Advertisement

ಸಿಬಿಐ ಅಧಿಕಾರಿ ವರ್ಗ

12:40 AM Jan 28, 2019 | Team Udayavani |

ಹೊಸದಿಲ್ಲಿ: ಐಸಿಐಸಿಐ ಬ್ಯಾಂಕ್‌ ಹಗರಣದ ತನಿಖೆಯ ವಿಚಾರಗಳನ್ನು ಸೋರಿಕೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ತನ್ನ ಅಧಿಕಾರಿ ಸುಧಾಂಶು ಧಾರ್‌ ಮಿಶ್ರಾ ಅವರನ್ನು ಸಿಬಿಐ ವರ್ಗಾವಣೆ ಮಾಡಿದೆ. 

Advertisement

ಸಿಬಿಐನ ಬ್ಯಾಂಕಿಂಗ್‌ ಮತ್ತು ಸೆಕ್ಯೂರಿಟೀಸ್‌ ವಂಚನೆ ಪ್ರಕರಣಗಳ ವಿಭಾಗದಲ್ಲಿ ವರಿಷ್ಠಾಧಿಕಾರಿಯಾಗಿದ್ದ ಅವರನ್ನು ಈಗ ರಾಂಚಿಯಲ್ಲಿರುವ ಹಣಕಾಸು ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಶುಕ್ರವಾರವಷ್ಟೇ, ಐಸಿಐಸಿಐ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಚಂದಾ ಕೊಚ್ಚಾರ್‌, ಅವರ ಪತಿ ದೀಪಕ್‌ ಕೊಚ್ಚಾರ್‌ ಮತ್ತು ವಿಡಿಯೋಕಾನ್‌ ಕಂಪೆನಿಯ ಮುಖ್ಯಸ್ಥ ವೇಣುಗೋಪಾಲ್‌ ಧೂತ್‌ ವಿರುದ್ಧ ಪ್ರಕರಣ ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next