Advertisement

CCA: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ

07:15 PM Oct 31, 2024 | Poornashri K |

ಸರ್ಕಾರಿ ನೌಕರಿ ಕನಸು ಕಾಣುವ ಯುವ ಜನಾಂಗದ ಭವಿಷ್ಯಕ್ಕೆ ಬಿಸಿಲನಾಡಿನ ಚಾಣಕ್ಯ ಭದ್ರ ಬುನಾದಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವಲ್ಲಿ ಚಾಣಕ್ಯ ಕರಿಯರ್‌ ಅಕಾಡೆಮಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ನಿಂಗನಗೌಡ ಮಡಿವಾಳಪ್ಪಗೌಡ ಬಿರಾದಾರ ಇದರ ರೂವಾರಿಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಾವಿರಾರು ಯುವಕರು ಸರ್ಕಾರಿ ನೌಕರಿ ಪಡೆದು ಜೀವನ ರೂಪಿಸಿಕೊಂಡಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ನೆಚ್ಚಿನ ಜ್ಞಾನ ಮಂದಿರವಾದ ‘ಚಾಣಕ್ಯ’ ಸಂಸ್ಥೆ ಈಗ ಹೆಮ್ಮರದಂತೆ ಬೆಳೆದು ನಿಂತಿದೆ. 1999ರಲ್ಲಿ ಆರಂಭವಾದ ಚಾಣಕ್ಯ ಸಂಸ್ಥೆ ಈಗ 25 ವರ್ಷ ಪೂರೈಸಿದೆ.

Advertisement

ಎನ್‌.ಎಂ.ಬಿರಾದಾರ ವಿಜಯಪುರ ಜಿಲ್ಲೆಯ ಆಗಿನ ಸಿಂದಗಿ, ಈಗಿನ ದೇವರಹಿಪ್ಪರಗಿ ತಾಲೂಕಿನ ತಿಳಗೂಳ ಎಂಬ ಪುಟ್ಟ ಗ್ರಾಮದವರು. ಮೂಲತಃ ಕೃಷಿ ಕುಟುಂಬದ ಬಿರಾದಾರ ಅವರಿಗೆ ತಂದೆ ಮಡಿವಾಳಪ್ಪಗೌಡ, ತಾಯಿ ನೀಲಮ್ಮ ಬಿರಾದಾರ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಸಿದರು. ಪೋಷಕರ ಆಸೆ, ಆಶಯದಂತೆ ಚೆನ್ನಾಗಿ ವಿದ್ಯೆ ಕಲಿತರು. ಎಫ್‌ಡಿಎ ಪರೀಕ್ಷೆ ಬರೆದು, ಪಾಸಾಗಿ ಸರ್ಕಾರಿ ನೌಕರಿ ಪಡೆದು, ನಂತರ ಹೊರಬಂದು ಅವರಲ್ಲಿ ಚಿಗುರೊಡೆದಿದ್ದೇ ಕೋಚಿಂಗ್‌ ಕ್ಲಾಸ್‌ ಎಂಬ ಮೊಳಕೆ. ಸಿಂದಗಿಯಲ್ಲಿ ಮೊದಲಿಗೆ ಕೇವಲ 8 ವಿದ್ಯಾರ್ಥಿ ಗಳಿಂದ ಚಾಣಕ್ಯ ಕರಿಯರ್‌ ಅಕಾಡೆಮಿ ಶುರು ಮಾಡಿದ ಬಿರಾದಾರ ಅವರು ನಂತರ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಸ್ಥಳಾಂತರಿಸಿದರು. ಅಲ್ಲಿಂದ ಆರಂಭವಾದ ಬಿರಾದಾರ ಅವರ ‘ಚಾಣಕ್ಯ’ ಪಯಣ ತಿರುಗಿ ನೋಡಿದ್ದೇ ಇಲ್ಲ.

2 ಲಕ್ಷಕ್ಕೂ ಹೆಚ್ಚು ಯುವಕರಿಗೆ ಕ್ಲಾಸ್‌: ಹಿಂದುಳಿದ ಭಾಗದಿಂದ ಬಂದಿರುವ ಎನ್‌.ಎಂ. ಬಿರಾದಾರ ಅವರು ಇಲ್ಲಿನ ಮಕ್ಕಳ ನೋವನ್ನು ಸ್ವತಃ ಉಂಡವರು. ಕಡುಬಡವರ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಸ್ಪರ್ಧಾತ್ಮಕ ತರಬೇತಿ ನೀಡಲೇಬೇಕೆಂಬ ಛಲ-ದೃಢ ಸಂಕಲ್ಪ ಹೊಂದಿದರು. ಹೀಗಾಗಿ ಕಳೆದ ಎರಡೂ ದಶಕಗಳಿಂದ ಯುವಕರ ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕುವಲ್ಲಿ ಶ್ರಮಿಸುತ್ತಿದ್ದಾರೆ. ಇದರ ಪ್ರತಿಫಲ ಎಂಬಂತೆ ‘ಚಾಣಕ್ಯ’ ಸಂಸ್ಥೆ ನಾಡಿನ ವಿದ್ಯಾರ್ಥಿಗಳು, ಯುವಕ-ಯುವತಿಯರ ನೆಚ್ಚಿನ, ಪ್ರಥಮಾದ್ಯತೆಯ ಕೋಚಿಂಗ್‌ ಕೇಂದ್ರವಾಗಿ ರೂಪಗೊಂಡಿದೆ. ಪ್ರಾರಂಭದಲ್ಲಿ 8 ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಸಂಸ್ಥೆಯಲ್ಲಿ ಈಗ ಪ್ರತಿವರ್ಷ ತರಬೇತಿ ಪಡೆಯುತ್ತಿರುವವರ ಸಂಖ್ಯೆ 10,000ಕ್ಕೆ ತಲುಪಿದೆ. ವಿದ್ಯಾರ್ಥಿಗಳು ಕೆಎಎಸ್‌, ಪೊಲೀಸ್‌, ಶಿಕ್ಷಣ, ಕಂದಾಯ, ಪಂಚಾಯತ್‌ ರಾಜ್‌, ಬ್ಯಾಂಕಿಂಗ್‌ ಸೇವೆ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದಾರೆ. ಇದುವರೆಗೂ 2ಲಕ್ಷಕ್ಕೂ ಹೆಚ್ಚು ಯುವಕರು ಕೋಚಿಂಗ್‌ ತೆಗೆದುಕೊಂಡಿದ್ದಾರೆ. ಸಾವಿರಾರು ಯುವಕರು-ಯುವತಿಯರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ.

ಆಧ್ಯಾತ್ಮಿಕ-ಮನೋವೈಜ್ಞಾನಿಕತೆಯುಳ್ಳ ಅವರ ಹಿತ ನುಡಿಗಳು ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳ ಕಲಿಕಾಸಕ್ತಿ, ಕಲಿಕಾ ಶಕ್ತಿ ದ್ವಿಗುಣ ಗೊಳಿಸುವಂತೆ ಮಾಡಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶೇಷ ತರಗತಿ ನೀಡುತ್ತಾರೆ. ಈ ಮೂಲಕ ವಿದ್ಯಾರ್ಥಿಗಳಲ್ಲಿನ ಆತಂಕ, ದುಗುಡ, ಹತ್ತಾರು ಗೊಂದಲಗಳನ್ನು ನಿರ್ವಹಿಸಿ, ಸಾಧನೆಯ ಹಾದಿಗೆ ಪರಿಹಾರೋಪಾಯ ನೀಡುತ್ತಾರೆ. ತಾವು ಮಾತ್ರವಲ್ಲ, ನುರಿತ ತಜ್ಞರಿಂದಲೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿಸುತ್ತಾರೆ. ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಸಾಧಕರನ್ನು ಆಹ್ವಾನಿಸಿ ಉಪನ್ಯಾಸ ಕೊಡಿಸುತ್ತಾರೆ. ಜತೆಗೆ ರಾಜ್ಯದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ಗುರುರಾಜ ಕರ್ಜಗಿ, ಗುರುರಾಜ ಬುಲಬುಲೆ, ಕ್ಯಾಪ್ಟನ್‌ ಆನಂದ, ನಾಗತಿಹಳ್ಳಿ ಜಯಪ್ರಕಾಶ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪ್ರಮುಖ ಗಣ್ಯರಿಂದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಕೊಡಿಸುತ್ತಾರೆ. ಪರಸ್ಪರ ಸಂವಾದಗಳಿಗೆ ಅವಕಾಶ ಮಾಡಿ ಕೊಡುತ್ತಾರೆ. ವಿದ್ಯಾರ್ಥಿಗಳಲ್ಲಿ ಉತ್ಸಾಹ ಹೆಚ್ಚಿಸಿ ಕಲಿಕಾಕ್ಷಮತೆಗೆ ಪೂರಕ ವಾತಾವರಣ ನಿರ್ಮಿಸುತ್ತಾರೆ.

Advertisement

ಉಚಿತ ಕೋಚಿಂಗ್‌: ಚಾಣಕ್ಯ ಕರಿಯರ್‌ ಅಕಾಡೆಮಿ ಮೂಲಕ ಎನ್‌.ಎಂ. ಬಿರಾದಾರ ಅವರು ಮಾಜಿ ಸೈನಿಕರಿಗೆ ಉಚಿತ ಕೋಚಿಂಗ್‌ ಕೊಡುತ್ತಾರೆ. 1999ರ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ಸೈನಿಕರ ಪರಾಕ್ರಮ, ಬಲಿದಾನಕ್ಕೆ ಗೌರವವಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ವರ್ಷ ಸುಮಾರು 200ಕ್ಕೂ ಹೆಚ್ಚು ಮಾಜಿ ಸೈನಿಕರು ‘ಚಾಣಕ್ಯ’ದಲ್ಲಿ ತರಬೇತಿ ಪಡೆದಿದ್ದಾರೆ. ಹಲವು ಮಾಜಿ ಯೋಧರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದಲ್ಲದೇ ವಿಶೇಷ ಚೇತನರು, ವಿಧವೆಯರು, ದೇವದಾಸಿ ಮಕ್ಕಳು, ಅನಾಥ ಮಕ್ಕಳು, ಪೊಲೀಸ್‌ ಬ್ಯಾಚಿನ ವಿದ್ಯಾರ್ಥಿನಿಯರು ಸಹ ಉಚಿತ ತರಬೇತಿ ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

– ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
– ರಾಜ್ಯದಲ್ಲೇ ಮುಂಚೂಣಿಯಲ್ಲಿ
– ನಿಂಗನಗೌಡ ಮಡಿವಾಳಪ್ಪಗೌಡ ಬಿರಾದಾರ ರೂವಾರಿ
– ಸಾವಿರಾರು ಯುವಕರಿಗೆ ಮಾರ್ಗದರ್ಶನ

ಚಾಣಕ್ಯ ಪ್ರಕಾಶನ: ಎನ್‌.ಎಂ.ಬಿರಾದಾರ ಶ್ರಮದಿಂದ ಚಾಣಕ್ಯ ಅಕಾಡೆಮಿ ರಾಜ್ಯದಲ್ಲೇ ಅತ್ಯಂತ ಯಶಸ್ವಿ ಕೋಚಿಂಗ್‌ ಸೆಂಟರ್‌ ಎಂಬ ಹಿರಿಮೆಗೆ ಪಾತ್ರವಾಗಿದೆ. ಆದರೆ ಅವರು ಕೋಚಿಂಗ್‌ ನೀಡುವುದು ಮಾತ್ರವಲ್ಲ ಅದರಿಂದ ಹೊರಗೆ ಉಳಿದ ವಿದ್ಯಾರ್ಥಿಗಳ ಬಗ್ಗೆಯೂ ಚಿತ್ತ ಹರಿಸಿದರು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎಂಬ ಜೀವನದ ಅಗ್ನಿ ಪರೀಕ್ಷೆಯನ್ನು ಪ್ರತಿಯೊಬ್ಬರು ಜಯಿಸಲಿ ಎಂಬ ಎನ್‌ಎಂಬಿ ಅವರ ಮನೋಭಾವ ತೋರಿಸುತ್ತದೆ. ಕೋಚಿಂಗ್‌ ಪಡೆಯಲು ಸಾಧ್ಯವಾಗದ ಯುವಕರಿಗಾಗಿಯೇ ಸ್ಪರ್ಧಾ ಚಾಣಕ್ಯ ಮಾಸಪತ್ರಿಕೆ ಆರಂಭಿಸಿದರು. ಉದ್ಯೋಗಾಕಾಂಕ್ಷಿ ಗಳಿಗಾಗಿ ಜಾಬ್‌ ನ್ಯೂಸ್‌ ಹೆಸರಿನಲ್ಲಿ ಪಾಕ್ಷಿಕ ಪತ್ರಿಕೆ ಶುರು ಮಾಡಿದರು. ಜಾಬ್‌ ನ್ಯೂಸ್‌ ಆಯಾ ಉದ್ಯೋಗಗಳ ಸಮಗ್ರ ಮಾಹಿತಿ ಒದಗಿಸುತ್ತದೆ. ಇದರ ಹೊರತಾಗಿಯೂ ಸಾಹಿತ್ಯ, ಸಾಹಿತ್ಯಯೇತರ 60ಕ್ಕೂ ಹೆಚ್ಚು ಕೃತಿಗಳನ್ನು ಚಾಣಕ್ಯ ಪ್ರಕಾಶನದಿಂದ ಹೊರ ತಂದಿದ್ದಾರೆ. ದೀಪದ ದಾರಿ, ಚಾಣಕ್ಯ ಕಣಜ, ಸ್ಪರ್ಧಾ ಮಾರ್ಗ ಪುಸ್ತಕಗಳು ಮತ್ತು ನಾನಾ ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ತಾವು ಲೇಖಕರೂ ಹೌದು ಎಂಬುದನ್ನು ನಿರೂಪಿಸಿದ್ದಾರೆ. ಎನ್‌ಎಂಬಿ ಅವರ ಚಾಣಕ್ಯ ಕಣಜ ಪುಸ್ತಕವು ರಾಜ್ಯದಲ್ಲಿ ಅಂದಾಜು 3ಲಕ್ಷ ಪ್ರತಿಗಳು ಮಾರಾಟಗೊಂಡ ಏಕೈಕ ಪುಸ್ತಕ ಎಂಬುವುದು ಮತ್ತೂಂದು ವಿಶೇಷ.

13 ವರ್ಷಗಳಿಂದ ಸ್ಪರ್ಧಾರ್ಥಿಗಳ ಮೆಚ್ಚಿನ ಮಾಸಪತ್ರಿಕೆಯಾದ ಸ್ಪರ್ಧಾ ಚಾಣಕ್ಯ

ಎನ್‌ಎಂಬಿಗೆ ಸಂದ ಪ್ರಶಸ್ತಿಗಳು: ಎನ್‌.ಎಂ. ಬಿರಾದಾರ ಅವರ ಸತತ ಪರಿಶ್ರಮ, ಸಾಧನೆ ಹುಡುಕಿಕೊಂಡು ಪ್ರಶಸ್ತಿಗಳು ಅರಸಿ ಬಂದಿವೆ. ಬೆಂಗಳೂರಿನ ಬಸವ ಸಮಿತಿಯ ಬಸವ ಭೂಷಣ, ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಿದ್ದೇಶ್ವರ ರತ್ನ, ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ನಾಗಮ್ಮ ಪ್ರತಿಷ್ಠಾನದ ರವಿ ರೊಹಿಡೇಕರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಎನ್‌.ಎಂ.ಬಿರಾದಾರ ಅವರು ನಡೆದಾಡುವ ದೇವರೆಂದೇ ಖ್ಯಾತಿವೆತ್ತ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ. ಶ್ರೀಗಳ ಆಧ್ಯಾತ್ಮಿಕ ಪ್ರವಚನಗಳಿಗೆ ಅನುಗುಣವಾಗಿ ಅದರ ದಾರಿಯಲ್ಲೇ ನಡೆದು ಸರಳ ಜೀವನ ನಡೆಸುತ್ತಿದ್ದಾರೆ. ಜತೆಗೆ ಕೋಚಿಂಗ್‌ಗಾಗಿ ಬರುವ ವಿದ್ಯಾರ್ಥಿಗಳಿಗೂ ಸಿದ್ದೇಶ್ವರ ಶ್ರೀಗಳು ನೀಡಿದ್ದ ಪ್ರವಚನಗಳ ಸಾರ ತಿಳಿಸಿಕೊಡುತ್ತಾರೆ.

ನಿಂಗನಗೌಡ ಮಡಿವಾಳಪ್ಪಗೌಡ ಬಿರಾದಾರ

ಹುಟ್ಟಿದ ಸ್ಥಳ, ವರ್ಷ: 1973, ತಿಳಗೂಳ ಗ್ರಾಮ, ದೇವರಹಿಪ್ಪರಗಿ ತಾಲೂಕು, ವಿಜಯಪುರ ಜಿಲ್ಲೆ

ಶೈಕ್ಷಣಿಕ ಅರ್ಹತೆ: ಎಂಕಾಂ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಚಾಣಕ್ಯ ಕರಿಯರ್‌ ಅಕಾಡೆಮಿ ಸ್ಥಾಪನೆ: ಸಿಂದಗಿಯಲ್ಲಿ ಪ್ರಾರಂಭ, 2000ಕ್ಕೆ ವಿಜಯಪುರಕ್ಕೆ ಸ್ಥಳಾಂತರ

ಪ್ರಧಾನ ಸಂಪಾದಕರು: ಸ್ಪರ್ಧಾ ಚಾಣಕ್ಯ (ಮಾಸ ಪತ್ರಿಕೆ),ಜಾಬ್‌ ನ್ಯೂಸ್‌ (ಪಾಕ್ಷಿಕ ಪತ್ರಿಕೆ)

ಲೇಖಕರು: ದೀಪದ ದಾರಿ, ಚಾಣಕ್ಯ ಕಣಜ, ಸ್ಪರ್ಧಾ ಮಾರ್ಗ

ಪ್ರಕಾಶನ: ಸಾಹಿತ್ಯ, ಸಾಹಿತ್ಯಯೇತರ 60ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ.

ವಿಳಾಸ: ಚಾಣಕ್ಯ ಕರಿಯರ್‌ ಅಕಾಡೆಮಿ, ಮಲಘಾಣ ಬಿಲ್ಡಿಂಗ್‌, ಮೀನಾಕ್ಷಿ ಚೌಕ್‌, ವಿಜಯಪುರ

– 25ನೇ ವಸಂತಗಳನ್ನು ಪೂರೈಸಿದ ಚಾಣಕ್ಯ ಸಂಸ್ಥೆ
– 1999ರಲ್ಲಿ ಆರಂಭವಾದ ಹೆಮ್ಮೆಯ ಸಂಸ್ಥೆ
– ಮೊದಲಿಗೆ ಕೇವಲ 8 ವಿದ್ಯಾರ್ಥಿಗಳಿಂದ ಶುರು
– ನಂತರ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಸ್ಥಳಾಂತರ

ಆರ್ಥಿಕ ಕೊಡುಗೆ
ವಿಜಯಪುರದಲ್ಲಿ ಚಾಣಕ್ಯ ಕರಿಯರ್‌ ಅಕಾಡೆಮಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯಲು ಬರುತ್ತಿದ್ದು, ಇದರಿಂದ ಹೊಟೇಲ್‌, ಸ್ಟೇಷನರಿ, ಬುಕ್‌ಸ್ಟಾಲ್‌, ಝೆರಾಕ್ಸ್‌ ಇತ್ಯಾದಿ ಅಂಗಡಿಯವರಿಗೆ ಉತ್ತಮ ವ್ಯಾಪಾರವೂ ಆಗುತ್ತಿದೆ. ಜಿಲ್ಲೆಯ ಆರ್ಥಿಕ ಬೆಳವಣೆಯಲ್ಲಿಯೂ ಅಕಾಡೆಮಿ ಕೈಜೋಡಿಸಿದೆ ಎಂದರೆ ಅತಿಶಯೋಕ್ತಿ ಎನಿಸದು.

ಈ ಕೆಳಗಿನ ಕೋರ್ಸ್‌ಗಳಿಗೆ ನಮ್ಮಲ್ಲಿ ತರಬೇತಿ ನೀಡಲಾಗುವುದು
– KAS, PSI, PDO, TET+ CET, FDA, SDA, BANKING, POLICE
– TET-CET-HSTR ONLINE CLASSES
ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು

ಮಲಘಾಣ ಬಿಲ್ಡಿಂಗ್‌, ಮಿನಾಕ್ಷಿ ಚೌಕ್‌, ವಿಜಯಪುರ.
Tel: 08352-222197, 240197
Cell: 7795397159, 9900056218

Advertisement

Udayavani is now on Telegram. Click here to join our channel and stay updated with the latest news.

Next