Advertisement
ಈ ಕುರಿತು ಪ್ರಕರಣದ ತನಿಖಾಧಿಕಾರಿಗಳು ಶನಿವಾರ ಜನಾರ್ದನ ರೆಡ್ಡಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಆ್ಯಂಬಿಡೆಂಟ್ ಕಂಪೆನಿ ಮಾಲೀಕ ಸೈಯದ್ ಫರೀದ್ ಅಹಮದ್ ಹಾಗೂ ಇನ್ನಿತರರ ವಿರುದ್ಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣ ಸಂಬಂಧ ನವೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ಜನಾರ್ದನ ರೆಡ್ಡಿ ಅವರಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ರೆಡ್ಡಿಯವರು ವಾಸವಿರುವ ಪಾರಿಜಾತ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 2ರ ವಿಳಾಸಕ್ಕೆ ನೋಟಿಸ್ ನೀಡಿದ್ದಾರೆ.
ಜನಾರ್ದನ ರೆಡ್ಡಿ, ಸೈಯದ್ ಅಹಮದ್ ಫರೀದ್ ಬಳಿ 57 ಕೆ.ಜಿ ಚಿನ್ನದ ಗಟ್ಟಿ ಪಡೆದುಕೊಂಡ ಚಿನ್ನದ ಗಟ್ಟಿಯ ಮೂಲದ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಚುರುಕೊಳಿಸಿದ್ದಾರೆ. ಚಿನ್ನಕ್ಕಾಗಿ ಶೋಧ ಮುಂದುವರಿಸಿರುವ ಸಿಸಿಬಿ ಅಧಿಕಾರಿಗಳು ಈಗಾಗಲೇ ರೆಡ್ಡಿ ಅವರ ಪಾರಿಜಾತ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್, ಬಳ್ಳಾರಿ ನಿವಾಸ, ಓಎಂಸಿ ಕಂಪೆನಿ ಕಚೇರಿ, ಸಂಬಂಧಿಕರ ವಿಳಾಸಗಳಲ್ಲಿ ಶೋಧ ನಡೆಸಿದ್ದು ಹಲವು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಮತ್ತೂಂದೆಡೆ 57 ಕೆ.ಜಿ ಚಿನ್ನವನ್ನು ರೆಡ್ಡಿ ಸೇರಿದಂತೆ ಇತರೆ ಆರೋಪಿಗಳು ಯಾವ ಉದ್ದೇಶಕ್ಕೆ ಬಳಸಿದ್ದರು ಎಂಬ ಅಂಶದ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಿರೀಕ್ಷಣಾ ಜಾಮೀನು ಅರ್ಜಿ ನವೆಂಬರ್ 12ಕ್ಕೆ ಮುಂದೂಡಿಕೆ!
ಮತ್ತೂಂದೆಡೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ನವೆಂಬರ್ 12ಕ್ಕೆ ಮುಂದೂಡಿದೆ.
Related Articles
ಈ ಬೆಳವಣಿಗೆಗಳ ಮಧ್ಯೆಯೇ ಅ.28ರಂದು ವಿಚಾರಣೆಗೆ ಕರೆಸಿಕೊಂಡಿದ್ದ ಸಿಸಿಬಿ ಡಿಸಿಪಿ ಗಿರೀಶ್, ಗಾಲಿ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ವಿರುದಟಛಿ ಹೇಳಿಕೆ ನೀಡಬೇಕೆಂದು ಬೆದರಿಸಿದರು. ಇದಕ್ಕೊಪ್ಪದಿದ್ದಾಗ ಗಿರೀಶ್, ಎಸಿಪಿ ವೆಂಕಟೇಶ್ ಪ್ರಸನ್ನ , ನನ್ನ ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ನಾವು ಹೇಳಿದಂತೆ ಕೇಳದಿದ್ದರೆ ಹೆಂಡತಿ ಮಕ್ಕಳನ್ನು ಕಿಡ್ನಾಪ್ ಮಾಡುತ್ತೇವೆ. ನಿನ್ನ ಸ್ನೇಹಿತರನ್ನು ಸಿಲುಕಿಸಿ ಜೈಲಿಗೆ ಕಳುಹಿಸುತ್ತೇವೆಂದು ಬೆದರಿಸಿದರು ಎಂದು ಪ್ರಕರಣದ ಆರೋಪಿಯಾದ ರಾಜಮಹಲ್ ಜ್ಯುವೆಲರ್ ಎಸ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
Advertisement
ಈ ಕುರಿತು ಶುಕ್ರವಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿರುವ ಅವರು, ವಿನಾಕಾರಣ ಮಾನಸಿಕ ಹಾಗೂದೈಹಿಕ ಹಿಂಸೆ ನೀಡಿ ಬೆದರಿಸಿ ಕೆಲವು ಹೇಳಿಕೆಗಳನ್ನು ಮಾಡಿಸಿಕೊಂಡಿದ್ದಾರೆ. ಹೀಗಾಗಿ, ಮಾನವ ಹಕ್ಕುಗಳ ಉಲ್ಲಂಘನೆ ಮೇರೆಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದ್ದಾರೆ. ರಮೇಶ್‌ಮನೆ ಮೇಲೆ ಸಿಸಿಬಿ ದಾಳಿ
ಬಳ್ಳಾರಿ: ಇಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕೋಟೆ ಪ್ರದೇಶದಲ್ಲಿರುವ ಚಿನ್ನಾಭರಣ ಅಂಗಡಿ ಮಾಲೀಕ ಎಸ್.ರಮೇಶ ನಿವಾಸದ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ದಾಳಿ ನಡೆಸಿದೆ. ಸಿಸಿಬಿ ಎಸಿಪಿ ಮಂಜುನಾಥ್ ಚೌಧರಿ ನೇತೃತ್ವದ 8 ಅಧಿಕಾರಿಗಳ ತಂಡ ದಾಳಿ ನಡೆಸಿ 2 ಗಂಟೆ ತಪಾಸಣೆ ನಡೆಸಿದೆ.