Advertisement

ಸಿಬಿಎಸ್‌ಇ ಫ‌ಲಿತಾಂಶ ಶತ ಪ್ರತಿಶತ

11:38 AM May 27, 2018 | Team Udayavani |

ಬೆಂಗಳೂರು: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) 12ನೇ ತರಗತಿಯ ಫ‌ಲಿತಾಂಶ ಶನಿವಾರ ಪ್ರಕಟವಾಗಿದ್ದು, ನಗರದ ಬಹುತೇಕ ಶಾಲೆಗಳು ನೂರಕ್ಕೆ ನೂರರಷ್ಟು ಫ‌ಲಿತಾಂಶ ಪಡೆದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Advertisement

ನಾರಾಯಣ ಸಮೂಹ ಸಂಸ್ಥೆಯ ಅಧೀನದ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಯ ವಿದ್ಯಾರ್ಥಿಗಳಾದ ಎಂ.ಪ್ರಭಾಷ್‌ ರೆಡ್ಡಿ 500ಕ್ಕೆ 487 ಅಂಕ(ಶೇ.97.4), ತುಹಿನ್‌ ಗಿರಿನಾಥ್‌ 500ಕ್ಕೆ 484 ಅಂಕ (ಶೇ.96.8) ಪಡೆದಿದ್ದಾರೆ. ಸಿಎಂಆರ್‌ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿ ಮಧುಲಿಕಾ ಹಾಗೂ ಐಟಿಪಿಎಲ್‌ ಐಕ್ಯ ಶಾಲೆಯ ಎಸ್‌. ಕಾವ್ಯ ತಲಾ ಶೇ.97.2, ಅಭಿಷೇಕ್‌ ಕುಮಾರ್‌ ಸಿಂಗ್‌ ಶೇ.97 ಅಂಕ ಪಡೆದಿದ್ದಾರೆ.

ನಗರದ ಬಹುತೇಕ ಸಿಬಿಎಸ್‌ಇ ಶಾಲೆಗಳು ನೂರಕ್ಕೆ ನೂರಷ್ಟು ಫ‌ಲಿತಾಂಶ ಪಡೆದಿದ್ದು, ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಡೆಲ್ಲಿ ಪಬ್ಲಿಕ್‌ ಶಾಲೆ(ಪೂರ್ವ)ಯ ಯುಕ್ತಿಗುಪ್ತ ವಿಜ್ಞಾನ ವಿಭಾಗದಲ್ಲಿ ಶೇ.96.8, ವಾಣಿಜ್ಯ ವಿಭಾಗದಲ್ಲಿ ಪ್ರೇರಣಾ ಭಟ್‌ ಶೇ.96, ಹ್ಯುಮ್ಯಾನಿಟಿಸ್‌ ವಿಭಾಗದಲ್ಲಿ ಶ್ರೇಯಸ್‌ ಶೇ.97.2ರಷ್ಟು ಅಂಕ ಪಡೆದಿದ್ದಾರೆ.

ಡೆಲ್ಲಿ ಪಬ್ಲಿಕ್‌ ಸ್ಕೂಲ್‌(ದಕ್ಷಿಣ) ವಿಜ್ಞಾನ ವಿಭಾಗದಲ್ಲಿ ಅರೋನ್ಯಾ ಭಕ್ಷಿ, ಆರುಷಿ ಮೋಹನ್‌ ಹಾಗೂ ಶ್ರೇಯಸ್‌ ಸೆಹಗಲ್‌ ತಲಾ ಶೇ.97, ಅವನಿ ತಂತ್ರಿ ಶೇ.96, ಶುವನ್‌ ಮಿತ್ರಾ ಮತ್ತು ಈಶಾನಿ ಶರ್ಮ ತಲಾ ಶೇ.95.8 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಅಭಿಜ್ಞಾನ್‌ ಚಟರ್ಜಿ ಹಾಗೂ ಅಶ್ವಿ‌ನಿ ನಾಗ್‌ ತಲಾ ಶೇ.96.6, ಸೌಮ್ಯ ಬಾಲರವಿಕುಮಾರ್‌ ಶೇ.96.2, ಶಿವನ್‌ ಮಾಥುರ್‌ ಶೇ.95.8, ಹ್ಯುಮ್ಯಾನಿಟಿಸ್‌ ವಿಭಾಗದಲ್ಲಿ ಅಕ್ಷಿತಾ ಗೋಯಲ್‌ ಶೇ.96.2, ಸೀತಲ್‌ ಕುಮಾರ್‌ ಶೇ.95.8 ಹಾಗೂ ಅನಿಶಾ ರೆಡ್ಡಿ ಶೇ.95.2ರಷ್ಟು ಅಂಕ ಪಡೆದಿದ್ದಾರೆ.

Advertisement

ಕೋರಮಂಗಲದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಕನಿಕ ಮಿತ್ತಲ್‌ ಶೇ.97.8, ಮನಿಷ್‌ ಕೌಶಿಕ್‌  ಹಾಗೂ  ಸಿದ್ಧಾರ್ಥ ಗೌತಮ್‌ ತಲಾ ಶೇ.97.2 ಅಂಕವನ್ನು ವಿಜ್ಞಾನ ವಿಭಾಗದಲ್ಲಿ ತೆಗೆದುಕೊಂಡಿದ್ದಾರೆ. ಯಶವಂತಪುರದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಘಾನವಿ ಉಮೇಶ್‌ ಶೇ.97.2, ಎಸ್‌.ವರ್ಷಿಣಿ ಶೇ.95.4, ಜೆ.ಪಿ.ನಗರದ ದಿ ಬ್ರಿಗೇಡ್‌ ಶಾಲೆಯ ನಿಶ್ಚಲ್‌ ಸಿಂಘಲ್‌ ಶೇ.97, ಆಶ್ರಿತಾ ಗೋಪಾಲಕೃಷ್ಣ ಶೇ.96.6, ಕಾರ್ತಿಕ ಸೂರಜ್‌ ವಶಿಷ್ಠ ಶೇ.96.2, ಹೆಬ್ಟಾಳ ಕೇಂದ್ರೀಯ ವಿದ್ಯಾಲಯದ ಎಂ.ಸಿ.ಮೋಹನ್‌ ಶೇ.97.2 ಹಾಗೂ ಎನ್‌.ಆರ್‌.ನವೀನ್‌ ಕುಮಾರ್‌ ಶೇ.96.6 ರಷ್ಟು ಅಂಕ ಪಡೆದಿದ್ದಾರೆ.

ರಾಜ್ಯದಲ್ಲಿ ಸುಮಾರು 1500 ಸಿಬಿಎಸ್‌ಇ ಶಾಲೆಗಳಿದ್ದು ಮೇ.5ರಿಂದ ಏಪ್ರಿಲ್‌ 13ರ ವರೆಗೆ 4,138 ಕೇಂದ್ರದಲ್ಲಿ ನಡೆದ 12ನೇ ತರಗತಿ ಪರೀಕ್ಷೆಯಲ್ಲಿ 11.86 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 6.90 ಲಕ್ಷ ಹುಡುಗರು ಮತ್ತು 4.95 ಲಕ್ಷ ಹುಡುಗಿಯರು ಸೇರಿದ್ದರು.

ಕಠಿಣ ಪರಿಶ್ರಮದ ಫ‌ಲವಾಗಿ ಶೇ.97.4ರಷ್ಟು ಅಂಕ ಪಡೆಯಲು ಸಾಧ್ಯವಾಗಿದೆ. ಇಷ್ಟು ಅಂಕವನ್ನು ನಿರೀಕ್ಷಿಸಿರಲಿಲ್ಲ. ಫ‌ಲಿತಾಂಶ ನೋಡಿದ ನಂತರ ತುಂಬಾ ಖುಷಿಯಾಗಿದೆ. ಓದಿದ ಪಠ್ಯವನ್ನು ನನ್ನ ಗ್ರಹಿಕೆಯಲ್ಲೇ ಮನನ ಮಾಡಿಕೊಳ್ಳುತ್ತಿದೆ. ಐಐಟಿ ಸೇರಿ ವಿದ್ಯಾಭ್ಯಾಸ ಮುಂದುವರಿಸಬೇಕೆಂದಿದ್ದೇನೆ.
-ಎಂ.ಪ್ರಭಾಷ್‌ ರೆಡ್ಡಿ, 500ಕ್ಕೆ 487 ಅಂಕ

ಶೇ.95ರಷ್ಟು ಅಂಕ ಬರಬಹುದು ಎಂಬ ನಿರೀಕ್ಷೆಯಲ್ಲಿದೆ. ಅದಕ್ಕಿಂತ ಜಾಸ್ತಿ ಬಂದಿದೆ. ಓದುವ ಅಥವಾ ಅಧ್ಯಯನದ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಯಾವುದೇ ಒತ್ತಡ ಹೇರಿಲ್ಲ. ಸಮಯವನ್ನು ಸದುಪಯೋಗ ಮಾಡಿಕೊಂಡು ಓದುತ್ತಿದ್ದೆ. ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಪದವಿ ಹಾಗೂ ಉನ್ನತ ವ್ಯಾಸಂಗ ಮಾಡಬೇಕೆಂಬ ಬಯಕೆ ಇದೆ.
-ಮಧುಲಿಕಾ, ಶೇ.97.2ರಷ್ಟು ಅಂಕ

Advertisement

Udayavani is now on Telegram. Click here to join our channel and stay updated with the latest news.

Next