Advertisement

ಸಿಬಿಎಸ್‌ಇ ಆಂತರಿಕ ಮೌಲ್ಯ ಮಾಪನ: ಅವಧಿ ವಿಸ್ತರಣೆ

12:36 AM Jun 08, 2021 | Team Udayavani |

ಹೊಸದಿಲ್ಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು 12ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಮಟ್ಟದ ಅಸೆಸ್ಮೆಂಟ್ಗಳನ್ನು ಜೂ. 11ರ ಒಳಗಾಗಿ ತನ್ನ ವೆಬ್‌ ಸೈಟ್‌ ನಲ್ಲಿ ಅಪ್‌ಲೋಡ್‌ ಮಾಡುವಂತೆ ಶಾಲೆಗಳಿಗೆ ಸೂಚಿಸಿತ್ತು.

Advertisement

ಆದರೆ ಲಾಕ್‌ಡೌನ್‌ನಿಂದಾಗಿ ಅನೇಕ ಶಾಲೆಗಳಿಗೆ ಇದು ಸಾಧ್ಯ ವಾಗಿಲ್ಲ. ಈ ಹಿನ್ನೆಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಗಳ ಪ್ರ್ಯಾಕ್ಟಿಕಲ್‌/ ಇಂಟರ್ನಲ್‌ಅಸೆಸ್ಮೆಂಟ್ ಬಾಕಿಯಿರುವ ಶಾಲೆಗಳಿಗೆ ಈ ಮೌಲ್ಯ ಮಾಪನವನ್ನು ಆನ್‌ಲೈನ್‌ ಆಗಿ ನಡೆಸಿ ಜೂ. 28ರೊಳಗೆ ಅಪ್‌ಲೋಡ್‌ ಮಾಡಲು ಸಿಬಿಎಸ್‌ಇ ಅವಕಾಶ ನೀಡಿದೆ. ಈ ಸಂಬಂಧ ಅದು ಎಲ್ಲ ಸಂಯೋಜಿತ ಶಾಲೆಗಳಿಗೆ ಪತ್ರ ರವಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next