ಮದ್ದೂರು: ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧಗ್ರಾಮಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯಗ್ರಾಮಸ್ಥರ ಸಹಕಾರದೊಂದಿಗೆ ಅಗತ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ತಾಲೂಕಿನ ಗೂಳೂರು, ನಂಬಿನಾಯಕನಹಳ್ಳಿ, ದೊಡ್ಡ ಹೊಸಗಾವಿ, ಕೋಡಿಹಳ್ಳಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಸಿಸಿಕ್ಯಾಮೆರಾಗಳನ್ನು ಅಳವಡಿಸಿ ಮನೆ ಕಳ್ಳತನ, ದ್ವಿಚಕ್ರ ವಾಹನ ಕಳವು, ಸರಗಳ್ಳತನ,ಮೇಕೆ,ಕುರಿ,ಜಾನುವಾರುಕಳವುಗಳನ್ನುತಪ್ಪಿಸುವ ಉದ್ದೇಶದಿಂದ ಕೊಪ್ಪ ಪೊಲೀಸರು ಅಗತ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
50ಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಕೆ: ಪೊಲೀಸ್ ಠಾಣಾವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದಿನನಿತ್ಯ ಒಂದಿಲ್ಲೊಂದು ಪ್ರಕರಣಗಳು ಕಂಡು ಬರುತ್ತಿದೆ. ಇದರಿಂದ ಪೊಲೀಸರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ನಿದ್ದೆಗೆಡಿಸಿದ ಪರಿಣಾಮ ಕೊಪ್ಪ ಪೊಲೀಸರು ಪ್ರತಿ ಗ್ರಾಮಸ್ಥರೊಂದಿಗೆ ಚರ್ಚಿಸಿ, ಆರ್ಥಿಕ ನೆರವನ್ನು ಪಡೆದು ಸುಮಾರು20ಕ್ಯಾಮೆರಾಗಳನ್ನು ಅಲವಡಿಸಿದ್ದಾರೆ. ಮುಂದಿನ ದಿನಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧ ತಡೆಗೆ ಮುಂದಾಗಿದ್ದಾರೆ.
ರಾತ್ರಿ ಬಿಟ್ ಪೊಲೀಸ್ ವ್ಯವಸ್ಥೆ: ರಾತ್ರಿ ವೇಳೆ ಬಿಟ್ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಗತ್ಯವಿರುವಗ್ರಾಮಗಳಲ್ಲಿ ಬ್ಯಾರಿಕ್ಯಾಡ್‌ಗಳನ್ನು ಅಳವಡಿಸಿ, ಗ್ರಾಮದ ಒಳಪ್ರವೇಶಿಸುವ ವಾಹನಗಳನ್ನು ನೋಂದಣಿ ಮಾಡಿ ತಪಾಸಣೆಮಾಡಲಾಗುತ್ತಿದೆ. ಅಲ್ಲದೆ, ಅಪರಿಚಿತ ವ್ಯಕ್ತಿಗಳ ಚಲನವಲನದ ಬಗ್ಗೆ ಹೆಚ್ಚಿನ ನಿಗಾಯಿಟ್ಟು ಯಾವುದೇ ಅಪರಾಧ ಪ್ರಕರಣಗಳು ನಡೆಯದಂತೆ ನಿಗಾವಹಿಸಿರುವ ಪೊಲೀಸರಕಾರ್ಯಕ್ಕೆ ಸ್ಥಳೀಯ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.