Advertisement

ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್‌

11:34 AM Dec 23, 2017 | Team Udayavani |

ಬೆಂಗಳೂರು: ಕೃಷಿ ಸಾಲದ ಹೆಸರಿನಲ್ಲಿ ರೈತರನ್ನು ವಂಚಿಸುತ್ತಿದ್ದ ಇಬ್ಬರು ಯುಕೋ ಬ್ಯಾಂಕ್‌ ಸಿಬ್ಬಂದಿ ವಿರುದ್ಧ ಸಿಬಿಐ ಎಫ್ಐಆರ್‌ ದಾಖಲಿಸಿದೆ. 

Advertisement

ಶಿವಮೊಗ್ಗದ ಕಾರ್ಪೋರೇಷನ್‌ ಬ್ಯಾಂಕ್‌ನ ಫೀಲ್ಡ್‌ ಅಧಿಕಾರಿ ಮಧುಸೂದನ್‌, ಹರಮಘಟ್ಟ ಗ್ರಾಮದ ಹರೀಶ್‌ ಹಾಗೂ ಇತರರೆ ಬ್ಯಾಂಕ್‌ ಸಿಬ್ಬಂದಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಶಿವಮೊಗ್ಗದ ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ರೈತರ ಸಾಲದ ಹೆಸರಿನಲ್ಲಿ ಸುಮಾರು ನಾಲ್ಕು ಕೋಟಿ ರೂ. ವಂಚನೆ ನಡೆದಿತ್ತು. ಆರೋಪಿಗಳು 2014-16ನೇ ಸಾಲಿನಲ್ಲಿ 42 ಮಂದಿ ರೈತರಿಗೆ ಸಾಲ ಕೊಡಿಸುವುದಾಗಿ ನಂಬಿಸಿ, ರೈತರಿಂದ ದಾಖಲೆ ಪತ್ರಗಳನ್ನು ಪಡೆದುಕೊಂಡಿದ್ದರು. ಇದೇ ವೇಳೆ ಕೆಲ ಖಾಲಿ ಚೆಕ್‌ಗಳಿಗೂ ಸಹಿ ಮಾಡಿಸಿ ಕೊಂಡಿದ್ದರು.

 ರೈತರ ಖಾತೆಗೆ ಸಾಲದ ಹಣ ಪಾವತಿಯಾಗುತ್ತಿದ್ದಂತೆ, ಸಹಿ ಮಾಡಿಸಿಕೊಂಡಿದ್ದ ಚೆಕ್‌ಗಳ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಇದು ರೈತರಿಗೆ ತಿಳಿಯುವ ಮೊದಲೇ ಆರೋಪಿಗಳು ಅಮಾಯಕ ರೈತರ ಖಾತೆಯಿಂದ 447.53 ಲಕ್ಷ ಹಣ ದೋಚಿದ್ದರು. ಈ ಸಂಬಂಧ ಹಣ ವರ್ಗಾವಣೆ ಕುರಿತು ರೈತರಿಂದ ಬಂದ ದೂರಿನ್ವಯ ಬೆಂಗಳೂರಿನ ಕಾರ್ಪೋರೇಷನ್‌ ಬ್ಯಾಂಕ್‌ನ ಹಿರಿಯ ಅಧಿಕಾರಿ ಸಿಬಿಐನಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಸಿಬಿಐ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next