Advertisement

ಮಮತಾ ಆಪ್ತನ ವಿರುದ್ಧ ವ್ಯಾಪಕ ಆಕ್ರೋಶ; ಕೋರ್ಟ್ ಬಳಿ ಚಪ್ಪಲಿ ಪ್ರದರ್ಶನ

07:28 PM Aug 11, 2022 | Team Udayavani |

ಕೋಲ್ಕತ : ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಗುರುವಾರ ಬಂಧನಕ್ಕೊಳಗಾಗಿರುವ ಟಿಎಂಸಿ ಭಿರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮಂಡಲ್ ನನ್ನು ಅಸನ್ಸೋಲ್‌ನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಈ ವೇಳೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು, ಕೆಲವರು ಚಪ್ಪಲಿಗಳನ್ನು ಪ್ರದರ್ಶಿಸಿ ಧಿಕ್ಕಾರ ಕೂಗಿದ್ದಾರೆ.

Advertisement

ಜನರು ಶೂಗಳನ್ನು ತೋರಿಸುತ್ತಾ, ‘ಚೋರ್, ಚೋರ್’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ್ದಾರೆ. ಕೋರ್ಟ್ ಬಳಿ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.

ಮಂಡಲ್ ನನ್ನು ಬೋಲ್ಪುರ್ ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಹಿಂದೆ ಹತ್ತು ಬಾರಿ ಸಮನ್ಸ್ ಜಾರಿ ಮಾಡಿದ್ದರೂ, ಒಂದು ಬಾರಿ ಮಾತ್ರ  ವಿಚಾರಣೆಗೆ ಹಾಜರಾಗಿದ್ದು, ತನಿಖೆಗೆ ಸಹಕರಿಸದ ಆರೋಪದ ಮೇಲೆ  ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆಯಿಂದ ಪ್ರತಿಭಟನೆ

ನಮಗೆ ಈಗ ನ್ಯಾಯಾಂಗದ ಮೇಲೆ ಮಾತ್ರ ನಂಬಿಕೆ ಇದೆ. ನಾಳೆಯಿಂದ ಟಿಎಂಸಿ ಯುವ ಮತ್ತು ವಿದ್ಯಾರ್ಥಿ ಘಟಕಗಳು ಇ ಡಿ ಮತ್ತು ಸಿಬಿಐ ಯ ವಿರುದ್ಧ ಪ್ರತಿ ಜಿಲ್ಲೆಯಲ್ಲಿ ಪ್ರತಿಭಟಿಸಲಿವೆ ಎಂದು ಟಿಎಂಸಿ ನಾಯಕಿ,ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ.

Advertisement

ಆಡಳಿತ ಪಕ್ಷಕ್ಕೆ ಸೇರಿ, ಎಲ್ಲರಿಗೂ ಇದೇ ರೀತಿಯ ಕ್ರಮಗಳನ್ನು ನಾವು ನಿರೀಕ್ಷಿಸುತ್ತೇವೆ. ಅವರ ಮೇಲೂ ಹಲವಾರು ಆರೋಪಗಳಿದ್ದರೂ ಏನೂ ಆಗುತ್ತಿಲ್ಲ. ಹಿಮಂತ ಬಿಸ್ವಾ ಶರ್ಮಾ ಅವರ ಹೆಸರನ್ನು ಜಾರ್ಖಂಡ್ ಶಾಸಕರು ತೆಗೆದುಕೊಂಡಿದ್ದಾರೆ ಆದರೆ ಯಾವುದೇ ಸಿಬಿಐ, ಇಡಿ ಅದರ ಮೇಲೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಚಂದ್ರಿಮಾ ಕಿಡಿ ಕಾರಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ನಾವು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಜನರ ಬೆಂಬಲ ಪಡೆದು ಮೂರು ಬಾರಿ ಗೆದ್ದಿದ್ದೇವೆ. ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾವು ನಿಷ್ಪಕ್ಷಪಾತ ಮುಖಗಳನ್ನು ನಿರೀಕ್ಷಿಸುತ್ತೇವೆ, ಈ ಸಂಸ್ಥೆಗಳು ನಿಷ್ಪಕ್ಷಪಾತ ಮುಖಗಳನ್ನು ಏಕೆ ಕಳೆದುಕೊಳ್ಳುತ್ತಿವೆ ಎಂದು ಚಂದ್ರಿಮಾ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next