ಬೆಂಗಳೂರು: ಶ್ರೀಲಂಕಾ ಮೂಲದ ಆರೋಪಿಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತಿಬ್ಬರು ಸಿಸಿಬಿ ಬಲೆಗೆ ಬಿದ್ದಿದ್ದು, ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಬಂಧಿತರಿಂದ 57 ಲಕ್ಷ ರೂ. ನಗದು ಹಾಗೂ 1.5 ಕೋಟಿ ಡಿಡಿ ಜಪ್ತಿ ಮಾಡಲಾಗಿದೆ.
ಚೆನ್ನೈ ಮೂಲದ ಮನ್ಸೂರ್, ಬೆಂಗಳೂರಿನ ವಿವೇಕ ನಗರದ ಅ ಅನ್ಬು ಅಳಗನ್ ಬಂಧಿತರು.
ಶ್ರೀಲಂಕಾ ಮೂಲದ ಬಂಧಿತ ಆರೋಪಿಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಅಗತ್ಯ ಖರ್ಚು ವೆಚ್ಚಕ್ಕಾಗಿ ಆರೋಪಿ ಮಾನ್ಸೂರ್ 57 ಲಕ್ಷ ರೂ. ಹೊಂದಿಸಿ ಆರೋಪಿಗಳಿಗೆ ತಲುಪಿಸಲು ಸಿದ್ಧತೆ ನಡೆಸಿದ್ದ. ದುಡ್ಡು ಕೈ ಸೇರುತ್ತಿದ್ದಂತೆ ಬೆಂಗಳೂರಿನಿಂದ ನೇಪಾಳದಲ್ಲಿರುವ ಸಂಜೀವ್ ಎಂಬಾತನ ಜತೆಗೆ ತೆರಳಲು ಆರೋಪಿಗಳು ತಯಾರಿ ನಡೆಸಿದ್ದರು. ಸಂಜೀವ್ ಜತೆಗೆ ಸಿಂಹಳೀಯ ಭಾಷೆಯಲ್ಲಿ ಆರೋಪಿಗಳು ನಡೆಸಿರುವ ಮೊಬೈಲ್ ಸಂಭಾಷಣೆ ತನಿಖೆ ವೇಳೆ ಪತ್ತೆಯಾಗಿದೆ.
ಒಮನ್‌ನಲ್ಲಿದ್ದ ಕಿಂಗ್‌ಪಿನ್ ಜಲಾಲ್ ಬೆಂಗಳೂರಿನಲ್ಲಿರುವ ಆರೋಪಿಗಳಿಗೆ 50 ಲಕ್ಷ ರೂ. ನೀಡುವಂತೆ ಮನ್ಸೂರ್‌ಗೆ ತಿಳಿಸಿದ್ದ. ಆರೋಪಿಗಳಿಗೆ ಸಮುದ್ರ ಮಾರ್ಗದ ಮೂಲಕ ಬೆಂಗಳೂರಿಗೆ ಬರಲು ನೆರವಾಗಿದ್ದ ಜಲಾಲ್‌ನ ಮಾರ್ಗದರ್ಶನದಂತೆ ಮನ್ಸೂರ್ ಕಾರ್ಯ ನಿರ್ವಹಿಸುತ್ತಿದ್ದ. ಅನ್ಬು ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ಸಿದ್ಧಪಡಿಸಿ ಆರೋಪಿಗಳಿಗೆ ಕೊಡುವ ಕಾರ್ಯದಲ್ಲಿ ತೊಡಗಿದ್ದ. ಅದಕ್ಕೆ ಬೇಕಾದ ದಾಖಲೆ ಸಿದ್ಧಪಡಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಜಲಾಲ್‌ಗೂ ಈತನೇ ಪಾಸ್‌ಪೋರ್ಟ್ ವ್ಯವಸ್ಥೆ ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದೆ. ಆರೋಪಿ ಮನ್ಸೂರ್ ಚೆನ್ನೈನಿಂದಲೇ ಅನುºಗೆ ಹಣಕಾಸಿನ ನೆರವು ನೀಡುತ್ತಿದ್ದ.
ಸಂಜೀವ್ ಎಲ್ ಟಿಟಿಇ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಬಂಧಿತ ಶ್ರೀಲಂಕಾ ಆರೋಪಿಗಳು ಎಕೆ -47 ಬಳಸುವುದರ ಕುರಿತು ತರಬೇತಿ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಜಲಾಲ್ ಶ್ರೀಲಂಕಾದ ಕುಖ್ಯಾತ ಡ್ರಗ್ಸ್ ದಂಧೆಕೋರನಾಗಿ ಗುರುತಿಸಿಕೊಂಡಿದ್ದ. ಭಾರತದಲ್ಲಿ ಆತನಿಗೆ ಒಂದು ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆಯಾಗಿದೆ. ಭಾರತದಲ್ಲಿಯೂ ಆತ ವಾಂಟೆಡ್ ಪಟ್ಟಿಯಲಿದ್ದಾನೆ.