Advertisement

ಸಾಮಾಜಿಕ ಮಾಧ್ಯಮದಲ್ಲಿ ಫೇಕ್‌ ಲೆಟರ್‌: ಸಿಬಿಎಸ್‌ಇ ಎಚ್ಚರಿಕೆ

11:56 AM Apr 03, 2018 | udayavani editorial |

ಹೊಸದಿಲ್ಲಿ : ಹತ್ತನೇ ತರಗತಿಯ ಗಣಿತ ಪರೀಕ್ಷೆ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೇಕ್‌ ಲೆಟರ್‌ ಬಗ್ಗೆ ಜಾಗೃತೆ ವಹಿಸುವಂತೆ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಎಚ್ಚರಿಕೆ ನೀಡಿದೆ.

Advertisement

ಪರೀಕ್ಷೆ ಕುರಿತಾದ ಯಾವುದೇ ಮಾಹಿತಿಗಳನ್ನು ಅಧಿಕೃತವಾಗಿ ತಿಳಿಯುವುದಕ್ಕೆ ಸಿಬಿಎಸ್‌ಇ ವೆಬ್‌ಸೈಟ್‌  cbse.nic.in ಸಂದರ್ಶಿಸುವಂತೆ ಮಂಡಳಿಯು ಕೇಳಿಕೊಂಡಿದೆ. 

ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರ ಹೆಸರು ಮತ್ತು ಶೈಲಿಯನ್ನೇ ಹೊಂದಿರುವ ನಕಲಿ ಪತ್ರ ವಾಟ್ಸಾಪ್‌ ನಲ್ಲಿ ಹರಿದಾಡುತ್ತಿದ್ದು ಅದನ್ನು ಸಂಬಂಧಿತರೆಲ್ಲರೂ ಕಡೆಗಣಿಸಬೇಕು ಎಂದು ಸಿಬಿಎಸ್‌ಇ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next