ನವದೆಹಲಿ: ಭ್ರಷ್ಟಾಚಾರದ ಆರೋಪದಲ್ಲಿ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ನಿವಾಸದ ಮೇಲೆ ಸಿಬಿಐ ಶುಕ್ರವಾರ (ಜೂನ್ 17) ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಜಿ.ಎಸ್.ಟಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ
ಅಗ್ರಸೇನ್ ಗೆಹ್ಲೋಟ್ ಗೆ ಸೇರಿದ ಕಚೇರಿಗಳ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿರುವುದಾಗಿ ಮೂಲಗಳು ಹೇಳಿದೆ. ಆದರೆ ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಆರೋಪಿಸಿದೆ.
ರಸಗೊಬ್ಬರ ರಫ್ತು ಪ್ರಕರಣದಲ್ಲಿನ ಅಕ್ರಮಕ್ಕಾಗಿ ಈಗಾಗಲೇ ಜಾರಿ ನಿರ್ದೇಶನಾಲಯ ಅಗ್ರಸೇನ್ ಗೆಹ್ಲೋಟ್ ಅವರನ್ನು ವಿಚಾರಣೆ ಎದುರಿಸುತ್ತಿದ್ದು, 2007 ಮತ್ತು 2009ರಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ರಸಗೊಬ್ಬರವನ್ನು ರಫ್ತು ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ರಸಗೊಬ್ಬರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸರಾಫ್ ಇಂಪೆಕ್ಸ್ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವಿರುದ್ಧ ಪ್ರಕರನ ದಾಖಲಿಸಿದೆ. ಅಗ್ರಸೇನ್ ಒಡೆತನದ ಅನುಪಮ್ ಕೃಷಿ ಸಂಸ್ಥೆ ಸರಾಫ್ ಇಂಪೆಕ್ಸ್ ಮೂಲಕ ಪೋಟ್ಯಾಶ್ ಅನ್ನು ರಫ್ತು ಮಾಡಿತ್ತು. ರಫ್ತುಗೊಂಡ ರಸಗೊಬ್ಬರ ರಾಜಸ್ಥಾನದ ರೈತರಿಗೆ ಮೀಸಲಿರಿಸಲಾಗಿತ್ತು ಎಂದು ಇ.ಡಿ. ಹೇಳಿದೆ.