ಶ್ರೀನಗರ; ಕಾನೂನು ಬಾಹಿರವಾಗಿ ಗನ್ ಲೈಸೆನ್ಸ್ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶನಿವಾರ(ಜುಲೈ 24)ದಂದು ಶ್ರೀನಗರದ ಹಿರಿಯ ಐಎಎಸ್ ಅಧಿಕಾರಿ ಶಾಹೀದ್ ಇಕ್ಬಾಲ್ ಚೌಧರಿ ನಿವಾಸ ಸೇರಿದಂತೆ ಜಮ್ಮು, ಕಾಶ್ಮೀರ, ದೆಹಲಿಯ 40 ಪ್ರದೇಶಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿರುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಪಪ್ರಚಾರದ ಹಿಂದೆ ವ್ಯವಸ್ಥಿತ ಷಡ್ಯಂತ್ರ : ಭ್ರಷ್ಟಾಚಾರ ಆರೋಪಕ್ಕೆ ಸಚಿವೆ ಜೊಲ್ಲೆ ಸ್ಪಷ್ಟನೆ
ಜಮ್ಮು-ಕಾಶ್ಮಿರ, ಶ್ರೀನಗರ, ಉದಾಂಪುರ, ರಾಜೌರಿ, ಅನಂತ್ ನಾಗ್ ಮತ್ತು ಬಾರಾಮುಲ್ಲಾ ಪ್ರದೇಶಗಳಲ್ಲಿ ದಾಳಿ ನಡೆಸಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಚೌಧರಿ ಪ್ರಸ್ತುತ ಜಮ್ಮು ಕಾಶ್ಮೀರದ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ ಮತ್ತು ಮಿಷನ್ ಯೂತ್ ನ ಸಿಇಒ ಆಗಿದ್ದಾರೆ.
ಈ ಹಿಂದೆ ಅವರು ಕಥುವಾ, ರಿಯಾಸಿ, ಉದಾಂಪುರ್ ಜಿಲ್ಲೆಯ ರಜೌರಿಯಾಂಡ್ ಪ್ರದೇಶದಲ್ಲಿ ಚೌಧರಿ ಡೆಪ್ಯುಟಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಈ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶದ ಜನರಿಗೆ ನಕಲಿ ಹೆಸರಿನಲ್ಲಿ ಸಾವಿರಾರು ಲೈಸೆನ್ಸ್ ಗಳನ್ನು ನೀಡಿರುವ ಆರೋಪ ಚೌಧರಿ ಎದುರಿಸುತ್ತಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಸುಮಾರು 8ಮಂದಿ ಮಾಜಿ ಡೆಪ್ಯುಟಿ ಕಮಿಷನರ್ ಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ 2012ರಿಂದ ಎರಡು ಲಕ್ಷಕ್ಕೂ ಅಧಿಕ ಗನ್ ಲೈಸೆನ್ಸ್ ಗಳನ್ನು ನೀಡಲಾಗಿದೆ. ಇದು ಭಾರತದ ಅತೀ ದೊಡ್ಡ ಗನ್ ಲೈಸೆನ್ಸ್ ರಾಕೆಟ್ ಎಂದು ನಂಬಲಾಗಿದೆ ಎಂದು ವರದಿ ವಿವರಿಸಿದೆ.