Advertisement

ಜು.1ರಿಂದ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ

12:26 AM May 19, 2020 | Sriram |

ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು 10 ಮತ್ತು 12ನೇ ತರಗತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಎರಡೂ ತರಗತಿಗಳು ಸೇರಿ ಬಾಕಿ ಇರುವ ಒಟ್ಟು 29 ಪತ್ರಿಕೆಗಳ ಪರೀಕ್ಷೆಗಳು ಜುಲೈ 1ರಿಂದ 15ರ ವರೆಗೆ ನಡೆಯಲಿವೆ.

Advertisement

ಕರ್ನಾಟಕವೂ ಸಹಿತ ದೇಶದೆಲ್ಲೆಡೆ 12ನೇ ತರಗತಿ ಪರೀಕ್ಷೆಗಳು ಜು. 1ರಂದು ಆರಂಭವಾಗಿ ಜು. 11ರಂದು ಮುಕ್ತಾಯ ವಾಗಲಿವೆ. ಈಶಾನ್ಯ ದಿಲ್ಲಿಯಲ್ಲಿ ಮಾತ್ರ 10ನೇ ತರಗತಿ ಹಿಂದಿ, ಇಂಗ್ಲಿಷ್‌, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆ ಬಾಕಿ ಇದ್ದು, ಅಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳು ಜುಲೈ 1ರಿಂದ 15ರ ವರೆಗೆ ನಡೆಯಲಿವೆ.

ವೇಳಾಪಟ್ಟಿ
ಜು.1: ಹೋಮ್‌ ಸೈನ್ಸ್‌
ಜು. 2: ಹಿಂದಿ ಎಲೆಕ್ಟಿವ್‌, ಹಿಂದಿ ಕೋರ್‌
ಜು.7:ಇನ್ಫಾರ್ಮೆಟಿಕ್ಸ್‌ ಪ್ರಾಕ್ಟೀಸ್‌ (ನ್ಯೂ, ಓಲ್ಡ್‌), ಕಂಪ್ಯೂಟರ್‌ ಸೈನ್ಸ್‌ (ನ್ಯೂ, ಓಲ್ಡ್‌), ಇನ್ಫಾರ್ಮೇಷನ್‌ ಟೆಕ್ನಾಲಜಿ
ಜು.9: ಬಿಜಿನೆಸ್‌ ಸ್ಟಡೀಸ್‌
ಜು.10: ಬಯೋಟೆಕ್ನಾಲಜಿ
ಜು.11: ಜಿಯಾಗ್ರಫಿ
ಸಮಯ: ಬೆಳಗ್ಗೆ 10.30 ರಿಂದ ಅಪರಾಹ್ನ 1.30

Advertisement

Udayavani is now on Telegram. Click here to join our channel and stay updated with the latest news.

Next