Advertisement
2 ವಾರಗಳ ಅವಕಾಶ: ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ತಮ್ಮನ್ನು ಬಲವಂತವಾಗಿ ರಜೆಯ ಮೇಲೆ ಕಳುಹಿಸಿ ದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ನಡೆಸಿತು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಉಸ್ತು ವಾರಿ ಸಿವಿಸಿ ಅಲೋಕ್ ಕುಮಾರ್ ವರ್ಮಾ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು. 2 ವಾರಗಳ ಒಳಗಾಗಿ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು. ಜತೆಗೆ ಕೇಂದ್ರ ಸರಕಾರ, ಸಿವಿಸಿಗೆ ನೋಟೀಸ್ ನೀಡಿದೆ.
Related Articles
Advertisement
ಇದೇ ವೇಳೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ತಮ್ಮ ಕಕ್ಷಿದಾರನ ವಾದವನ್ನೂ ಕೇಳಬೇಕು ಎಂದರು. “ನಮ್ಮ ಮುಂದೆ ಇರದ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ರಾಹುಲ್ ನೇತೃತ್ವದಲ್ಲಿ ಪ್ರತಿಭಟನೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಿಬಿಐ ಕೇಂದ್ರ ಕಚೇರಿಯಿಂದ 4.2 ಕಿಮೀ ದೂರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ತೃಣಮೂಲ ಕಾಂಗ್ರೆಸ್, ಸಿಪಿಎಂ ಮತ್ತು ಇತರ ಪಕ್ಷದ ನಾಯಕರು ಕಾಂಗ್ರೆಸ್ ಅಧ್ಯಕ್ಷರ ಜತೆ ಇದ್ದರು. ಇದೇ ಸಂದರ್ಭದಲ್ಲಿ ಪೊಲೀಸರು ಪ್ರತಿಪಕ್ಷಗಳ ನಾಯಕರು ಸಿಬಿಐ ಕಚೇರಿಯತ್ತ ತೆರಳಲು ಮುಂದಾದವರನ್ನು ಬ್ಯಾರಿಕೇಡ್ ಹಾಕಿ ತಡೆದರು. ಒಂದು ಹಂತದಲ್ಲಿ ರಾಹುಲ್ ಬ್ಯಾರಿಕೇಡ್ ಮೇಲೆ ಹತ್ತಿ ಕುಳಿತಿದ್ದರು. ರಾಹುಲ್, ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋಟ್ ಮತ್ತು ಇತರರು ಹೊಸದಿಲ್ಲಿಯ ಲೋಧಿ ಪೊಲೀಸ್ ಠಾಣೆಗೆ ತೆರಳಿ ಬಂಧನಕ್ಕೊಳಗಾದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ “ಹೆದರಿಕೆಯಿಂದಾಗಿಯೇ ಪ್ರಧಾನಿ ಸಿಬಿಐ ಮುಖ್ಯಸ್ಥರನ್ನು ವಜಾ ಮಾಡಿದ್ದಾರೆ. ರಫೇಲ್ ಡೀಲ್ ಬಗ್ಗೆ ಅವರು ತನಿಖೆ ಮಾಡುವುದರಲ್ಲಿದ್ದರು. ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ. ಮೊತ್ತದ ಡೀಲ್ ನೀಡಿದ್ದ ಬಗ್ಗೆ ಸತ್ಯ ಹೊರ ಬೀಳುವುದರಲ್ಲಿತ್ತು ಎಂದಿದ್ದಾರೆ. ಚೌಕಿದಾರ ಕಳ್ಳನಾಗಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಸ್ವಾಗತಾರ್ಹ. ಯಾವುದೇ ವ್ಯಕ್ತಿ ವಿರುದ್ಧ ಸರಕಾರ ಇಲ್ಲ. ಜತೆಗೆ ಯಾವುದೇ ಹಿತಾಸಕ್ತಿಯನ್ನೂ ಹೊಂದಿಲ್ಲ. ಇತ್ತೀಚಿನ ಬೆಳವಣಿಗೆಗಳು ಸಿಬಿಐನ ವಿಶ್ವಾಸಾರ್ಹತೆ ತಗ್ಗಿಸಿದೆ. ಇಬ್ಬರು ಅಧಿಕಾರಿಗಳ ವಿರುದ್ಧದ ಆರೋಪ ತನಿಖೆಯಾಗುವ ವರೆಗೆ ಸಿವಿಸಿ ಅವರನ್ನು ರಜೆಯ ಮೇಲೆ ತೆರಳುವಂತೆ ಸೂಚಿಸಿದೆ.
ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದ್ದು ಸಮಾಧಾನ ತಂದಿದೆ. ಈ ಕ್ರಮ ದಿಂದಲಾದರೂ ಕೇಂದ್ರ ತನಿಖಾ ಸಂಸ್ಥೆಯ ನಂಬಿಕೆ ಮರು ಸ್ಥಾಪನೆ ಯಾಗುತ್ತದೆ ಎಂಬ ವಿಶ್ವಾಸವಿದೆ.
ಅರವಿಂದ ಕೇಜ್ರಿವಾಲ್,ದಿಲ್ಲಿ ಮುಖ್ಯಮಂತ್ರಿ