Advertisement

ಸಿಸಿ ರಸ್ತೆ ಕಾಮಗಾರಿ ಕಳಪೆ: ಗ್ರಾಮಸ್ಥರ ಆರೋಪ

06:13 PM Apr 29, 2021 | Team Udayavani |

ಜಗಳೂರು: ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ಸ್ವಗ್ರಾಮದಲ್ಲಿ ನಡೆಯುತ್ತಿರುವ 1 ಕೋಟಿ 5 ಲಕ್ಷ ರೂ.ವೆಚ್ಚದ ಸಿಸಿ ರಸ್ತೆಯ ಕಾಮಗಾರಿ ಸಂಪೂರ್ಣವಾಗಿಕಳಪೆಯಾಗುತ್ತಿದೆ ಎಂದು ಗ್ರಾಮಸ್ಥರೇ ಕಾಮಗಾರಿಯನ್ನುತಡೆ ಹಿಡಿದಿದ್ದಾರೆ.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಅವರುರಾಜ್ಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿದ್ದಾರೆ.

Advertisement

ಇವರು ಮೂಲತ ಬರದನಾಡು ಎಂಬ ಹಣೆ ಪಟ್ಟಿಹೊತ್ತಿರುವ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುಚ್ಚಂಗಿಪುರಗ್ರಾಮದವರಾಗಿದ್ದಾರೆ. ಇವರು ಸ್ವ ಗ್ರಾಮದ ಅಭಿವೃದ್ದಿಗೆಒತ್ತು ನೀಡಿ ಶಾಲಾಕಟ್ಟಡ ಅಭಿವೃದ್ಧಿ ಪಡಿಸಿದ್ದರು.

ಈಗಇವರ 1.ಕೋಟಿ 5 ಲಕ್ಷ ರೂ ಅನುದಾನದಲ್ಲಿ ಗ್ರಾಮದಲ್ಲಿ21 ರಸ್ತೆಗಳ ನಿರ್ಮಾಣ ಮಾಡಲು ಪಂಚಾಯತ್‌ ರಾಜ್‌ಇಂಜಿನಿಯರಿಂಗ್‌ ಇಲಾಖೆ ಜಗಳೂರು ಉಪವಿಭಾಗಕ್ಕೆನೀಡಿದ್ದು, ಬೆಂಗಳೂರಿನ ಗುತ್ತಿಗೆದಾರ ಗುತ್ತಿಗೆ ಪಡೆದುಕಾಮಗಾರಿ ಪ್ರಾರಂಭಿಸಿದ್ದಾರೆ.

ಗ್ರಾಮದಲ್ಲಿ ಜನಸಂಚಾರವಿಲ್ಲದ ಕಡೆ ಸಿಸಿರಸ್ತೆ ಮಾಡುತ್ತಿದ್ದು, ಇದರು ಸಂಪೂರ್ಣ ಕಳಪೆಗುಣಮಟ್ಟದಿಂದ ಕೂಡಿದೆ. ಪ್ಲಾನ್‌ ಎಸ್ಟಿಮೇಟ್‌ ಪ್ರಕಾರಮಾಡುತ್ತಿಲ್ಲ. ಗುಣಮಟ್ಟದ ಸಿಮೆಂಟ್‌ ಬಳಸಿಲ್ಲ. ಉತ್ತಮಮರಳು, ಜೆಲ್ಲಿ ಬಳಕೆ ಮಾಡಿಲ್ಲ ಎಂದು ಗ್ರಾಮಸ್ಥರುಕೆಲಸವನ್ನು ತಡೆ ಹಿಡಿದ್ದಾರೆ.ಗ್ರಾಮದ ಅಭಿವೃದ್ಧಿಯಾಗಬೇಕೆಂದು ರವಿಕುಮಾರ್‌ಅನುದಾನ ನೀಡಿದ್ದಾರೆ.

ಆದರೆ ಬೆಂಗಳೂರಿನಗುತ್ತಿಗೆದಾರರ ಸಂಪೂರ್ಣ ಕಳಪೆ ಕಾಮಗಾರಿಮಾಡುತ್ತಿದ್ದಾರೆ. ನಾವು ಗುಣಮಟ್ಟದಿಂದ ಕೆಲಸ ಮಾಡಿಎಂದು ಹೇಳಿದರೆ ನನಗೆ ಇಷ್ಟ ಬಂದಂತೆ ಮಾಡುತ್ತೇನೆಎಂದು ಉಡಾಫೆಯಾಗಿ ಹೇಳುತ್ತಾರೆ. ಅ ಧಿಕಾರಿಗಳುಸಹ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಈ ಹಿಂದೆ ದಲಿತರಕಾಲೋನಿಗೆ ಬಂದ ರಸ್ತೆಗಳನ್ನು ಬೇರೆಡೆ ಮಾಡುತ್ತಿದ್ದಾರೆಎಂದರು. ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ,ಸಾವಿತ್ರಿ ಶೇಖರಪ್ಪ, ಗ್ರಾಮದ ರವಿ, ಶ್ರೀನಿವಾಸ್‌ ಸೇರಿದಂತೆಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next