Advertisement
ಹೌದು, ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಹೆಸರಾದ ಡಿ ಕೆ ಶಿವಕುಮಾರ್ ಮತ್ತು ಸಹೋದರ ಡಿ ಕೆ ಸುರೇಶ್ ಮನೆ ಮತ್ತು ಆಸ್ತಿ ಪಾಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿದ್ದುಯ, ರಾಜ್ಯದಲ್ಲಿ ಸಂಚಲನ ಹುಟ್ಟಿಸಿದೆ. ಉಪಚುನಾವಣೆ ಘೋಷಣೆಯಾದ ಬಳಿಕ ದಾಳಿ ನಡೆದಿದ್ದು, ಇದು ಬಿಜೆಪಿಯ ಪ್ರತೀಕಾರದ ತಂತ್ರ ಎಂದು ಕಾಂಗ್ರೆಸ್ ಆರೋಪ ನಡೆಸುತ್ತಿದೆ.
ಉಪಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿದ್ದು, ಇನ್ನಷ್ಟು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಈ ಸಿಬಿಐ ದಾಳಿ ರಾಜಕೀಯ ಪ್ರೇರಿತ, ಉಪಚುನಾವಣೆಯನ್ನು ಎದುರಿಸಲಾಗದ ಬಿಜೆಪಿ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆಪಾದನೆ ಮಾಡುತ್ತಿದೆ. ಈ ವಿಚಾರವನ್ನೇ ಮುಂದಿಟ್ಟು ಚುನಾವಣೆ ಎದುರಿಸಬಹುದು. ರಾಜರಾಜೇಶ್ವರಿ ನಗರದಲ್ಲಿ ಡಿಕೆಶಿ ಮತ್ತು ಸುರೇಶ್ ಪ್ರಭಾವ ಉತ್ತಮವಾಗಿರುವ ಕಾರಣ ಈ ವಿಚಾರವನ್ನು ಮುಂದುಟ್ಟಿಕೊಂಡು ಕಾಂಗ್ರೆಸ್ ಲಾಭ ಪಡೆಯಲು ಪ್ರಯತ್ನಿಸಬಹುದು. ಇದನ್ನೂ ಓದಿ:ಡಿಕೆ ಶಿವಕುಮಾರ್,ಡಿಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿ: ಟ್ರಬಲ್ ಶೂಟರ್ ಗೆ ಮತ್ತೊಂದು ಟ್ರಬಲ್
Related Articles
Advertisement
ಇದನ್ನೂ ಓದಿ:ಡಿಕೆ ಶಿವಕುಮಾರ್ ದೊಡ್ಡಾಲಹಳ್ಳಿಯ ಮನೆ ಲಾಕರ್ ಒಡೆದಾಗ ಸಿಕ್ಕಿದ್ದು ಚಿಲ್ಲರೆ ಮಾತ್ರ!
ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಆರ್.ಆರ್ ನಗರ ಕ್ಷೇತ್ರವೂ ಡಿಕೆ ಸುರೇಶ್ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಬರುವ ಕಾರಣ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕು ಎಂದ ಡಿಕೆ ಬ್ರದರ್ಸ್ ಪಣತೊಟ್ಟವರಂತೆ ಕೆಲಸ ಮಾಡುತ್ತಿದ್ದಾರೆ. ಇದು ಅವರಿಗೆ ಪ್ರತಿಷ್ಠೆಯ ಕಣವೂ ಹೌದು. ಸದ್ಯ ದಾಳಿಯ ನಂತರ ವಿಚಾರಣೆ ಯ ತೀವ್ರತೆ ಜಾಸ್ತಿಯಾದರೆ, ಇಬ್ಬರಿಗೂ ಉಪಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ತೊಡಕಾಗಬಹುದು. ಇದು ಸಹಜವಾಗಿಯೇ ಕಾಂಗ್ರೆಸ್ ಗೆ ಹಿನ್ನೆಯಾಗುತ್ತದೆ. ಇದರ ಲಾಭ ಬಿಜೆಪಿ ಮತ್ತು ಜೆಡಿಎಸ್ ಪಡೆಯುತ್ತದೆ.