Advertisement

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಸಿ ಕ್ಯಾಮೆರಾ ­

06:40 PM May 26, 2021 | Team Udayavani |

ವರದಿ  : ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ಲಾಕ್‌ಡೌನ್‌ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಮರ್ಪಕವಾಗಿ ಆಹಾರ ವಿತರಣೆ ಹಾಗೂ ಪಾರದರ್ಶಕತೆ ಕಾಪಾಡಲು ಸಿಸಿ ಕ್ಯಾಮೆರಾ ಅಳವಡಿಸಲು ಪಾಲಿಕೆ ಮುಂದಾಗಿದೆ.

ಮಹಾನಗರ ಎಲ್ಲಾ ಕ್ಯಾಂಟೀನ್‌ ಗಳ ಚಲನವಲನಗಳ ಮೇಲೆ ನಿಗಾ ಇಡಲು ವೈಫೈ ಮೂಲಕ ಪಾಲಿಕೆ ಕೇಂದ್ರದಲ್ಲಿರುವ ಕಂಟ್ರೋಲ್‌ ರೂಂಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಒಂದೆರೆಡು ದಿನದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಇಂದಿರಾ ಕ್ಯಾಂಟೀನ್‌ನಿಂದ ಬಡವರು, ನಿರ್ಗತಿಕರಿಗೆ ಪಾರ್ಸಲ್‌ ಪಡೆಯಲು ಅನುಮತಿಸಲಾಗಿದೆ. ಆದರೆ ಇಲ್ಲಿ ಆಹಾರ ಪೊಟ್ಟಣಗಳ ವಿತರಣೆಯ ಲೆಕ್ಕಾಚಾರ, ಗುಣಮಟ್ಟದ ಕುರಿತು ಕೆಲವರು ದೂರು ಹಾಗೂ ಗುತ್ತಿಗೆದಾರರು ತಪ್ಪು ಲೆಕ್ಕ ನೀಡುತ್ತಿದ್ದಾರೆ ಎನ್ನುವ ಆರೋಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ ಆಹಾರ ಪೊಟ್ಟಣ ಪ್ಯಾಕಿಂಗ್‌ ಹಾಗೂ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಪಾಲಿಕೆಯಿಂದ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ.

ಈ ಹಿಂದೆ ಇಂದಿರಾ ಕ್ಯಾಂಟೀನ್‌ ಆರಂಭವಾದ ಸಂದರ್ಭದಲ್ಲಿ ಪ್ರತಿಯೊಂದು ಕ್ಯಾಂಟೀನ್‌ಗಳ ಕಿಚನ್‌, ಹೊರ ಭಾಗದಲ್ಲಿ ಎರಡೆರಡು ಸಿಸಿ ಕ್ಯಾಮೆರಾ ಹಾಗೂ ಅಲ್ಲಿಯೇ ಸ್ಟೋರೇಜ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಕೊರತೆ ಪರಿಣಾಮ ಎಲ್ಲವೂ ದುರಸ್ತಿ ಹಂತ ತಲುಪಿದ್ದು, ಕೆಲವೆಡೆ ಇಲಿಗಳು ಕೇಬಲ್‌ ತುಂಡರಿಸಿದ್ದು ಬಹುತೇಕ ಸಿಸಿ ಕ್ಯಾಮೆರಾಗಳು ಚಾಲ್ತಿಯಲ್ಲಿಲ್ಲ. ಹೀಗಾಗಿ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಅವರು ಈಗಾಗಲೇ 9 ಕ್ಯಾಂಟೀನ್‌ಗಳ ಸಿಸಿ ಕ್ಯಾಮೆರಾಗಳ ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ಮಾಡಿಸಿದ್ದು, ಈಗ ಹೊಸದಾಗಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದ್ದಾರೆ.

ಪ್ರಮುಖವಾಗಿ ಆಹಾರ ಪೊಟ್ಟಣ ವಿತರಣೆಗೆ ದೂರುಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಿಚನ್‌ ಹಾಗೂ ಆಹಾರ ಪೊಟ್ಟಣ ಇಡುವ ಸ್ಥಳವನ್ನು ಕೇಂದ್ರೀಕರಿಸಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇನ್ನೂ ಹೊರ ಭಾಗದಲ್ಲಿರುವ ಸಿಸಿ ಕ್ಯಾಮೆರಾಗಳನ್ನು ದುರಸ್ತಿಗೊಳಿಸಿ ಅಲ್ಲಿರುವ ಹಾರ್ಡ್‌ಡಿಸ್ಕ್ನಲ್ಲಿ ಸ್ಟೋರ್‌ ಮಾಡಿಸುವ ಕೆಲಸವೂ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next