ನವದೆಹಲಿ:ಸಿಬಿಎಸ್ ಇಯ 12ನೇ ತರಗತಿಯ ಫಲಿತಾಂಶವನ್ನು ಜುಲೈ 31ರೊಳಗೆ ಪ್ರಕಟಿಸಲಾಗುವುದು ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಗುರುವಾರ(ಜೂನ್ 17) ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಇದನ್ನೂ ಓದಿ:ಹೆಚ್ ವಿಶ್ವನಾಥ್ ಒಬ್ಬ ಹುಚ್ಚ… ಅವರ ಆರೋಗ್ಯ ತಪಾಸಣೆ ಮಾಡಿಸಬೇಕು: ಎಸ್ .ಆರ್. ವಿಶ್ವನಾಥ್
10 ಮತ್ತು 11ನೇ ತರಗತಿಯ ಅಂತಿಮ ಪರೀಕ್ಷೆಯ ಅಂಕಗಳನ್ನು ಆಧರಿಸಿ ಹಾಗೂ ದ್ವಿತೀಯ ಪಿಯುಸಿ ಪೂರ್ವ ತಯಾರಿ ಪರೀಕ್ಷೆಯ ಫಲಿತಾಂಶದ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಘೋಷಿಸಲಾಗುವುದು ಎಂದು ಹೇಳಿದೆ. ಸಿಬಿಎಸ್ ಇಯ 12 ಮಂದಿ ಸದಸ್ಯರ ಸಮಿತಿಯು ದ್ವಿತೀಯ ಪಿಯುಸಿ ಫಲಿತಾಂಶವನ್ನು 30:30:40ರ ಫಾರ್ಮುಲಾದಂತೆ ಅಂಕಗಳನ್ನು ಪರಿಗಣಿಸಲು ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.
10ನೇ ಮತ್ತು 11ನೇ ತರಗತಿಯ ಅಂತಿಮ ಪರೀಕ್ಷೆಯ ಫಲಿತಾಂಶ ಹಾಗೂ ದ್ವಿತೀಯ ಪಿಯುಸಿಯ ಪೂರ್ವ ತಯಾರಿ ಪರೀಕ್ಷೆಯ ಶೇ.40ರಷ್ಟು ಅಂಕಗಳನ್ನು ಪರಿಗಣಿಸಲಾಗುವುದು. ಪ್ರಾಕ್ಟಿಕಲ್ 100 ಅಂಕಗಳಲಿದ್ದು, ಶಾಲೆಗಳು ನೀಡಿರುವ ಅಂಕಗಳನ್ನು ಪರಿಗಣಿಸಿ ಜುಲೈ 31ರೊಳಗೆ ಸಿಬಿಎಸ್ ಇ ದ್ವಿತೀಯ ಪಿಯುಸಿ ಫಲಿತಾಂಶ ಘೋಷಿಸಲಾಗುವುದು ಎಂದು ವಿವರಿಸಿದೆ.
ಸಿಬಿಎಸ್ ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುವ ಅಂಕಗಳ ಫಾರ್ಮುಲಾದ ಬಗ್ಗೆ ಸುಪ್ರೀಂಕೋರ್ಟ್ ಗೆ ವರದಿಯನ್ನು ಇಂದು ಸಲ್ಲಿಸಿದೆ. ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸುವಂತೆ ಕೋರಿ ವಿದ್ಯಾರ್ಥಿಗಳ ಪೋಷಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.