Advertisement

Electoral Bonds ಮೂಲಕ ಸುದ್ದಿಯಾಗಿದ್ದ ಕಂಪೆನಿಗೆ ಸಿಬಿಐ ಶಾಕ್‌

01:09 AM Apr 14, 2024 | Team Udayavani |

ಹೊಸದಿಲ್ಲಿ: 966 ಕೋಟಿ ರೂ. ಚುನಾವಣ ಬಾಂಡ್‌ ಖರೀದಿಸಿ ಸುದ್ದಿಯಾಗಿದ್ದ ಹೈದರಾಬಾದ್‌ ಮೂಲದ ಮೆಘಾ ಎಂಜಿನಿಯರಿಂಗ್‌ ಕಂಪೆನಿ ವಿರುದ್ಧ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ(ಸಿಬಿಐ) ಎಫ್ಐಆರ್‌ ದಾಖಲಿಸಿದೆ. ಮೆಘಾ ಎಂಜಿನಿಯರಿಂಗ್‌ ಕಂಪೆನಿಯ 2, ಎನ್‌ಐಎಸ್‌ಪಿ ಮತ್ತು ಎನ್‌ಎಂಡಿಸಿಯ 8 ಅಧಿಕಾರಿಗಳನ್ನು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ. ಛತ್ತೀಸ್‌ಗಢದ ಜಗದಲ್‌ಪುರ್‌ ಸ್ಟೀಲ್‌ ಪ್ಲಾಂಟ್‌ ಕೆಲಸಕ್ಕೆ ಸಂಬಂಧಿಸಿದ 174 ಕೋಟಿ ರೂ. ಬಿಲ್‌ ಪಾಸ್‌ ಮಾಡಲು 78 ಲಕ್ಷ ರೂ. ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಫ್ಐಆರ್‌ ದಾಖಲಿಸಲಾಗಿದೆ. ಆರಂಭದ ತನಿಖೆಯಲ್ಲಿ ಗೊತ್ತಾದ ಮಾಹಿತಿಗಳ ಅನುಸಾರ ಎಫ್ಐಆರ್‌ ದಾಖಲಿಸಲು ಮಾರ್ಚ್‌ 18ರಂದು ಶಿಫಾರಸು ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next