Advertisement

2021 ನೇ ಸಾಲಿನ ಸಿಬಿಎಸ್ಇ 10 ಮತ್ತು 12 ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟ

05:41 PM Feb 02, 2021 | Team Udayavani |

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ನಡೆಸುವ 2021 ನೇ ಸಾಲಿನ 10 ಮತ್ತು 12 ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ  ಬಿಡುಗಡೆಗೊಂಡಿದೆ.

Advertisement

ಕೆಂದ್ರ ಶಿಕ್ಷಣ ಇಲಾಖೆ ಸಚಿವ ರಮೇಶ್ ಪೋಖ್ರಿಯಾಲ್  ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪರೀಕ್ಷೆಗಳು ಮುಂಬರುವ ಮೇ 4 ರಿಂದ ಆರಂಭಗೊಂಡು ಜೂನ್ 10 ಕ್ಕೆ ಕೊನೆಗೊಳ್ಳಲಿದೆ.ವಿದ್ಯಾರ್ಥಿಗಳು ವೆಬ್ ಸೈಟ್ ಮೂಲಕ ವೇಳಾಪಟ್ಟಿಯನ್ನು ನೋಡಬಹುದಾಗಿದೆ.

ಕೇಂದ್ರ ಸಚಿವ ಸುರೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರೀತಿಯ ವಿದ್ಯಾರ್ಥಿಗಳೇ, ಬಹು ದಿನಗಳ ನಿರೀಕ್ಷೆಯ ಸಿಬಿಎಸ್ ಇ 10ನೇ ಮತ್ತು 12ನೇ ತರಗತಿ ಪರೀಕ್ಷೆಯ ದಿನಾಂಕವನ್ನು ಘೋಷಿಸಿದ್ದೇವೆ. ನಿಮಗೆ ಪರೀಕ್ಷೆ ತುಂಬಾ ಸುಗಮವಾಗಿ ನಡೆಯುವಂತೆ ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಿಮಗೆ ಒಳ್ಳೆಯದಾಗಲಿ” ಎಂದು ಉಲ್ಲೇಖಿಸಿದ್ದಾರೆ.

2021ನೇ ಸಾಲಿನಲ್ಲಿ ಸಿಬಿಎಸ್ ಇ ಪರೀಕ್ಷೆಗೆ ಸುಮಾರು 30 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಹತ್ತನೇ ತರಗತಿ ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಔಪಚಾರಿಕವಾಗಿ ಘೋಷಿಸಿದ್ದು, ಈ ವೇಳಾಪಟ್ಟಿ ಅಧಿಕೃತ ವೆಬ್ ಸೈಟ್ (cbse.nic.in)ನಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮೈತ್ರಿಗೆ HDK ಕಂಬಳಿ ಹಾಕಿಕೊಂಡೇ ಕುಳಿತಿದ್ದರು: ಎಚ್‌. ವಿಶ್ವನಾಥ್‌ ವ್ಯಂಗ್ಯ

Advertisement

Advertisement

Udayavani is now on Telegram. Click here to join our channel and stay updated with the latest news.

Next