Advertisement

Manipur ; ಇಬ್ಬರು ವಿದ್ಯಾರ್ಥಿಗಳ ನಾಪತ್ತೆ ಹಿಂದಿದ್ದ ‘ಮಾಸ್ಟರ್ ಮೈಂಡ್’ ಬಂಧಿಸಿದ ಸಿಬಿಐ

07:37 PM Oct 13, 2023 | Team Udayavani |

ಪುಣೆ: ನಾಪತ್ತೆಯಾಗಿದ್ದ ಇಬ್ಬರು ಮಣಿಪುರಿ ವಿದ್ಯಾರ್ಥಿಗಳ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ 22 ವರ್ಷದ ಆರೋಪಿಯನ್ನು ಪುಣೆಯಲ್ಲಿ ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ಮಾಹಿತಿದಾರರು ಮತ್ತು ತಾಂತ್ರಿಕ ಕಣ್ಗಾವಲುಗಳನ್ನು ಬಳಸಿಕೊಂಡು ಅಪರಾಧಿಗಳನ್ನು ಬಂಧಿಸಲು ವ್ಯಾಪಕ ಕಾರ್ಯಾಚರಣೆಯನ್ನು ಆರಂಭಿಸಿದ ಸಿಬಿಐ, ರಾಜ್ಯದಲ್ಲಿ ಹೊಸ ಸುತ್ತಿನ ಪ್ರತಿಭಟನೆಗೆ ಕಾರಣವಾದ ಘಟನೆಯ ಹಿಂದೆ ಮಾಸ್ಟರ್‌ಮೈಂಡ್ ಎಂದು ನಂಬಲಾದ ಪಾಲುನ್‌ಮಾಂಗ್‌ನ ಕೈವಾಡದ ಬಗ್ಗೆ ತಿಳಿದು ಬಂದಿದೆ.

ಈತನ ಪತ್ತೆಗೆ ನಿಗಾ ವಹಿಸಿದ್ದ ವಿಶೇಷ ತನಿಖಾ ತಂಡಕ್ಕೆ ಆತ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿರುವ ಬಗ್ಗೆ ತಿಳಿದು ಬಂದಿದ್ದು, ಆತನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next