Advertisement

ಶಿವಾಜಿನಗರ ಪಾಲಿಕೆ ಸದಸ್ಯೆ ಮನೆ ಮೇಲೆ ಸಿಸಿಬಿ ದಾಳಿ

11:51 AM Nov 14, 2018 | Team Udayavani |

ಬೆಂಗಳೂರು: ಹಫ್ತಾ ವಸೂಲಿ ಆರೋಪದ ಮೇಲೆ ಶಿವಾಜಿನಗರ ವಾರ್ಡ್‌ನ ಬಿಬಿಎಂಪಿ ಸದಸ್ಯೆ ಫ‌ರೀದಾರ ಪತಿ, ರೌಡಿಶೀಟರ್‌ ಇಶಿ¤ಯಾಕ್‌ ಫೈಲ್ವಾನ್‌ಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಮಂಗಳವಾರ ಬೆಳಗ್ಗೆ ಫ‌ರೀದಾ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ.

Advertisement

ಆದರೆ, ದಾಳಿ ಮಾಹಿತಿ ಪಡೆದ ಇಶಿ¤ಯಾಕ್‌ ತಲೆಮರೆಸಿಕೊಂಡಿರುವುದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ. ಇಶಿ¤ಯಾಕ್‌ ವಿರುದ್ಧ ಶಿವಾಜಿನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದ್ದು, ಈತ ಡಿ.ಜಿ.ಹಳ್ಳಿ, ಶಿವಾಜಿನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಹಫ್ತಾ ವಸೂಲಿ ಮಾಡುತ್ತಿದ್ದ.

ಈ ಸಂಬಂಧ ಕೆಲ ಸಾರ್ವಜನಿಕರು ನೇರವಾಗಿ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ವಂಚನೆಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೂಂದೆಡೆ ಅ್ಯಂಬಿಡೆಂಟ್‌ ಪ್ರಕರಣ ಸಂಬಂಧ ರೌಡಿಶೀಟರ್‌ ಇಶಿ¤ಯಾಕ್‌ಗಾಗಿ ಶೋಧ ನಡೆಸಲಾಗುತ್ತಿದೆ ಎಂಬ ಕುರಿತು ಸ್ಪಷ್ಟನೆ ನೀಡಿದ ಸಿಸಿಬಿ ಡಿಸಿಪಿ ಗಿರೀಶ್‌, ಅ್ಯಂಬಿಡೆಂಟ್‌ ಪ್ರಕರಣಕ್ಕೂ ಇಶಿಯಾಕ್‌ ಶೋಧಕ್ಕೂ ಸಂಬಂಧವಿಲ್ಲ. ಇತ್ತೀಚೆಗೆ ಇಶಿ¤ಯಾಕ್‌ ರೌಡಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next