ಹೊಸದಿಲ್ಲಿ : ಸಿಬಿಎಸ್‌ಇ ಹನ್ನೆರಡನೇ ತರಗತಿಯ ಅಕೌಂಟೆನ್ಸಿ ಪೇಪರ್ ವಾಟ್ಸಾಪ್‌ನಲ್ಲಿ ಲೀಕ್ ಆಗಿದೆ ಎಂದು ವರದಿಗಳು ತಿಳಿಸಿವೆ.
Advertisement
ಸಿಬಿಎಸ್‌ಇ ಅಕೌಂಟೆನ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳಲಾಗಿರುವ ಪ್ರಶ್ನೆ ಪತ್ರಿಕೆಯೊಂದಿಗೆ ತಾಳೆಯಾಗುತ್ತಿದೆ ಎಂದು ದಿಲ್ಲಿ ಸರಕಾರದ ಶಿಕ್ಷಣ ಸಚಿವ ಮನೀಶ್ ಸಿಸೋಡಿಯ ದೃಢೀಕರಿಸಿದ್ದಾರೆ.
ಇಂದು ಅಕೌಂಟೆನ್ಸಿ ಪರೀಕ್ಷೆ ನಡೆಯುತ್ತಿದೆ. ಆದರೆ ಈ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆಯೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳು ಇದೇ ಮಾರ್ಚ್ 5ರಿಂದ ಆರಂಭಗೊಂಡಿವೆ. ಕೊನೇ ಪರೀಕ್ಷೆ ಎ.13ಕ್ಕೆ ನಿಗದಿಯಾಗಿದೆ.