Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆ  ಕೇಂದ್ರ ಸಿಸಿ ಕೆಮರಾ ಕಡ್ಡಾಯ

10:01 AM Feb 22, 2018 | |

ಸುಳ್ಯ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳು ಈ ಬಾರಿ ಕಡ್ಡಾಯವಾಗಿ ಸಿಸಿ ಕೆಮರಾ ಅಳವಡಿಸಿಕೊಳ್ಳಬೇಕು ಎಂದು ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿ ಶಾಲಾ ಸಂಚಿತ ನಿಧಿಯಿಂದ ಗರಿಷ್ಠ 40,000 ರೂ. ತನಕ ಅನು ದಾನ ಬಳಸಿಕೊಳ್ಳಲು ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರವಾಗುವ ಶಾಲೆಗಳಿಗೆ ಅನುಮತಿ ನೀಡಿದೆ.

Advertisement

ಅಕ್ರಮ ವ್ಯವಹಾರ ಮತ್ತು ಇತರ ಲೋಪ ಗಳನ್ನು ತಡೆಯುವ ಉದ್ದೇಶ ದಿಂದ ಆಯಾ ಕೇಂದ್ರಗಳಲ್ಲಿ ಪರೀಕ್ಷಾ ಚಟುವಟಿಕೆಯ ಮೇಲೆ ನಿಗಾ ಇರಿ ಸುವುದಲ್ಲದೆ ಚಿತ್ರೀಕರಣ ನಡೆಸುವ ಉದ್ದೇಶದಿಂದ ಈ ಪೂರಕ ಕ್ರಮವನ್ನು ಕೈಗೊಳ್ಳಲಾಗಿದೆ.

ರಾಜ್ಯದ ನಾನಾ ಭಾಗಗಳಲ್ಲಿ ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಇತ್ಯಾದಿ ಅಕ್ರಮ ಬೆಳಕಿಗೆ ಬಂದಿ ರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸುರಕ್ಷಾ ಕ್ರಮಗಳಿಗೆ ಪ್ರಾಧಾನ್ಯ ನೀಡಿದ್ದು, ಸಿಸಿ ಕೆಮರಾ ಕಡ್ಡಾಯ ಒಂದಾಗಿದೆ. ಕಳೆದ ಸಾಲಿನ ಪರೀಕ್ಷೆ ಸಂದರ್ಭದಲ್ಲೂ ಸಿಸಿ ಕೆಮರಾ ಅಳವಡಿಕೆಗೆ ನಿರ್ದೇಶನ ನೀಡ ಲಾಗಿತ್ತು, ಆದರೆ ಅದು ಕಡ್ಡಾಯ ಆಗಿರಲಿಲ್ಲ.

ಕನಿಷ್ಠ ನಾಲ್ಕು ಕೆಮರಾ
ಪರೀಕ್ಷಾ ಕೇಂದ್ರಗಳಾಗಿರುವ ಎಲ್ಲ ಸರಕಾರಿ ಶಾಲೆಗಳ ಎಲ್ಲ ಪರೀಕ್ಷಾ ಕೊಠಡಿ ಗಳಲ್ಲಿ ಸಿಸಿ ಕೆಮರಾಗಳನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಆರ್ಥಿಕ ಸಮಸ್ಯೆ ಅಡ್ಡಿಯಾದರೆ, ಪ್ರಶ್ನೆ ಪತ್ರಿಕೆ ಸಂಗ್ರಹಿಸಿರುವ ಕೊಠಡಿ ಸಹಿತ ಕೇಂದ್ರದ ಆಯಕಟ್ಟಿನ ಸ್ಥಳಗಳಲ್ಲಿ ಕನಿಷ್ಠ ನಾಲ್ಕು ಸಿಸಿ ಕೆಮರಾ ಅಳವಡಿಕೆ ಕಡ್ಡಾಯ ಎಂದು ಮಂಡಳಿಯ ಸುತ್ತೋಲೆ ನಿರ್ದೇಶಿಸಿದೆ.

ಇದಕ್ಕಾಗಿ ಶಾಲಾ ಸಂಚಿತ ನಿಧಿ ಯಿಂದ 40 ಸಾವಿರ ರೂ. ತನಕ ಬಳಸಿ ಕೊಳ್ಳಬಹುದು. ಎಸೆಸೆಲ್ಸಿ  ಪರೀಕ್ಷಾ ಕೇಂದ್ರಗಳಾಗುವ ಖಾಸಗಿ ಮತ್ತು ಅನು ದಾನಿತ ವಿದ್ಯಾಸಂಸ್ಥೆಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಇಲಾಖೆ ಸುತ್ತೋಲೆ ಹೊರಡಿಸಿರುವ ಹಿನ್ನೆಲೆ ಯಲ್ಲಿ ಈಗಾಗಲೇ ಹೆಚ್ಚಿನ ಶಾಲೆಗಳಲ್ಲಿ ಸಿಸಿ ಕೆಮರಾ ಅಳವಡಿಕೆ ನಡೆದಿದೆ.

Advertisement

94 ಕೇಂದ್ರಗಳು
ಜಿಲ್ಲೆಯಲ್ಲಿ ಒಟ್ಟು 94 ಪರೀಕ್ಷಾ ಕೇಂದ್ರಗಳಿವೆ. ಇವುಗಳಲ್ಲಿ 90 ಕೇಂದ್ರ ಗಳನ್ನು ನಿಯಮಿತ ಹಾಜ ರಾಗುವ ವಿದ್ಯಾರ್ಥಿಗಳಿಗೆ ಹಾಗೂ ನಾಲ್ಕು ಕೇಂದ್ರ ಗಳನ್ನು ಖಾಸಗಿಯಾಗಿ ಪರೀಕ್ಷೆ ಬರೆಯುವವರಿಗೆ ಮೀಸಲಿರಿಸ ಲಾ ಗಿದೆ. ಮಂಗಳೂರು ಉತ್ತರದಲ್ಲಿ 21, ಮಂಗಳೂರು ದಕ್ಷಿಣದಲ್ಲಿ 20, ಬಂಟ್ವಾಳದಲ್ಲಿ 17, ಬೆಳ್ತಂಗಡಿಯಲ್ಲಿ 13, ಪುತ್ತೂರಿನಲ್ಲಿ 12, ಸುಳ್ಯದಲ್ಲಿ 7 ಮತ್ತು ಮೂಡಬಿದಿರೆಯಲ್ಲಿ 4 ಪರೀಕ್ಷಾ ಕೇಂದ್ರಗಳು ಇವೆ.

32,000 ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ ಒಟ್ಟು 32,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯ ಲಿದ್ದಾರೆ. ಇವರಲ್ಲಿ ತರಗತಿಗೆ ಹಾಜ ರಾಗಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿ ಗಳು

28,966 ಮಂದಿ; ಖಾಸಗಿ ಯಾಗಿ ಪರೀಕ್ಷೆ ಕಟ್ಟಿರುವವರು 1,218 ಮಂದಿ.
ತರಗತಿಗೆ ಹಾಜರಾಗಿ ಮರು ಪರೀಕ್ಷೆ ಬರೆಯಲಿರುವವರು 2,263 ಮಂದಿ, ಖಾಸಗಿಯಾಗಿ ಮರು ಪರೀಕ್ಷೆಗೆ ಹಾಜರಾಗುವವರು 342 ಮಂದಿ.

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next