Advertisement

ಪ್ರಧಾನಿ ಸೇರಿ ಐವರ ವಿರುದ್ಧ ಸಿಬಿಐಗೆ ದೂರು 

06:00 AM Sep 05, 2018 | |

ಬೆಂಗಳೂರು: ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯಲ್ಲಿ ರೈತರ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಮಾ ಕಂಪನಿಗೆ ಸಾವಿರಾರು ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆಂದು ಆರೋಪಿಸಿ, ಪ್ರಧಾನಿ ಹಾಗೂ ಯುನಿವರ್ಸಲ್‌ ಸೊಂಪೊ ವಿಮಾ ಕಂಪನಿ ವಿರುದ್ಧ  ತನಿಖೆ ನಡೆಸುವಂತೆ ಕಾಂಗ್ರೆಸ್‌ ಸಿಬಿಐಗೆ ದೂರು ನೀಡಿದೆ.

Advertisement

ಕರ್ನಾಟಕ ಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮೀಗಾ ದೂರು ನೀಡಿದ್ದು, ಈ ಅವ್ಯವಹಾರದಲ್ಲಿ ಐವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಮೋದಿ ಮೊದಲ ಆರೋಪಿಯಾಗಿದ್ದಾರೆ. ಜತೆಗೆ, ಅದಾನಿ ಕಂಪನಿಯ ಗೌತಮ್‌ ಅದಾನಿ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌
ಸಿಂಗ್‌, ಯುನಿವರ್ಸಲ್‌ ಸೊಂಪೊ ವಿಮಾ ಕಂಪನಿಯ ಎಂ.ಡಿ.ರಾಜೀವ್‌ ಕುಮಾರ್‌ ಹಾಗೂ ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಶೋಭನಾ ಕುಮಾರ್‌ ಪಟ್ಟನಾಯಕ್‌ ವಿರುದ್ಧ ವೂ ದೂರು ನೀಡಲಾಗಿದೆ. 

ಸಿಎಜಿ ವರದಿ ಪ್ರಕಾರ 2017ರ ಏಪ್ರಿಲ್‌ನಲ್ಲಿ ವಿಮಾ ಕಂಪನಿ 15,891 ಕೋಟಿ ರೂ. ಸಂಗ್ರಹಿಸಿದೆ. ಅದಕ್ಕೆ ಬದಲಾಗಿ ರೈತರಿಗೆ 5,962 ಕೋಟಿ ರೂ.ಪರಿಹಾರ ನೀಡಿದೆ. ವಿಮಾ ಕಂಪನಿ ಸುಮಾರು 10 ಸಾವಿರ ಕೋಟಿ ರೂ. ಲಾಭ ಮಾಡಿಕೊಡಲಾಗಿದೆ. ದೇಶದಲ್ಲಿ ರೈತರು ಬೆಳೆ ನಷ್ಟದಿಂದ
ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿಯವರು ಗೌತಮ್‌ ಅದಾನಿ ಕಂಪನಿಗೆ ಲಾಭ ಮಾಡಿಕೊಡುವ ಮೂಲಕ ರಾಜ್ಯ ಹಾಗೂ ದೇಶದ ರೈತರಿಗೆ ಮೋಸ ಮಾಡಿದ್ದಾರೆ. ಹೀಗಾಗಿ, ಅವರ ವಿರುದಟಛಿ ಎಫ್ಐಆರ್‌ ದಾಖಲಿಸಿ ತನಿಖೆ ನಡೆಸಬೇಕೆಂದು ದೂರಿನಲ್ಲಿ
ಆಗ್ರಹಿಸಿದ್ದಾರೆ.

ಯೋಜನೆಯ ಅವ್ಯವಹಾರದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರಧಾನಮಂತ್ರಿ ಫ‌ಸಲ್‌ ಭಿಮಾ ಯೋಜನೆಯಲ್ಲಿ ರೈತರು ಮತ್ತು ಸರ್ಕಾರದಿಂದ ವಿಮಾ ಕಂಪನಿ ರಾಜ್ಯದಲ್ಲಿ 1,800  ಕೋಟಿ ರೂ.ಪ್ರಿಮಿಯಂ ಸಂಗ್ರಹಿಸಿದೆ. ಆದರೆ, ವಿಮಾ
ಪರಿಹಾರವಾಗಿ ಕೇವಲ 300 ಕೋಟಿ ರೂಪಾಯಿಗಳನ್ನು ಮಾತ್ರ ರೈತರಿಗೆ ನೀಡಲಾಗಿದೆ. ರೈತರು ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟ ಅನುಭವಿಸಿದರೆ ಅವರಿಗೆ ಅನುಕೂಲವಾಗಬೇಕೆಂದು ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಸಿಎಜಿ ವರದಿ ಪ್ರಕಾರ ಈ ಯೋಜನೆಯಿಂದ ಇನ್ಸುರೆನ್ಸ್‌ ಕಂಪನಿಗೆ ಲಾಭ ಮಾಡಿಕೊಡ ಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಸಾಲ ಪಡೆಯುವ ರೈತರು ಕಡ್ಡಾಯವಾಗಿ ವಿಮಾ ಕಂತು ಕಟ್ಟಬೇಕು ಎಂಬ ನಿಯಮ ಹಾಕಿರುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರವೂ ಈ ಯೋಜನೆಗೆ ತನ್ನ ಪಾಲಿನ ಕಂತು ಕಟ್ಟುತ್ತಿದ್ದು, ರೈತರಿಗೆ ಅನ್ಯಾಯವಾಗುವ ಈ ಯೋಜನೆ ಯಿಂದ ಹೊರ ಬರುವ ಕುರಿತಂತೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸುವುದಾಗಿ ಈಶ್ವರ್‌ ಖಂಡ್ರೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next