ಪಾಟ್ನಾ: ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದು, ಅವರಿಗೆ ನೀಡಲಾಗಿರುವ ಜಾಮೀನನ್ನು ವಾಪಸು ಪಡೆಯಬೇಕು ಎಂದು ದೆಹಲಿ ಕೋರ್ಟ್‌ಗೆ ಸಿಬಿಐ ಕೇಳಿದೆ.
ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಮತ್ತು ಅವರ ತಾಯಿ ರಾಬ್ರಿ ದೇವಿ ಅವರಿಗೆ ನ್ಯಾಯಾಲಯ 2018ರಲ್ಲಿಯೇ ಜಾಮೀನು ನೀಡಿದೆ.
ಆದರೆ ತೇಜಸ್ವಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸಿಬಿಐ ಅಧಿಕಾರಿಗಳಿಗೆ ಬೆದರಿಕೆ ಹಾಕುವಂತೆ ಮಾತನಾಡಿದ್ದಾರೆ.
ಹಾಗಾಗಿ ಅವರಿಗೆ ನೀಡಲಾಗಿರುವ ಜಾಮೀನನ್ನು ವಾಪಸು ಪಡೆಯಬೇಕೆಂದು ಸಿಬಿಐ ಕೋರಿದೆ.
ಈ ವಿಚಾರವಾಗಿ ನ್ಯಾಯಮೂರ್ತಿ ಗೀತಾಂಜಲಿ ಗೋಯೆಲ್ ಅವರನ್ನೊಳಗೊಂಡ ನ್ಯಾಯಪೀಠವು ತೇಜಸ್ವಿ ಅವರಿಗೆ ನೋಟಿಸ್ ಕೊಟ್ಟಿದ್ದು, ಪ್ರತಿಕ್ರಿಯೆ ಕೇಳಿದೆ.