಗಿದ್ದಾರೆ. ಆರೋಗ್ಯದ ಸಮಸ್ಯೆ ಇರುವುದರಿಂದ ಪೊಲೀಸ್ ಕಸ್ಟಡಿಯಲ್ಲಿ ಹೆಚ್ಚಾ ಕಡಿಮೆ ಆದರೆ ತಾವೇ ತಲೆಕೊಡಬೇಕಾಗುತ್ತದೆ ಎನ್ನುವ ಆತಂಕದಿಂದ ರಾತ್ರಿ ಕಾವಲಿಗಿದ್ದ ಪೊಲೀಸರೂ ಒಂದು ಕ್ಷಣವೂ ಕಣ್ಣು ಮುಚ್ಚದಂತೆ ಕಾದಿದ್ದಾರೆ.
Related Articles
ವಿಚಾರಣೆ ಸಂದರ್ಭದಲ್ಲಿ ರವಿ ಬೆಳಗೆರೆ ಒತ್ತಡಕ್ಕೊಳಗಾಗುತ್ತಿದ್ದರು. ಈ ವೇಳೆ ವಿಪರೀತ ಸಿಗರೇಟ್ ಸೇದಬೇಕು ಎಂದು ಒತ್ತಾಯಿಸಿದ್ದರು. ಹೀಗೆ ಕಳೆದ ಮೂರು ದಿನಗಳಿಂದ ಅವರಿಗೆ ಸಿಗರೇಟ್ ಪೂರೈಕೆ ಮಾಡುವುದರಲ್ಲೇ ಸಾಕು ಸಾಕಾಗಿದೆ. ಗಂಟೆಗೆ ಒಂದು ಪ್ಯಾಕ್ ಎಂಬಂತೆ ನಿತ್ಯ ಕನಿಷ್ಠ 10 ಪ್ಯಾಕ್ ಸಿಗರೇಟ್ ಬೇಕಾಗಿತ್ತು. ಒಂದು ವೇಳೆ ಸಿಗರೇಟ್ ಕೊಡದಿದ್ದರೆ, ಎಲ್ಲಿಯೂ ಬರುವುದಿಲ್ಲ. ಏನನ್ನು ಹೇಳುವುದಿಲ್ಲ.ಹೀಗಾಗಿ ಅನಿವಾರ್ಯವಾಗಿ ದಿನಕ್ಕೆ ನಮ್ಮ ಜೇಬಿನಿಂದ 3 ಸಾವಿರ ರೂ. ಖರ್ಚು ಮಾಡಿ ಸಿಗರೇಟ್ ತಂದು ಕೊಡುತ್ತಿದ್ದೆವು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದರು.
Advertisement